ಆ್ಯಪ್ನಗರ

ಅನಕೊಂಡವನ್ನು ನೀರಿನಿಂದ ಮೇಲಕ್ಕೆ ಎಳೆಯಲು ಕರಿಚಿರತೆಯ ಶತಪ್ರಯತ್ನ : ಭಯಾನಕ ವಿಡಿಯೋ ವೈರಲ್

ಇದೊಂದು ಭಯಾನಕ ವಿಡಿಯೋ. ಸದ್ಯ ಈ ಹಳೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ನೆಟ್ಟಿಗರು ಬಲು ಕುತೂಹಲದಿಂದಲೇ ಈ ವಿಡಿಯೋವನ್ನು ವೀಕ್ಷಿಸುತ್ತಿದ್ದಾರೆ.

Vijaya Karnataka Web 12 Jan 2021, 12:49 pm
ಇದೊಂದು ಭಯಾನಕ ಹೊಡೆದಾಟ. ಒಂದು ಜೀವಕ್ಕೆ ಪ್ರಾಣ ಉಳಿಸಿಕೊಳ್ಳುವ ತವಕ, ಮತ್ತೊಂದಕ್ಕೆ ಬೇಟೆಯಾಡುವ ಹುಮ್ಮಸ್ಸು... ಈ ಭಯಾನಕ ಬೇಟೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದಕ್ಷಿಣ ಅಮೇರಿಕಾದ ಹಸಿರು ಅನಕೊಂಡ ವಿಶ್ವದಲ್ಲಿಯೇ ಅತಿ ದೊಡ್ಡ ಹಾವು. ಕರಿಚಿರತೆ ಕೂಡಾ ಅಷ್ಟೇ ಬಲಶಾಲಿ. ಇಂತಹ ಎರಡು ಬಲಶಾಲಿಗಳು ಪರಸ್ಪರ ಎದುರಾದರೆ ಅಲ್ಲಿನ ಚಿತ್ರಣ ಹೇಗಿರುತ್ತದೆ...? ಖಂಡಿತಾ ಬಹುತೇಕ ಸಂದರ್ಭದಲ್ಲಿ ಅಲ್ಲೊಂದು ಘನಘೋರ ಯುದ್ಧವೇ ನಡೆಯುತ್ತದೆ... ಇದು ಕೂಡಾ ಅಂತಹದ್ದೇ ಕದನದ ಭಯಾನಕ ದೃಶ್ಯ.
Vijaya Karnataka Web Image by Ian Lindsay from Pixabay
| Representative image | Image by Ian Lindsay from Pixabay


ಹಸಿರು ಅನಕೊಂಡವನ್ನು ಕರಿಚಿರತೆಯೊಂದು ನೀರಿನಿಂದ ಮೇಲಕ್ಕೆತ್ತಲು ಶತಪ್ರಯತ್ನ ಮಾಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯವೇ ಭಯಾನಕವಾಗಿದೆ. ಕರಿಚಿರತೆಯ ಬಾಯಿಯಿಂದ ತಪ್ಪಿಸಿಕೊಳ್ಳಲು ಅನಕೊಂಡ ಶತಪ್ರಯತ್ನ ಮಾಡಿದರೆ, ಶತಾಯಗತಾಯ ಅನಕೊಂಡವನ್ನು ನೀರಿನಿಂದ ಮೇಲಕ್ಕೆತ್ತಬೇಕು ಎಂದು ಆಕ್ರಮಣಕಾರಿಯಾಗಿ ಕರಿಚಿರತೆ ಮೇಲೆರಗುತ್ತಿತ್ತು.

Also Read : ಚೂರಿ ತಲೆಯನ್ನು `ಸೀಳಿದೆ'ಯೆಂದು ತಮಾಷೆ : ಪಾಪ... ಸತ್ಯ ಗೊತ್ತಿಲ್ಲದ ಗೆಳೆತಿಯ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ಈ ಅನಕೊಂಡ ಮೊದಲು ಕರಿಚಿರತೆಯನ್ನು ನೀರಿಗೆ ಎಳೆಯಲು ಪ್ರಯತ್ನಿಸುವ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಆದರೆ, ಈ ವೇಳೆ ಪ್ರಾಬಲ್ಯ ಸಾಧಿಸುವ ಕರಿಚಿರತೆ ಅನಕೊಂಡವನ್ನೇ ನೀರಿನಿಂದ ಮೇಲಕ್ಕೆಳೆಯುವ ಪ್ರಯತ್ನ ಮಾಡಿತ್ತು.

Also Read : ದೇಗುಲದ ದ್ವಾರದಲ್ಲಿ ತನ್ನ ಮುಂಗಾಲನ್ನು ಜನರತ್ತ ಚಾಚಿ ಪ್ರೀತಿ ತೋರುವ ಮುದ್ದು ಶ್ವಾನ


Also Read : ಒಗ್ಗಟ್ಟಿನ ಶಕ್ತಿಯೇ ಇದು : ಇಳಿಜಾರಿಗೆ ಬಿದ್ದಿದ್ದ ಲಾರಿಯನ್ನು ಎಳೆದ ಜನ : ಅದ್ಭುತ ದೃಶ್ಯವಿದು

ಅನಕೊಂಡಗಳು ವಿಶ್ವದ ಅತೀ ದೊಡ್ಡ ಹಾವುಗಳಾಗಿದ್ದು, ಇವುಗಳು ಸರಿಸುಮಾರು 130 ಕೆಜಿ ತನಕ ತೂಕ ಹೊಂದಿರುತ್ತವೆ. ನೀರಿನಲ್ಲಿ ಇವುಗಳು ಅತೀ ವೇಗದಲ್ಲಿ ಸಂಚರಿಸುತ್ತವೆ. ಆದರೆ, ಇದರ ತೂಕದ ಕಾರಣದಿಂದ ಭೂಮಿ ಮೇಲೆ ಇವುಗಳಿಗೆ ವೇಗವಾಗಿ ಹೋಗಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ಅನಕೊಂಡಗಳು ಸಾಕಷ್ಟು ಸಂದರ್ಭದಲ್ಲಿ ನೀರಿನಲ್ಲಿ ಅಥವಾ ಜಲಮೂಲದ ಹತ್ತಿರವೇ ಇರುತ್ತವೆ.

ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋ 2013ರಲ್ಲೂ ನೆಟ್ಟಿಗರ ಗಮನ ಸೆಳೆದಿತ್ತು. ಇದೀಗ ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಈ ವಿಡಿಯೋವನ್ನು ಎಲ್ಲರೂ ಬಲು ಕುತೂಹಲದಿಂದ ನೋಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ