ಆ್ಯಪ್ನಗರ

ಸಫಾರಿ ಕಾರಿನ ಮೇಲೆ ಕುಳಿತ ಸಿಂಹ...! : ಇಲ್ಲಿದೆ ಎದೆ ನಡುಗಿಸುವಂತಹ ವಿಡಿಯೋ

ಸಿಂಹವೊಂದು ಸಫಾರಿ ಕಾರಿನ ಮೇಲೆ ಕುಳಿತ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡುವಾಗ ಎದೆಯೇ ನಡುಗಿದಂತಾಗುತ್ತದೆ...!

Vijaya Karnataka Web 20 Feb 2020, 5:42 pm
ಆ ಪ್ರವಾಸಿಗರು ಖುಷಿ ಖುಷಿಯಲ್ಲೇ ಮೃಗಾಲಯದಲ್ಲಿ ಸಫಾರಿ ಹೊರಟಿದ್ದರು. ಸಿಂಹ, ಹುಲಿ ಏನಾದರೂ ಕಾಣಸಿಗುತ್ತದಾ ಎಂದು ಇವರ ದೃಷ್ಟಿ ಕಾಡಿನತ್ತಲೇ ನೆಟ್ಟಿತ್ತು. ಅಷ್ಟರಲ್ಲಿ ಮೂರು ಸಿಂಹಗಳೂ ಇವರಿಗೆ ಕಾಣಸಿಕಿತ್ತು. ಆದರೆ, ಈ ಪ್ರವಾಸಿಗರ ಮುಖದಲ್ಲಿ ಸಿಂಹ ಕಂಡ ಖುಷಿಗಿಂತ ಭೀತಿಯೇ ಹೆಚ್ಚಾಗಿತ್ತು...! ಕಾರಣ, ಆ ಸಿಂಹಗಳು ನೇರವಾಗಿ ಕಾರಿನತ್ತ ಧಾವಿಸಿದ್ದವು...!
Vijaya Karnataka Web lion
| Screengrab from video |


Also Read : ವಿಶಿಷ್ಟವಾಗಿ ಮರಿಗಳಿಗೆ ಹಾಲುಣಿಸುವ ಫ್ಲೆಮಿಂಗೋ... ಜೇಡನ ಸೂಕ್ಷ್ಮ ಕುಸುರಿ ಸೂಪರ್... : ಇಲ್ಲಿದೆ ಅದ್ಭುತ ವಿಡಿಯೋ

ಹೀಗೆ ಬಂದ ಸಿಂಹಗಳು ನೇರವಾಗಿ ಕಾರಿನ ಪಕ್ಕಕ್ಕೇ ಬಂದು ನಿಂತಿದ್ದವು. ಅದರಲ್ಲಿ ಒಂದು ಸಿಂಹವಂತೂ ಕಾರಿನ ಮೇಲೆಯೇ ಹೋಗಿ ನಾನೇ ರಾಜ ಎಂಬಂತೆ ಪೋಸ್ ಕೊಡುತ್ತಿತ್ತು. ಇತರ ಎರಡು ಸಿಂಹಗಳು ಕಾರಿನ ಸುತ್ತ ರೌಂಡ್ ಹೊಡೆಯುತ್ತಿದ್ದವು. ಎದೆಯೇ ನಡುಗಿಸುವಂತಹ ಈ ದೃಶ್ಯ ಈಗ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

Also Read : ಮನೆ ತಿಂಡಿ ಮಿಸ್ ಮಾಡಿಕೊಳ್ತಿದ್ದೀರಾ...? : ಹಾಗಾದರೆ ಇಲ್ಲಿಗೆ ಬನ್ನಿ...

A white Jeep! My favourite from r/AnimalsBeingJerks
ಕಾರಿಗೆ ರೌಂಡ್ ಬರುತ್ತಿದ್ದ ಒಂದು ಸಿಂಹವಂತೂ ಕಾರಿನ ಬಾಗಿಲನ್ನು ಬಾಯಲ್ಲಿ ಎಳೆಯುವ ಯತ್ನವನ್ನೂ ಮಾಡಿತ್ತು. ಡೋರ್ ಲಾಕ್ ಆಗಿದ್ದರಿಂದ ಸಿಂಹದ ಪ್ರಯತ್ನ ಫಲಕೊಟ್ಟಿರಲಿಲ್ಲ. ತುಂಬಾ ಹೊತ್ತಿನ ಬಳಿಕ ಕಾರಿನ ಚಾಲಕ ವಾಹನವನ್ನು ಹಿಂದಕ್ಕೆ ಚಲಾಯಿಸಿದ್ದರಿಂದ ಸಿಂಹ ಕಾರಿನಿಂದ ಇಳಿದು ಹೋಗಿದೆ. ಹೀಗಾಗಿ, ಕಾರಿನಲ್ಲಿದ್ದವರು ಕೂಡಾ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Also Read : ಬಾಂಬ್‌ ಸ್ಫೋಟದಲ್ಲಿ ಎರಡು ಅಂಗೈಯನ್ನು ಕಳೆದುಕೊಂಡರೂ ಸಾಧಿಸಿ ತೋರಿಸಿದ ಛಲಗಾರ್ತಿ : ಇದು ಸ್ಫೂರ್ತಿಯ ಕತೆ

ಆದರೆ, ಈ ವಿಡಿಯೋ ಈ ವರ್ಷದಲ್ಲ. 2019ರಲ್ಲಿ ಈ ವಿಡಿಯೋ ಹರಿದಾಡಲು ಆರಂಭಿಸಿತ್ತು. ಆದರೆ, ಈಗ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ಇದೇ ವಿಡಿಯೋ ಮುನ್ನೆಲೆಗೆ ಬಂದಿದೆ. ಹೀಗಾಗಿ, ಮತ್ತೆ ಹಲವರು ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ