ಆ್ಯಪ್ನಗರ

ನೋಡ ನೋಡುತ್ತಿದ್ದಂತೆಯೇ ಸಮುದ್ರ ಸೇರಿದ ಮನೆಗಳು! : ಇದು ಭಯಾನಕ ವಿಡಿಯೋ

ನಾರ್ವೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದ ದೃಶ್ಯಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನೋಡ ನೋಡುತ್ತಿದ್ದಂತೆಯೇ ಭೂಮಿ ಜಾರಿ ಸಮುದ್ರ ಸೇರುವ ದೃಶ್ಯ ಎದೆಯನ್ನೇ ನಡುಗಿಸುವಂತಿದೆ.

Vijaya Karnataka Web 4 Jun 2020, 4:11 pm
ಯಾರೋ ಭೂಮಿಯ ಒಂದು ತುಂಡನ್ನು ಮೆಲ್ಲನ್ನೆ ಎಳೆದಂತೆ ಕಾಣುತ್ತದೆ...! ಹೀಗೆ ಜಾರುತ್ತಾ ಜಾರುತ್ತಾ ಸಾಗುವ ಆ ಭೂಮಿ ಕ್ಷಣಾರ್ಧದಲ್ಲಿ ಸಮುದ್ರದಲ್ಲಿ ಲೀನವಾಗುತ್ತದೆ...! ಅದೂ ಮನೆಗಳ ಜೊತೆಗೆಯೇ...!
Vijaya Karnataka Web Norway Landslide
| Screengrab from video | Courtesy : Jan Egil Bakkeby And Jan Fredrik Drabløs/ Twitter


ಈ ದೃಶ್ಯ ಕಂಡು ಬಂದದ್ದು ಉತ್ತರ ನಾರ್ವೆಯಲ್ಲಿ. ಇಲ್ಲಿ ಭೀಕರ ಭೂಕುಸಿತ ಸಂಭವಿಸಿದೆ. ಈ ಭೂಕುಸಿತದಿಂದ ಹಲವು ಮನೆಗಳು ಸಮುದ್ರ ಪಾಲಾಗಿವೆ. ಈ ವಿಡಿಯೋ ನೋಡಿದಾಗ ಎದೆಯೇ ನಡುಗಿದಂತಾಗುತ್ತದೆ...! ಅಷ್ಟು ಭೀಕರವಾಗಿದೆ ಈ ದೃಶ್ಯ.

Also Read : ಆನೆಗಳು ಮನುಷ್ಯರನ್ನೆಷ್ಟು ನಂಬುತ್ತವೆ ಗೊತ್ತಾ?: ಹೃದಯ ತುಂಬಿಸುವ ಈ ದೃಶ್ಯಗಳೇ ಸಾಕ್ಷಿ

ನಾರ್ವೆಯ ಆಲ್ಟಾದ ನಿವಾಸಿಯೊಬ್ಬರು ಸೆರೆ ಹಿಡಿದ ದೃಶ್ಯವಿದು. ಭಾರೀ ಪ್ರಮಾಣದಲ್ಲಿ ಭೂಮಿ ಸಮುದ್ರ ಸೇರುವ ಈ ದೃಶ್ಯವನ್ನು ಜಾನ್ ಎಗಿಲ್ ಬಕೆಬಿ ಎಂಬವರು ಸೆರೆ ಹಿಡಿದಿದ್ದು, ಜಾನ್ ಫ್ರೆಡ್ರಿಕ್ ಡ್ರಾಬ್ಲಾಸ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. `ನಾರ್ವೆಯ ಆಲ್ಟಾದಲ್ಲಿ ಬೃಹತ್ ಭೂಕುಸಿತದಿಂದ ಹಲವಾರು ಮನೆಗಳನ್ನು ಸಮುದ್ರ ಸೇರಿವೆ' ಎಂದು ಇವರು ಬರೆದುಕೊಂಡಿದ್ದಾರೆ.

Also Read : ಇಲ್ಲಿನವರಿಗೆ ಕಾಡುತ್ತಿದೆ 10 ವರ್ಷದ ಬಾಲಕಿಯ ಪ್ರೇತಾತ್ಮದ ಭಯ...!


ಲಭ್ಯ ಮಾಹಿತಿ ಪ್ರಕಾರ ಈ ಘಟನೆ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ಗೊತ್ತಾಗಿಲ್ಲ. ಇಲ್ಲಿದ್ದ ಜನರೆಲ್ಲಾ ಸುರಕ್ಷಿತವಾಗಿದ್ದಾರೆ.

Also Read : ಮೂರನೇ ಮಹಡಿ ಕಿಟಕಿಯಿಂದ ಜಾರಿದ ಕಂದ : ದೇವರಂತೆ ಬಂದ ಯುವಕ...

ಈ ಭಯಾನಕ ವಿಡಿಯೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗಿಯೇ ವೈರಲ್ ಆಗುತ್ತಿದೆ. ಅಪ್ಲೋಡ್ ಆದ ಕೆಲವೇ ಹೊತ್ತಿನಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಅಲ್ಲದೆ, ಈ ವಿಡಿಯೋ ಕಂಡ ಎಲ್ಲರೂ ದಿಗಿಲುಗೊಂಡಿದ್ದಾರೆ. ನಾವು ಯಾವತ್ತೂ ಇಂತಹ ಭಯಾನಕ ದೃಶ್ಯ ನೋಡಿಯೇ ಇರಲಿಲ್ಲ ಎಂದು ಬಹುತೇಕರು ಅಚ್ಚರಿ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ. ಕೆಲವರು ಜನರ ಬಗ್ಗೆ ಮರುಕ ವ್ಯಕ್ತಪಡಿಸಿದರೆ, ಇನ್ನು ಕೆಲವರು 2020 ಚೆನ್ನಾಗಿಲ್ಲ ಎಂದು ವರ್ಷಕ್ಕೆ ದೂರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ