ಆ್ಯಪ್ನಗರ

Shocking Footage : ಕಾರು ಚಲಾಯಿಸುವಾಗಲೇ ನಿದ್ದೆಗೆ ಜಾರಿದ ಡ್ರೈವರ್ ಮತ್ತು ಸಹಪ್ರಯಾಣಿಕ!

ಇದೊಂದು ಅಚ್ಚರಿಯ ವಿಡಿಯೋ. ಚಾಲಕನ ಈ ನಿರ್ಲಕ್ಷ್ಯದ ಚಾಲನೆಯನ್ನು ಕಂಡ ಪೊಲೀಸರು ಕೂಡಾ ದಂಗಾಗಿದ್ದಾರೆ.

Vijaya Karnataka Web 18 Jan 2021, 12:54 pm
ಕಾರು ಚಲಿಸುತ್ತಿದ್ದಾಗಲೇ ಚಾಲಕನಿಗೆ ನಿದ್ದೆ...! ಸಹ ಪ್ರಯಾಣಿಕರಿಗೂ ನಿದ್ದೆ ಮಂಪರು...! ಆದರೆ, ಕಾರು ಮಾತ್ರ ಸಾಗುತ್ತಿತ್ತು. ಹೀಗಿದ್ದರೂ ಕಾರಿನಲ್ಲಿದ್ದ ಇಬ್ಬರೂ ಸುಖವಾಗಿ ನಿದ್ರಿಸುತ್ತಿದ್ದರು...!
Vijaya Karnataka Web Image by Free-Photos from Pixabay
| Representative image | Image From Pixabay


ಈಗಂತೂ ತಂತ್ರಜ್ಞಾನ ನಿರೀಕ್ಷೆಯೇ ಮಾಡದ ರೀತಿಯಲ್ಲಿ ಅಭಿವೃದ್ಧಿಯಾಗಿದೆ. ಹೀಗಾಗಿ, ಕೆಲ ವಾಹನ ತಯಾರಿಕಾ ಸಂಸ್ಥೆಗಳು ಸಂಪೂರ್ಣ ಸ್ವಯಂಚಾಲಿತ ವಾಹನಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಅಂತೆಯೇ ವಿಶ್ವದ ಅತ್ಯಂತ ಪ್ರಸಿದ್ಧ ಎಲೆಕ್ಟ್ರಿಕ್ ಕಾರು ತಯಾರಿಕಾ ಸಂಸ್ಥೆ ಟೆಸ್ಲಾ ಎರಡು ವಿಧದ ಸ್ವಯಂಚಾಲಿತಗಳನ್ನು ವಾಹನ ಮಾರುಕಟ್ಟೆ ಬಿಟ್ಟಿದೆ. ಇದರಲ್ಲಿ ಒಂದು ಆಟೋಪೈಲಟ್ ಮತ್ತು ಇನ್ನೊಂದು ಸಂಪೂರ್ಣ ಸ್ವಯಂ ಚಾಲಿತ ತಂತ್ರಜ್ಞಾನ. ಆಟೋಪೈಲಟ್ ತಂತ್ರಜ್ಞಾನದಲ್ಲಿ ಕಾರು ಇತರ ವಾಹನ ಮತ್ತು ಪಾದಚಾರಿಗಳು ತಮ್ಮ ಲೇನ್‌ನಲ್ಲಿ ಇದ್ದಾಗ ಸ್ವಯಂ ಚಾಲಿತವಾಗಿ ಬ್ರೇಕ್ ಹಾಕಲು ಮತ್ತು ದಾರಿ ಕ್ಲಿಯರ್ ಆಗುತ್ತಿದ್ದಂತೆಯೇ ವೇಗ ಹೆಚ್ಚಿಸಲು ಶಕ್ತವಾಗಿರುತ್ತದೆ.

Also Read : ಮುದ್ದು ಕಂದನಿಗೆ ಅಮ್ಮನ ಬಿಸಿಯಪ್ಪುಗೆ : ಮನಸ್ಸಿಗೆ ಮುದ ನೀಡುವ ಸಿಂಹಿಣಿಯ ದೃಶ್ಯವಿದು

ಇನ್ನು ಸಂಪೂರ್ಣ ಸ್ವಯಂ ಚಾಲಿತ ತಂತ್ರಜ್ಞಾನ ಇನ್ನಷ್ಟು ಸುಧಾರಿತವಾಗಿದೆ. ಇದರಲ್ಲಿ ನ್ಯಾವಿಗೇಷನ್, ಆಟೋ ಲೇನ್ ಬದಲಾವಣೆ, ಆಟೋ ಪಾರ್ಕ್‌, ಟ್ರಾಫಿಕ್ ಲೈಟ್ ಮತ್ತು ಸ್ಟಾಪ್ ಸೈನ್ ಕಂಟ್ರೋಲ್ ಸೇರಿದಂತೆ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಆದರೆ, ಕಾರು ಪೂರ್ಣ ಪ್ರಯಾಣದಲ್ಲಿ ಸ್ವಯಂಚಾಲಿತ ಚಾಲನಾ ಸಾಫ್ಟ್‌ವೇರ್ ಹೊಂದಿದ್ದರೂ ಚಾಲಕರು ಯಾವುದೇ ಸಂದರ್ಭದಲ್ಲಿ ವಾಹನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಿದ್ಧರಿರಬೇಕು ಎಂದು ಸ್ವತಃ ಟೆಸ್ಲಾ ಮೋಟರ್ಸ್‌ನ ಅಧಿಕಾರಿಗಳೇ ಸ್ಪಷ್ಟವಾಗಿ ಹೇಳುತ್ತಾರೆ.


Also Read : `ಬೆಣ್ಣೆ' ಚಹಾ ಕುಡಿದಿದ್ದೀರಾ...? : ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ ಈ ದೃಶ್ಯ

ಆದರೆ, ಸಂಸ್ಥೆಯ ಈ ಎಚ್ಚರಿಕೆಯನ್ನು ಒಂದಷ್ಟು ಜನ ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ಅದಕ್ಕೆ ಸಾಕ್ಷಿ ಈ ವಿಡಿಯೋ. ಇಲ್ಲೊಂದು ಕಡೆ ಸ್ವಯಂಚಾಲಿತ ವಾಹನದಲ್ಲಿ ಚಾಲಕ ಮತ್ತು ಸಹಾ ಪ್ರಯಾಣಿಕ ನಿದ್ದೆ ಮಾಡುತ್ತಾ ಸಾಗಿದ ದೃಶ್ಯವಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಈ ವಿಡಿಯೋ ಮುನ್ನೆಲೆಗೆ ಬಂದಿದ್ದರೂ ಇದು ಈಗೀನ ದೃಶ್ಯವಿಲ್ಲ. ಲಭ್ಯ ಮಾಹಿತಿ ಪ್ರಕಾರ ಇದು 2019ರಲ್ಲಿ ಸೆರೆಯಾದ ದೃಶ್ಯ ಎಂದು ಹೇಳಲಾಗುತ್ತದೆ. ಈ ವಿಡಿಯೋ ಎಲ್ಲಿ ಸೆರೆಯಾಗಿದ್ದು ಎಂಬುದು ಕೂಡಾ ನಿಖರವಾಗಿ ಗೊತ್ತಾಗಿಲ್ಲ.


Also Read : ಏಣಿ ಮೂಲಕ ಛಾವಣಿ ಏರಿದ ಶ್ವಾನ : ಅಚ್ಚರಿಯ ವಿಡಿಯೋ ವೈರಲ್

ಹಾಗಂತ, ಈ ರೀತಿಯ ಪ್ರಕರಣಗಳು ಇದೇ ಮೊದಲೇನು ಅಲ್ಲ. ಕಳೆದ ವರ್ಷ ಕೆನಡಾದ ವ್ಯಕ್ತಿಯೊಬ್ಬರು ತನ್ನ ಈ ಐಷಾರಾಮಿ ಕಾರಿನ ಆಟೋಪೈಲಟ್ ಮೋಡ್‌ನಲ್ಲಿ ಸಾಕಷ್ಟು ದೂರ ನಿದ್ದೆ ಮಾಡುತ್ತಲೇ ಸಾಗಿದ್ದರು. 2019ರಲ್ಲಿ ಇಂತಹದ್ದೇ ವೇಗವಾಗಿ ಸಾಗುತ್ತಿದ್ದ ಸ್ವಯಂಚಾಲಿತ ವಾಹನದಲ್ಲಿ ಚಾಲಕ ಸೇರಿ ಇಬ್ಬರು ನಿದ್ದೆಗೆ ಜಾರಿದ್ದಾರೆ ಎಂಬ ವಿಷಯವನ್ನು ಮತ್ತೋರ್ವ ವಾಹನದ ಚಾಲಕ 911 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಘಟನೆ ಕೂಡಾ ಸಾಕಷ್ಟು ವೈರಲ್ ಆಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ