ಆ್ಯಪ್ನಗರ

ಲೆಬನಾನ್ ಸ್ಫೋಟ : ಮಗನನ್ನು ಬಿಗಿದಪ್ಪಿ ರಕ್ಷಿಸುವ ತಂದೆ, ಓಡಿ ಹೋಗುವ ವಧು : ಇದು ಕರುಳು ಹಿಂಡುವ ದೃಶ್ಯ

ಲೆಬನಾನ್‌ನಲ್ಲಿ ಸಂಭವಿಸಿದ ಭಾರೀ ಸ್ಫೋಟ ವಿಶ್ವವನ್ನೇ ನಡುಗಿಸಿದೆ. ಈ ಸ್ಫೋಟದ ದೃಶ್ಯಗಳನ್ನು ಕಂಡಾಗಲೇ ಕರುಳು ಹಿಂಡಿದಂತಾಗುತ್ತದೆ.

Vijaya Karnataka Web 5 Aug 2020, 3:59 pm
ಹೆತ್ತವರಿಗೆ ಮಕ್ಕಳೇ ನಿಧಿ. ಮಕ್ಕಳಿಗಾಗಿ ಜೀವ ಕೊಡುವುದಕ್ಕೂ ಸಿದ್ಧರಿರುತ್ತಾರೆ ಹೆತ್ತವರು. ಇದಕ್ಕೆ ಅನೇಕ ಸಾಕ್ಷಿಗಳಿವೆ. ಮಕ್ಕಳ ಅಭಿವೃದ್ಧಿಗಾಗಿ ಬದುಕನ್ನೇ ತೇಯುವ ಹೆತ್ತವರು ಕಡೆ ಕ್ಷಣದವರೆಗೂ ಮಕ್ಕಳ ಖುಷಿಯನ್ನೇ ಬಯಸುತ್ತಿರುತ್ತಾರೆ. ತಾವು ಕಷ್ಟಪಟ್ಟರೂ ಮಕ್ಕಳಿಗೆ ತೊಂದರೆಯಾಗಬಾರದು ಎಂದು ಹಗಳಿರುವ ಶ್ರಮಿಸುವವರು ಹೆತ್ತವರು. ಹೆತ್ತವರ ಪ್ರೀತಿ ಎಂತಹದ್ದು ಎಂಬುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ. ಭೀಕರ ಸ್ಫೋಟದ ವೇಳೆ ಇಲ್ಲೊಬ್ಬರು ತಂದೆ ತನ್ನ ಪುತ್ರನನ್ನು ಬಿಗಿದಪ್ಪಿ ರಕ್ಷಿಸುವ ಈ ದೃಶ್ಯವನ್ನು ಕಂಡಾಗ ಕರುಳೇ ಹಿಂಡಿದಂತಾಗುತ್ತದೆ.
Vijaya Karnataka Web Beirut explosion
| Screengrab from video | Courtesy : 2020 Predictions/Twitter


Also Read : ಪುರಿ ಕಡಲತೀರದಲ್ಲಿ ಕಲಾವಿದನ ಕೈಯಲ್ಲಿ ಅರಳಿದೆ ಶ್ರೀರಾಮ ಮಂದಿರದ ಅದ್ಭುತ ಕಲಾಕೃತಿ

ಮಧ್ಯ ಪ್ರಾಚ್ಯದ ಲೆಬನಾನ್ ರಾಜಧಾನಿ ಬೈರುತ್‌ ನಗರದ ಬಂದರು ಪ್ರದೇಶದಲ್ಲಿ ನಿನ್ನೆ ಭಾರೀ ಸ್ಫೋಟ ಸಂಭವಿಸಿತ್ತು. ಈ ಸ್ಫೋಟದಲ್ಲಿ ನೂರಾರು ಜನ ಅಸುನೀಗಿದ್ದರು. ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಕೂಡಾ ಎದುರಾಗಿದೆ. ಬಂದರಿನಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕವೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಈಗ ಬೇರೆ ಬೇರೆ ಚರ್ಚೆಗೂ ಹುಟ್ಟಿವೆ. ಸದ್ಯ ಈ ಭೀಕರ ಸ್ಫೋಟದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಎಲ್ಲಾ ವಿಡಿಯೋಗಳನ್ನು ನೋಡಿದಾಗಲೇ ಎದೆ ನಡುಗುತ್ತದೆ. ಇದರ ನಡುವೆ ಹೃದಯವನ್ನೇ ಕರಗಿಸುವ ಮತ್ತೊಂದು ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಫೋಟ ಸಂಭವಿಸುತ್ತಿದ್ದಂತೆಯೇ ತಂದೆಯೊಬ್ಬರು ತನ್ನ ಮನೆಯಲ್ಲಿ ಮಗನನ್ನು ಎದೆಗೆ ಬಿಗಿದಪ್ಪಿ ರಕ್ಷಿಸಲು ಒದ್ದಾಡುವ ದೃಶ್ಯವಿದು. ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿದೆ ಈ ವಿಡಿಯೋ.

Also Read : ಕೊಲೆ ಅಪರಾಧಿ ಪುತ್ರನನ್ನು ಜೈಲಿನಿಂದ ಕರೆತರಲು 35 ಅಡಿ ಸುರಂಗ ಕೊರೆದ ತಾಯಿ!

ಇಲ್ಲಿದೆ ವೈರಲ್ ವಿಡಿಯೋ :
ಇನ್ನು, ಸ್ಫೋಟದ ಸಂದರ್ಭದಲ್ಲಿ ಓಡುವ ವಧು, ಮನೆ ಕೆಲಸದಾಕೆ ಮಗುವನ್ನು ರಕ್ಷಿಸುವ ವಿಡಿಯೋ ಕೂಡಾ ವೈರಲ್ ಆಗುತ್ತಿದೆ. ಈ ದೃಶ್ಯಗಳನ್ನು ನೋಡಿದಾಗಲೂ ಮನಸ್ಸು ಕದಡಿದ ಕೊಳದಂತಾಗುತ್ತದೆ.

ಮಗನ ಸಮಾಧಾನ ಮಾಡುತ್ತಲೇ ಧೈರ್ಯ ತುಂಬುವ ಅಪ್ಪ ಎದೆಗಪ್ಪಿಕೊಂಡು ಪುತ್ರನನ್ನು ಲೇಬಲ್ ಕೆಳಗೆ ಕುಳಿತುಕೊಳ್ಳಿಸುವ ದೃಶ್ಯವನ್ನು ನೋಡುವಾಗಲೇ ಎದೆ ಭಾರವಾಗುತ್ತದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರೂ ಈ ದೃಶ್ಯವನ್ನು ಕಂಡು ಅಕ್ಷರಶಃ ಕಣ್ಣೀರಿಟ್ಟಿದ್ದಾರೆ.

Also Read : ಇವರಿಗೆ ರಕ್ಷಾ ಬಂಧನವೆಂದರೆ ಭಯ! 1955ರಿಂದ ಈ ಗ್ರಾಮದಲ್ಲಿ ಯಾರೂ ರಾಖಿ ಕಟ್ಟಿಲ್ಲ...!

ಇವಲ್ಲದೆ, ಈ ಭೀಕರ ಸ್ಫೋಟದ ಇನ್ನೂ ಅನೇಕ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಭೀಕರ ಸ್ಫೋಟಕ್ಕೆ ವಿಶ್ವವೇ ಶಾಕ್ ಆಗಿದೆ. ಅಲ್ಲದೆ, ಲೆಬನಾನ್‌ನ ಬೈರುತ್‌ನಲ್ಲಿ ಈಗ ಬರೀ ಆಕ್ರಂದನವೇ ಕೇಳುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ