ಆ್ಯಪ್ನಗರ

Viral Video : ಕಣಿವೆಯನ್ನೇರುವಾಗ ಬ್ಯಾಲೆನ್ಸ್‌ ತಪ್ಪಿ ಬೇರಿನಲ್ಲಿ ನೇತಾಡಿದ 69 ವರ್ಷದ ವೃದ್ಧೆ...!

ಇದೊಂದು ಭಯಾನಕ ವಿಡಿಯೋ. ಉತ್ಸಾಹಿ 69 ವರ್ಷದ ವೃದ್ಧೆಯೊಬ್ಬರು ಕಣಿವೆಯನ್ನೇರುವ ಸಾಹಸಯಾನ ಕೈಗೊಂಡಿದ್ದರು. ಆದರೆ, ಸಾಗುವಾಗಲೇ ಬ್ಯಾಲೆನ್ಸ್‌ ತಪ್ಪಿ ಅಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿತ್ತು.

Vijaya Karnataka Web 28 Jan 2020, 4:34 pm
ನೀವು ಆಕ್ಷನ್ ಸಿನೆಮಾಗಳಲ್ಲಿ ನೋಡಬಹುದು... ಕಡಿದಾದ ಪ್ರದೇಶವನ್ನು ಏರುವಾಗ ಅದೆಷ್ಟು ಭಯಾನಕವಾಗಿ ಚಿತ್ರೀಕರಿಸಲಾಗುತ್ತದೆಯೆಂದು. ಆದರೆ, ಸಿನೆಮಾದಲ್ಲಿ ತರಬೇತಿ ಪಡೆದ ಡೂಪ್‌ಗಳನ್ನು ಬಳಕೆ ಮಾಡಲಾಗುತ್ತದೆ ಮತ್ತು ಸುರಕ್ಷತಾ ಕ್ರಮಗಳಿಗೂ ಮಹತ್ವ ನೀಡಲಾಗುತ್ತದೆ. ಆದರೆ, ಇಲ್ಲಿ ಸಿನೆಮಾವನ್ನೇ ಮೀರಿಸುವಂತಹ ದೃಶ್ಯವೊಂದು ನಡೆದಿದೆ...!
Vijaya Karnataka Web cliffhanger rescue
| Screengrab from video | Courtesy : KOAT/Youtube


Also Read : ಮಾರಕ ಕೊರೊನಾ ವೈರಸ್‌ನಿಂದ ಮಾಲೀಕರನ್ನು ಪಾರು ಮಾಡಿದ ಶ್ವಾನ...! ಹೇಗೆ ಎನ್ನುವುದೇ ಇಂಟ್ರೆಸ್ಟಿಂಗ್...!

ಕಡಿದಾದ ಪ್ರದೇಶವನ್ನು ಏರುವ ಸಾಹಸ ಕೈಗೊಂಡಿದ್ದ 69 ವರ್ಷದ ವೃದ್ಧೆಯೊಬ್ಬರು ಅರ್ಧ ಸಾಗುವಾಗ ಬ್ಯಾಲೆನ್ಸ್‌ ತಪ್ಪಿ ಬಂಡೆಯ ಪಕ್ಕದಲ್ಲಿದ್ದ ಮರದ ಬೇರಿನಲ್ಲಿ ನೇತಾಡಿದ್ದಾರೆ...! ಎದೆನ್ನೇ ನಡುಗಿಸುವಂತಹ ವಿಡಿಯೋವಿದು.

Also Read : ಬಾಲಕಿಯ ಹೊಟ್ಟೆಯಲ್ಲಿತ್ತು ಅರ್ಧ ಕೆ.ಜಿ ತಲೆಕೂದಲು, ಖಾಲಿ ಶ್ಯಾಂಪೂ ಪ್ಯಾಕೇಟ್ ಚೂರು...!

ಇದು ನಡೆದಿರುವುದು ಕ್ಯಾಲಿಫೋರ್ನಿಯಾದ ರುಬಿಯೋ ಕಣಿವೆಯಲ್ಲಿ. ಪತಿಯೊಂದಿಗೆ ಈ ವೃದ್ಧೆ ಕಣಿವೆಯೇರುವ ಸಾಹಸ ಕೈಗೊಂಡಿದ್ದರು. ಇಲ್ಲಿ ಎತ್ತರದ ಪ್ರದೇಶವನ್ನೇರುವಾಗ ಈ ವೃದ್ಧೆ ಆಯತಪ್ಪಿದ್ದಾರೆ. ಹೀಗಾಗಿ, ಬೇರಿನಲ್ಲಿ ನೇತಾಡಿ ಜೀವ ಉಳಿಸಿಕೊಂಡಿದ್ದಾರೆ.

Video Courtesy : KOAT/Youtube

ಈ ವಿಷಯ ತಿಳಿದು ವೈದ್ಯರು ಮತ್ತು ರಕ್ಷಣಾ ತಂಡ ಸ್ಥಳಕ್ಕೆ ಬಂದಾಗ ವೃದ್ಧೆಯಿನ್ನೂ ಬೇರಿನಲ್ಲಿ ನೇತಾಡುತ್ತಲೇ ಇದ್ದರು. ಈ ವೇಳೆ, ಸ್ವಲ್ಪವೂ ತಡಮಾಡದ ರಕ್ಷಣಾ ತಂಡ ಹೆಲಿಕಾಪ್ಟರ್ ಮೂಲಕ ಇವರ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿತ್ತು. ಅದೃಷ್ಟವಶಾತ್ ಈ ವೃದ್ಧೆ ಬೇರಿನ ಮೇಲಿನ ತನ್ನ ಹಿಡಿತವನ್ನು ಕಳೆದುಕೊಳ್ಳುವ ಮೊದಲೇ ರಕ್ಷಣಾ ಸಿಬ್ಬಂದಿ ಇವರನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾರೆ. ಈ ಇಡೀ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಫೇಸ್‌ಬುಕ್, ಟ್ವಿಟ್ಟರ್ ಮತ್ತು ಇನ್‌ಸ್ಟ್ರಾಗ್ರಾಂನಲ್ಲಿ ಸಖತ್ ಆಗಿಯೇ ವೈರಲ್ ಆಗುತ್ತಿದೆ.

Also Read : Viral Video : ಕಾಟ ಕೊಟ್ಟವನ ವಿರುದ್ಧ ತಾಳ್ಮೆಗೆಟ್ಟು ಅಟ್ಟಾಡಿಸಿದ ಅಮಾಯಕ ಆನೆ...!

ಈ ಘಟನೆಯಿಂದ ವೃದ್ಧೆಗೆ ಸಣ್ಣಪುಟ್ಟ ಗಾಯಗಳಾಗಿದೆ. ಆದರೆ, ಈ ದಂಪತಿ ಯಾವುದೇ ಸುರಕ್ಷತಾ ಕ್ರಮಕೈಗೊಳ್ಳದೆ ಈ ಸಾಹಸಕ್ಕಿಳಿದಿದ್ದರು ಎಂದು ರಕ್ಷಣಾ ತಂಡದ ಸದಸ್ಯರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ