ಆ್ಯಪ್ನಗರ

ಅಬ್ಬಬ್ಬಬ್ಬಾ... ಇದು ಎದೆ ನಡುಗಿಸುವಂತಹ ದೃಶ್ಯ...!

ಸಮುದ್ರ ತಟದಲ್ಲಿ ಸಂಭವಿಸಿದ ಭೀಕರ ದುರಂತವೊಂದರ ವಿಡಿಯೋ ಸದ್ಯ ಸಖತ್ ಆಗಿಯೇ ವೈರಲ್ ಆಗುತ್ತಿದೆ. ಪ್ರಾಣ ಉಳಿಸಿಕೊಳ್ಳಲು ಸಿಬ್ಬಂದಿ ನಡೆಸುವ ಯತ್ನವನ್ನು ಕಂಡಾಗಲೂ ಮನಸು ಕರಗುತ್ತದೆ...

Vijaya Karnataka Web 24 Dec 2019, 8:37 am
ಆ ಕಾರ್ಮಿಕರು ಕ್ರೇನ್ ಸಹಾಯದಿಂದ ಕಂಟೇನರನ್ನು ಬಾರ್ಜ್‌ಗೆ ಲೋಡ್ ಮಾಡುತ್ತಿದ್ದರು. ಎಲ್ಲಾ ಸರಾಗವಾಗಿಯೇ ಸಾಗುತ್ತಿತ್ತು. ಆದರೆ, ಒಂದು ಹಂತದಲ್ಲಿ ಪರಿಸ್ಥಿತಿ ಸರಿ ಉಲ್ಟಾ ಆಗಿತ್ತು. ನೋಡ ನೋಡುತ್ತಿದ್ದಂತೆಯೇ ಕ್ರೇನ್ ಸಮುದ್ರಕ್ಕೆ ಬಿತ್ತು. ಹೀಗಾಗಿ, ಬಾರ್ಜ್‌ ಕೂಡಾ ನೀರಿನಲ್ಲಿ ಉರುಳಿದೆ. ಈ ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Vijaya Karnataka Web ship
ಸಮುದ್ರದಲ್ಲಿ ಪಲ್ಟಿಯಾದ ಬಾರ್ಜ್‌ | Image Courtesy : KETKnbc/Youtube


Also Read : ಕಣ್ಮರೆಯಾಗುತ್ತಿದ್ದವು ಠಾಣೆಯಲ್ಲಿಟ್ಟಿದ್ದ ಗೊಂಬೆಗಳು...! : ಕಳ್ಳಿ ಮಾತ್ರ ಪೊಲೀಸ್ ಇಲಾಖೆಯಲ್ಲೇ ಇದ್ದಳು...!

ಈಕ್ವೆಡಾರ್‌ನ ಭಾಗವಾಗಿರುವ ಪೆಸಿಫಿಕ್ ದ್ವೀಪಸಮೂಹದ ಪೂರ್ವ ಸ್ಯಾನ್ ಕ್ರಿಸ್ಟೋಬಲ್ ದ್ವೀಪದಲ್ಲಿ ಸಂಭವಿಸಿದ ಘಟನೆ ಇದು. ದುರಂತಕ್ಕೀಡಾದ ಬಾರ್ಜಿನಲ್ಲಿ ಸುಮಾರು 600 ಗ್ಯಾಲನ್‌ನಷ್ಟು ಡಿಸೇಲ್ ಇತ್ತು. ಚಾರ್ಜ್ ಮತ್ತು ಕ್ರೇನ್ ನೀರಿಗೆ ಬೀಳುತ್ತಿದ್ದಂತೆಯೇ ಸಿಬ್ಬಂದಿ ಭಯಭೀತರಾಗಿದ್ದರು. ಹೀಗಾಗಿ, ಇವರೆಲ್ಲಾ ಪ್ರಾಣ ಉಳಿಸಿಕೊಳ್ಳಲು ನೀರಿಗೆ ಹಾರಿದ್ದರು. ಸಿಬ್ಬಂದಿ ನೀರಿಗೆ ಹಾರುವ ವಿಡಿಯೋ ಕೂಡಾ ಈಗ ಸೆರೆಯಾಗಿದೆ.

Also Read : `ನಾಳೆಯಿಂದ ನಾನು ಕೆಲಸಕ್ಕೆ ಬರುವುದಿಲ್ಲ ' : ನೇರಪ್ರಸಾರದಲ್ಲೇ ಹೇಳಿದ ಟಿವಿ ಪತ್ರಕರ್ತೆ...! : ಕಾರಣ ಸಖತ್ ಇಂಟ್ರೆಸ್ಟಿಂಗ್


ಇನ್ನೊಂದೆಡೆ, ಬಾರ್ಜ್‌ ಮಗುಚಿ ಬಿದ್ದಿದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಇಂಧನ ಸೋರಿಕೆಯಾಗಿದ್ದು, ಪರಿಸರಕ್ಕೂ ಮಾರಕವಾಗಿ ಪರಿಣಮಿಸಿದೆ. ಇದು ಜನಚರಗಳಿಗೂ ಮುಳುವಾಗಲಿದೆ. ಇನ್ನು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Also Read : ಐದು ಮೀಟರ್ ಅಂತರದಲ್ಲಿರುವ ಆ ಪಂಚ ಬಾವಿಗಳ ನೀರಿನ ರುಚಿ ಬೇರೆ ಬೇರೆ ಇದೆಯಂತೆ...!

ಯಾವುದೋ ಹಾಲಿವುಡ್ ಸಿನೆಮಾದ ಸ್ಟಂಟ್ ಸೀನ್ ತರ ಈ ದೃಶ್ಯ ಕಾಣುತ್ತದೆ. ಈ ದೃಶ್ಯವನ್ನು ನೋಡಿದಾಗ ನಿಜಕ್ಕೂ ಮನಕಲಕುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ