ಆ್ಯಪ್ನಗರ

ರೈಲು ಬರುತ್ತಿದ್ದಾಗಲೇ ಹಳಿಯಲ್ಲಿ ಸಿಕ್ಕಾಕಿಕೊಂಡ ವ್ಹೀಲ್‌ಚೇರ್! : ಸಿನೆಮಾಕ್ಕಿಂತ ಭಿನ್ನವಾಗಿಲ್ಲ ಈ ದೃಶ್ಯ!

ರೈಲು ಬರುವ ಹೊತ್ತಿನಲ್ಲಿಯೇ ಹಳಿ ದಾಟುತ್ತಿದ್ದ ವ್ಯಕ್ತಿಯ ಪ್ರಾಣ ಅರ್ಧ ಸೆಕೆಂಡಿನಲ್ಲಿ ಉಳಿದಿದೆ...! ಈ ದೃಶ್ಯವನ್ನು ನೋಡುವಾಗಲೇ ಎದೆ ನಡುಗುತ್ತದೆ.

Vijaya Karnataka Web 14 Aug 2020, 8:04 am
ಇದು ಅದೃಷ್ಟವೂ ಹೌದು, ದುರಾದೃಷ್ಟವೂ ಹೌದು...! ಅರೆಕ್ಷಣದಲ್ಲಿ ಒಬ್ಬ ವ್ಯಕ್ತಿಗೆ ಈ ಎರಡರ ಅನುಭವವೂ ಆಗಿದೆ. ಒಂದೊಮ್ಮೆ ಆ ಮಹಿಳಾ ಅಧಿಕಾರಿ ಅಲ್ಲಿಗೆ ಬರದೇ ಇರುತ್ತಿದ್ದರೆ ಅಲ್ಲಿ ಏನಾಗುತ್ತಿತ್ತು ಎಂದು ಊಹಿಸುವುದಕ್ಕೇ ಸಾಧ್ಯವಿಲ್ಲ. ಅಷ್ಟು ಭಯಾನಕವಾಗಿದೆ ಈ ದೃಶ್ಯ.
Vijaya Karnataka Web California Officer Saved Man’s Life
| Screengrab from video | Courtesy : Lodi Police Department/youtube


ಇದು ಕ್ಯಾಲಿಫೋರ್ನಿಯಾದಲ್ಲಿ ನಡೆದಿರುವ ಘಟನೆ. 66 ವರ್ಷದ ವೃದ್ಧರೊಬ್ಬರು ತಮ್ಮ ವ್ಹೀಲ್‌ಚೇರ್‌ನಲ್ಲಿ ಸಾಗುತ್ತಿದ್ದರು. ಆಗ ಅಲ್ಲೇ ರೈಲ್ವೇ ಹಳಿಯೂ ಇತ್ತು. ಈ ಹಳಿಯನ್ನೂ ಬಹುಬೇಗ ದಾಟುವ ಎಂದು ಇವರು ಮುಂದೆ ಸಾಗುತ್ತಿದ್ದರು. ಪಾಪ ಆ ವ್ಯಕ್ತಿಗೆ ಬಹುಶಃ ಅದು ರೈಲು ಬರುವ ಸಮಯವಿದೆಂದು ಗೊತ್ತಿರಲಿಲ್ಲ. ಹೀಗಾಗಿ, ಸರಾಗವಾಗಿ ಸಾಗುತ್ತಿದ್ದರು. ಆದರೆ, ಇವರ ದುರಾದೃಷ್ಟಕ್ಕೆ ಇವರ ವ್ಹೀಲ್‌ಚೇರ್ ಹಳಿಯಲ್ಲಿ ಸಿಕ್ಕಿಬಿದ್ದಿತ್ತು. ಅತ್ತ ರೈಲು ಬರುತ್ತಿರುವುದೂ, ಇತ್ತ ವ್ಹೀಲ್‌ಚೇರ್ ಸಿಕ್ಕಿ ಬೀಳುವುದಕ್ಕೂ ಹೆಚ್ಚು ಹೊತ್ತಿನ ಅಂತರ ಇರಲಿಲ್ಲ. ಆದರೆ, ಈ ವ್ಯಕ್ತಿಯ ಅದೃಷ್ಟ ಚೆನ್ನಾಗಿತ್ತು. ಯಾಕೆಂದರೆ, ಇದೇ ದಾರಿಯಲ್ಲಿ ಒಬ್ಬರು ಹೃದಯವಂತ ಮತ್ತು ಸಾಹಸಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕಾರಿನಲ್ಲಿ ಬರುತ್ತಿದ್ದರು. ಈ ದೃಶ್ಯ ಕಂಡೊಡನೆ ಈ ಅಧಿಕಾರಿ ತಮ್ಮ ಜೀವದ ಹಂಗನ್ನೂ ತೊರೆದು ಓಡಿ ಹೋಗಿ ಆ ವೃದ್ಧನನ್ನು ವ್ಹೀಲ್‌ಚೇರ್‌ನಿಂದ ಎಳೆದಿದ್ದಾರೆ. ಅಧಿಕಾರಿ ವೃದ್ಧನನ್ನು ಎಳೆಯುವುದೂ, ರೈಲು ಅದೇ ಕ್ಷಣಕ್ಕೆ ಹಳಿಯಲ್ಲಿ ಸಾಗುವ ಸಮಯವೂ ಒಂದೇ ಆಗಿತ್ತು...! ಎಳೆದ ರಭಸಕ್ಕೆ ಇಬ್ಬರೂ ನೆಲಕ್ಕೆ ಬಿದ್ದಿದ್ದರು. ಕೂದಳೆಲೆ ಅಂತರದಲ್ಲಿ ಆ ವೃದ್ಧ ಪ್ರಾಣಾಪಾಯದಿಂದ ಪಾರಾಗಿದ್ದರು...!

Also Read : ದೇಹದ ತೂಕದ ಕಾರಣದಿಂದಲೇ ಉಳಿಯಿತು ಯುವಕನ ಜೀವ! : ಇಲ್ಲಿದೆ ವಿಡಿಯೋ

ಈ ಅಧಿಕಾರಿ ತನ್ನ ವಾಹನದಿಂದ ಇಳಿದು ವ್ಯಕ್ತಿಯನ್ನು ಎಳೆಯುವ ಆ ಅವಧಿಯಲ್ಲಿ ನಡುವೆ ಇದ್ದದ್ದು ಬರೀ 15 ಸೆಕೆಂಡುಗಳು ಮಾತ್ರ...! ಇಷ್ಟು ಚಿಕ್ಕ ಅವಧಿಯಲ್ಲಿ ಈ ಅಧಿಕಾರಿ ಒಬ್ಬರ ಪ್ರಾಣವನ್ನೇ ಉಳಿಸಿ ಶಹಬ್ಬಾಸ್ ಎನಿಸಿಕೊಂಡಿದ್ದಾರೆ. ಈ ಅಷ್ಟೂ ದೃಶ್ಯ ಪೊಲೀಸ್ ಅಧಿಕಾರಿಯ ಬಾಡಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಪೊಲೀಸ್ ಇಲಾಖೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ.

Also Read : 114 ದಿನ ದೂರ ದೂರ, ಪತಿಯ ಆರೈಕೆಗೆ ಆಸ್ಪತ್ರೆಯಲ್ಲೇ ಕೆಲಸಕ್ಕೆ ಸೇರಿದ ಪತ್ನಿ! : ಇದು ಅಪೂರ್ವ ಪ್ರೀತಿಯ ಕತೆ


ಈ ಹೃದಯವಂತ ಪೊಲೀಸ್ ಅಧಿಕಾರಿಯನ್ನು ಎರಿಕಾ ಉರ್ರಿಯಾ ಎಂದು ಗುರುತಿಸಲಾಗಿದೆ. ಬೆಳಗ್ಗೆ 8: 44ರ ಸುಮಾರಿಗೆ ಲೋಡಿ ಅವೆನ್ಯೂದಲ್ಲಿ ರೈಲು ಹಳಿಗಳ ಬಳಿ ಇವರು ಗಸ್ತು ತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಘಟನೆ ವೇಳೆ ವೃದ್ಧನ ಕಾಲಿಗೆ ಗಾಯಗಳಾಗಿದೆ. ಬಳಿಕ ತಕ್ಷಣ ಆ ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಿಕಾ ತಮ್ಮ ಪ್ರಾಣದ ಹಂಗು ತೊರೆದು ಈ ವೃದ್ಧನನ್ನು ರಕ್ಷಿಸಿದ್ದಕ್ಕೆ ಪೊಲೀಸ್ ಇಲಾಖೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದೆ.

Also Read : ಫ್ಲೈಓವರ್ ನಡುವೆ ಇದೆ ಮನೆ...! : ಎಲ್ಲರೂ ಜಾಗ ಬಿಟ್ಟು ಕೊಟ್ಟರೂ ಈಕೆ ಬಿಡಲಿಲ್ಲ!


ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರೂ ಎರಿಕಾ ಅವರ ಶೌರ್ಯವನ್ನು ಕೊಂಡಾಡಿದ್ದಾರೆ. ನಿಜಕ್ಕೂ ಎರಿಕಾ ಅವರ ಸಾಹಸ ಮೆಚ್ಚುವಂತಹದ್ದೇ. ಬರೀ ಹದಿನೈದು ಸೆಕೆಂಡುಗಳ ಅಂತರದಲ್ಲಿ ಇವರು ತೋರಿದ ಸಮಯಪ್ರಜ್ಞೆ ಒಬ್ಬರ ಪ್ರಾಣವನ್ನೇ ಉಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ