ಆ್ಯಪ್ನಗರ

ಬೈಕ್‌ನಲ್ಲಿ ಸಾಗುತ್ತಿತ್ತು ಹಾವು...! : ಮತ್ತೊಂದು ವಾಹನದ ಸವಾರ ಹೇಳಿದಾಗಲೇ ಗೊತ್ತು...!

ವ್ಯಕ್ತಿಯೊಬ್ಬರು ಸಾಗುತ್ತಿದ್ದ ಬೈಕ್‌ನಲ್ಲಿ ಹಾವು ಕಾಣಿಸಿಕೊಂಡಿದೆ. ಮತ್ತೊಂದು ವಾಹನದ ಸವಾರು ಹೇಳಿದಾಗಲೇ ಈ ವಿಷಯ ಬೈಕ್ ಸವಾರನಿಗೆ ಗೊತ್ತಾಗಿದ್ದು...!

Vijaya Karnataka Web 7 Jul 2020, 4:24 pm
ಹಾವುಗಳು ವಾಹನದಲ್ಲಿ ಅಡಗಿ ಕುಳಿತುಕೊಳ್ಳುವುದು ಹೊಸದಲ್ಲ. ಈ ಹಿಂದೆಯೂ ಇಂತಹ ಅನೇಕ ಘಟನೆಗಳು ನಡೆದಿದೆ. ಎಷ್ಟೋ ದೂರ ಹೋದ ಬಳಿಕ ವಾಹನದಲ್ಲಿ ಹಾವು ಅಡಗಿರುವ ವಿಷಯ ಗೊತ್ತಾಗಿದ್ದೂ ಇದೆ. ಸದ್ಯ ಮುಂಬೈಯಲ್ಲೂ ಇದೇ ರೀತಿಯ ಘಟನೆಯೊಂದು ನಡೆದಿದೆ. ಇಲ್ಲಿ ವ್ಯಕ್ತಿಯೊಬ್ಬರು ಸಾಗುತ್ತಿದ್ದ ಬೈಕ್‌ನಲ್ಲೇ ಹಾವೊಂದು ಅಡಗಿ ಕುಳಿತಿತ್ತು. ಬ್ಯುಸಿ ರಸ್ತೆಯಲ್ಲಿ ಸಾಗುತ್ತಿದ್ದಾಗ ಇನ್ನೊಂದು ವಾಹನದ ಸವಾರರು ಈ ವ್ಯಕ್ತಿಗೆ ಹೇಳಿದಾಗಲೇ ತನ್ನ ವಾಹನದಲ್ಲಿ ಹಾವು ಇದೆ ಎಂಬ ಸಂಗತಿ ಇವರಿಗೂ ಗೊತ್ತಾಗಿದ್ದು.
Vijaya Karnataka Web snake
| Screengrab from video | Courtesy : Times of India/Twitter


Also Read : ಒಂದೇ ಕೊಳದಲ್ಲಿ ನೀರು ಕುಡಿಯುತ್ತಿದೆ ಚಿರತೆ ಮತ್ತು ನೀಲ್‌ಗಾಯ್...!


Also Read : Heroic Man : ಮಿನಿ ಬಸ್‌ನ ವಿಂಡ್‌ಸ್ಕ್ರೀನ್ ಒಡೆದು ಮೂವರನ್ನು ರಕ್ಷಿಸಿದ ಸಾಹಸಿ

ಈ ಘಟನೆ ನಡೆದಿರುವುದು ಮುಂಬೈನ ವಿರಾರ್‌ನಲ್ಲಿ. ಈ ವ್ಯಕ್ತಿ ಸೋಮವಾರ ತಮ್ಮ ರಾಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ ಕೆಲಸಕ್ಕೆಂದು ಹೋಗುತ್ತಿದ್ದರು. ಇವರು ವಿರಾರ್ (ಪೂರ್ವ)ದ ಆರ್.ಜೆ ನಾಕಾ ತಲುಪಿದಾಗ ಇವರ ಹಿಂದೆ ಇನ್ನೊಂದು ಬೈಕ್‌ನಲ್ಲಿ ಬರುತ್ತಿದ್ದ ಸವಾರರೊಬ್ಬರು `ನಿಮ್ಮ ಬೈಕ್‌ನಲ್ಲಿ ಹಾವಿದೆ' ಎಂಬ ಇವರಿಗೆ ವಿಷಯ ತಿಳಿಸಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಈ ಬೈಕ್ ಸವಾರ ಒಂದು ಕ್ಷಣ ಬೆಚ್ಚಿಬಿದ್ದಿದ್ದರು. ಬಳಿಕ ತಮ್ಮ ಬುಲೆಟ್‌ ಬೈಕನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಕೋಲಿನ ಸಹಾಯದಿಂದ ಹಾವನ್ನು ಬೈಕ್‌ನಿಂದ ಆಚೆಗೆ ತೆಗೆದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

Also Read : ತಾನು ಕೊರೊನಾ ಸೋಂಕಿತೆಯೆಂದು ಗೊತ್ತಾದಾಗ ಈಕೆ ಮಾಡಿದ್ದೇನು ಗೊತ್ತಾ?: ಕಣ್ಣೀರು ತರಿಸುವ ವಿಡಿಯೋವಿದು

ಬೈಕ್‌ನಿಂದ ಹಾವನ್ನು ಹೊರತೆಗೆಯುವ ದೃಶ್ಯವನ್ನು ಅಲ್ಲೇ ಇದ್ದವರು ಬಲು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಬಳಿಕ ಈ ಹಾವು ಬೈಕ್‌ನಿಂದ ಹೊರಬಂದು ಅಲ್ಲೇ ಇದ್ದ ಪೊದೆಯೊಳಗೆ ಸೇರಿತ್ತು. ಇಂಗ್ಲೀಷ್‌ನಲ್ಲಿ ಈ ಹಾವನ್ನು ಕ್ಯಾಟ್ ಸ್ನೇಕ್ ಎನ್ನುತ್ತಾರೆ. ಇದೊಂದು ಅರೆ ವಿಷಪೂರಿತ ಹಾವು ಎಂದು ಉರಗತಜ್ಞರು ತಿಳಿಸಿದ್ದಾರೆ. ಶನಿವಾರದಿಂದ ಮುಂಬೈಯಲ್ಲಿ ಭಾರಿ ಮಳೆಯಾಗುತ್ತಿದೆ. ಹೀಗಾಗಿ, ಈ ಹಾವು ಮಳೆಯಿಂದ ರಕ್ಷಣೆ ಪಡೆಯಲು ಬೈಕ್‌ನಲ್ಲಿ ಆಶ್ರಯ ಪಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ