ಆ್ಯಪ್ನಗರ

Super Dad : ಸಾವಿಗೂ ಹೆದರದೆ ಮಗಳ ರಕ್ಷಣೆಗೆ ನಿಂತ ಅಪ್ಪ : ಕಲ್ಲುಹೃದಯವನ್ನೇ ಕರಗಿಸುವಂತಹ ವಿಡಿಯೋ ಇದು

ಅಪ್ಪ ಎಂದರೆ ಮಮತೆಯ ಆಕಾಶ. ಮಕ್ಕಳ ರಕ್ಷಣೆ ವಿಚಾರದಲ್ಲಿ ಜೀವ ಕೊಡಲೂ ಸಿದ್ಧರಿರುತ್ತಾರೆ ತಂದೆ. ಅದಕ್ಕೆ ಈ ವಿಡಿಯೋ ಸಾಕ್ಷಿ...

Vijaya Karnataka Web 30 Jan 2020, 1:14 pm
ಹೆತ್ತವರು ಎಂದರೆ ದೇವರು... ಪ್ರತೀಕ್ಷಣವೂ ಮಕ್ಕಳ ಬಗ್ಗೆಯೇ ಯೋಚಿಸುವ ಜೀವಗಳೆಂದರೆ ಅದು ಅಪ್ಪ ಅಮ್ಮ ಮಾತ್ರ... ಮಕ್ಕಳ ರಕ್ಷಣೆ, ಒಳಿತಿನ ವಿಚಾರದಲ್ಲಿ ಹೆತ್ತವರು ಜೀವ ಕೊಡಲೂ ಸಿದ್ಧ. ಇದಕ್ಕೆ ಈ ವಿಡಿಯೋಕ್ಕಿಂತ ಬೇರೆ ಸಾಕ್ಷಿ ಬೇಕಾಗಿಲ್ಲ...
Vijaya Karnataka Web father
| Screengrab from video | Courtesy : JEMOVIĆ/Twitter



ಸೂಪರ್ ತಂದೆಯೊಬ್ಬರು ತನ್ನ ಮಗಳನ್ನು ರೈಲಿನಡಿಗೆ ಬೀಳುವುದನ್ನು ತಪ್ಪಿಸಿದ್ದಾರೆ. ಅದೂ ತನ್ನ ಜೀವದ ಹಂಗು ತೊರೆದು...! ಅಪ್ಪ ಅಂದರೇನೆ ಹಾಗೆ. ತನ್ನ ಬದುಕಿನ ಬಗ್ಗೆ ಇವರು ಅರೆಕ್ಷಣವೂ ಇಲ್ಲಿ ಯೋಚಿಸಲಿಲ್ಲ... ತನ್ನ ಪ್ರಾಣವನ್ನೂ ಲೆಕ್ಕಿಸಲಿಲ್ಲ...

Also Read : 4 ಕಿಲೋ ಮೀಟರ್ ನಡೆದೇ ವಧುವಿನ ಮನೆಗೆ ಹೋದ ವರ...! : ಯಾಕೆ ಗೊತ್ತಾ...?

ಇದು ಈಜಿಪ್ಟಿನ ಇಸ್ಮಾಯಿಲಿಯಾದಲ್ಲಿ ನಡೆದ ಘಟನೆ. ಹೆಣ್ಣು ಮಗಳು ರೈಲು ಹಳಿ ದಾಟುವಾಗ ಆಯತಪ್ಪಿ ಹಳಿ ಮೇಲೆ ಬಿದ್ದಿದ್ದಾಳೆ. ಇದೇ ಸಂದರ್ಭದಲ್ಲಿ ಗೂಡ್ಸ್‌ ರೈಲು ಕೂಡಾ ಬಂದಿದೆ. ಈ ವೇಳೆ, ಒಂದಿನಿತೂ ಯೋಚಿಸದ ತಂದೆ ತಾನೂ ಹಳಿ ಪಕ್ಕ ಹಾರಿ ಮಗಳನ್ನು ಬಿಗಿದಪ್ಪಿ ರಕ್ಷಿಸಿದ್ದಾರೆ. ಈ ವಿಡಿಯೋವನ್ನು ಅಲ್ಲೇ ಇದ್ದವರು ತಮ್ಮ ಮೊಬೈಲ್ ಫೋನಿನಲ್ಲಿ ಸೆರೆ ಹಿಡಿದಿದ್ದು, ಇದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

Also Read : ಶಾಪಗ್ರಸ್ತ ದ್ವೀಪ : ದಿವಾಳಿಯಾಗುತ್ತಿದ್ದ ಸಿರಿವಂತರು, ನಿಗೂಢವಾಗಿ ಜೀವ ಬಿಡುತ್ತಿದ್ದ ಮಾಲೀಕರು...!

ಒಂದು ಕ್ಷಣ ಹೃದಯವೇ ಭಾರವಾಗುವಂತಹ ದೃಶ್ಯವಿದು. ಈ ಘಟನೆ ನಡೆಯುವಾಗ ರೈಲು ನಿಲ್ದಾಣದಲ್ಲಿ ಇದ್ದವರು ಭಯಭೀತರಾಗಿ ನಿಂತಿದ್ದರು. ಇಬ್ಬರಿಗೂ ಏನೂ ಆಗದಿರಲಿ ಎಂದು ಮನಸ್ಸಿನಲ್ಲೇ ಪ್ರಾರ್ಥಿಸುತ್ತಿದ್ದರು. ನಿಜಕ್ಕೂ ತಂದೆಯ ಈ ಪ್ರೀತಿ ನೋಡಿದಾಗ ಹೆಮ್ಮೆ ಎನಿಸುತ್ತದೆ. ಹೀಗಾಗಿ, ಈ ತಂದೆಯನ್ನು ನೆಟ್ಟಿಗರು `ಸೂಪರ್ ಡ್ಯಾಡ್' ಎಂದು ಬಣ್ಣಿಸಿದ್ದಾರೆ.

ಹಾಗಂತ, ಎಲ್ಲರೂ ಈ ತಂದೆಯನ್ನು ಹೊಗಳಿಲ್ಲ. ಕೆಲವರು ಈ ಘಟನೆಗೆ ತಂದೆಯ ನಿರ್ಲಕ್ಷ್ಯವೇ ಕಾರಣ ಎಂದೂ ಬೊಟ್ಟು ಮಾಡಿದ್ದಾರೆ. ಪ್ರಯಾಣಿಕರಿಗೆ ಪಾದಚಾರಿ ಮಾರ್ಗವಿದ್ದರೂ ಇವರು ಮಗಳನ್ನು ಕರೆದುಕೊಂಡು ಒಂದು ಬದಿಯಿಂದ ಇನ್ನೊಂದು ಬದಿಗೆ ಹಳಿ ಮೇಲೆಯೇ ಬಂದಿದ್ದರು ಎಂದು ರೈಲು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

Also Read : Money Trees : ಇಲ್ಲಿರುವ ಮರಗಳಲ್ಲಿ ಎಲೆಗಿಂತ ನಾಣ್ಯಗಳೇ ಹೆಚ್ಚಿವೆ...! ಆದರೆ, ಯಾರೂ ಕೊಂಡೊಯ್ಯುವಂತಿಲ್ಲ...!

ನಿಜ. ಪಾದಚಾರಿ ಮಾರ್ಗವನ್ನು ಬಳಸಿದ್ದರೆ ಮತ್ತು ಮೊದಲೇ ಎಚ್ಚರಿಕೆ ವಹಿಸಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ತಪ್ಪಾಗಿದೆ ನಿಜ. ಆದರೆ, ಮಗಳ ರಕ್ಷಣೆಗೆ ಈ ತಂದೆಯ ಸಾಹಸವನ್ನು ಮೆಚ್ಚಲೇಬೇಕು. ಜೊತೆಗೆ, ಈ ಘಟನೆ ಹಳಿ ದಾಟುವವರಿಗೆ ಎಚ್ಚರಿಕೆಯ ಗಂಟೆಯೂ ಆಗಿದೆ. ಯಾಕೆಂದರೆ, ಎಲ್ಲಾ ಸಂದರ್ಭದಲ್ಲಿ ಅದೃಷ್ಟ ಕೈ ಹಿಡಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಾಗಿ, ನಮ್ಮ ಎಚ್ಚರಿಕೆಯಲ್ಲಿ ನಾವು ಇದ್ದರೆ ಒಳಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ