ಗ್ಲಾಸ್ನಲ್ಲಿದ್ದ ಪಾನೀಯ ಉಳಿಸಲು ಹೋಗಿ ಜಾರಿ ಬೀಳುತ್ತಿದ್ದ ಮಗುವನ್ನು ಬಿಟ್ಟ ಮಹಿಳೆ!
ಈ ದೃಶ್ಯ ಈಗ ನೆಟ್ಟಿಗರಲ್ಲಿ ಬಗೆಬಗೆ ಚರ್ಚೆಯನ್ನು ಹುಟ್ಟುಹಾಕಿದೆ. ಹಲವರು ವೃದ್ಧೆಯನ್ನು ಟೀಕಿಸಿದರೆ, ಕೆಲವರು ಹಾಸ್ಯದ ದಾಟಿಯಲ್ಲಿ ಕಿಚಾಯಿಸಿದ್ದಾರೆ.
Vijaya Karnataka Web 17 Oct 2020, 5:10 pm
ಅಂಬೆಗಾಲಿಡುತ್ತಿರುವ ಕಂದ ಬೀಳುತ್ತಿದೆ... ಆಗ ಪಕ್ಕದಲ್ಲಿ ಕುಳಿತಿದ್ದವರ ಗ್ಲಾಸ್ನಲ್ಲಿದ್ದ ಪಾನೀಯ ಕೂಡಾ ಚೆಲ್ಲುತ್ತದೆ... ಎರಡೂ ಏಕಕಾಲದಲ್ಲಿ ನಡೆಯುತ್ತದೆ... ಇಂತಹ ಸಂದರ್ಭದಲ್ಲಿ ಎಲ್ಲರೂ ತಕ್ಷಣ ಏನು ಮಾಡುತ್ತಾರೆ...? `ಮಗುವನ್ನು ಹಿಡಿಯುತ್ತಾರೆ' ಎಂದು ನೀವು ಬಹುತೇಕರು ಉತ್ತರ ಕೊಡಬಹುದು. ಅದು ನಿಜ ಕೂಡಾ. ಬಹುತೇಕರು ಹೀಗೆಯೇ ಮಾಡುತ್ತಾರೆ ಮತ್ತು ಎಲ್ಲರ ನಿರೀಕ್ಷೆಯೂ ಅದೇ ಇರುತ್ತದೆ. ಆದರೆ, ಬೀಳುತ್ತಿರುವ ಮಗುವನ್ನು ಬಿಟ್ಟು ಗ್ಲಾಸ್ ಉಳಿಸಲು ನೋಡುವವರು ಎಂದಾದರೂ ನೋಡಿದ್ದೀರಾ...? ಸದ್ಯ ಇಂತಹದ್ದೊಂದು ವಿಡಿಯೋ ವೈರಲ್ ಆಗುತ್ತಿದೆ.
ವೃದ್ಧೆಯೊಬ್ಬರು ತನ್ನ ಪಕ್ಕದಲ್ಲಿದ್ದ ಅಂಬೆಗಾಲುಡುತ್ತಿದ್ದ ಕಂದ ಬೀಳುತ್ತಿದ್ದರೂ ಗ್ಲಾಸ್ನಲ್ಲಿದ್ದ ಪಾನೀಯ ಉಳಿಸಲು ಯತ್ನಿಸುತ್ತಿರುವ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿದ ಎಲ್ಲರೂ ಬಗೆಬಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Also Read : `ಕಳ್ಳತನ'ವಾಗಿದೆ ಬಸ್ಸ್ಟಾಪ್! : ಮಾಹಿತಿ ಕೊಟ್ಟವರಿಗೆ 5000 ರೂ. ಬಹುಮಾನ!
@CulturedRuffian ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ. ಬರೀ ಮೂರು ಸೆಕೆಂಡುಗಳ ವಿಡಿಯೋ ಇದು. ಸದ್ಯ ಈ ವಿಡಿಯೋ ಎಂಟು ಮಿಲಿಯನ್ ವೀಕ್ಷಣೆ ಗಳಿಸಿದೆ...! ಈ ಕ್ಲಿಪ್ನಲ್ಲಿ ಟೇಬಲ್ ಪಕ್ಕದಲ್ಲಿ ಕುಳಿತಿರುವ ಮಹಿಳೆಯೊಬ್ಬರು ಅಂಬೆಗಾಲಿಡುತ್ತಿರುವ ಕಂದನನ್ನು ನೋಡಿಕೊಳ್ಳುತ್ತಿರುವ ದೃಶ್ಯವಿದೆ. ಟೇಬಲ್ನಲ್ಲಿ ಇವರ ಪಾನೀಯದ ಗ್ಲಾಸ್ ಕೂಡಾ ಇದೆ. ಈ ಗ್ಲಾಸನ್ನು ಕಂದ ಹಿಡಿಯುತ್ತಿದ್ದ. ಆದರೆ, ಕಂದನ ಕೈ ಜಾರಿ ಗ್ಲಾಸ್ ಬೀಳುತ್ತದೆ. ಈ ವೇಳೆ, ಈ ಮಹಿಳೆ ಬೀಳುತ್ತಿದ್ದ ಕಂದನನ್ನು ಹಿಡಿಯಲಿಲ್ಲ. ಬದಲಾಗಿ, ಚೆಲ್ಲುತ್ತಿದ್ದ ತನ್ನ ಪಾನೀಯವನ್ನು ಕಾಪಾಡುವತ್ತನೇ ಇವರ ಗಮನ ಕೇಂದ್ರೀಕೃತವಾಗಿತ್ತು...!
Also Read : ಹೆಡ್ಫೋನ್ ಬಳಸುವಾಗ ಇರಲಿ ಎಚ್ಚರಿಕೆ : ಶಾಕಿಂಗ್ ವಿಡಿಯೋ ವೈರಲ್
ಈ ವೃದ್ಧೆ ಆಕಸ್ಮಿಕವಾಗಿ ಕಂದನ ಪಕ್ಕದಲ್ಲಿದ್ದ ಕೈಯನ್ನು ತೆಗೆದಿರಲೂಬಹುದು. ಆದರೆ, ತಕ್ಷಣಕ್ಕೆ ಇವರು ಕಂದನಿಗೆ ಬಲವಾಗಿದ್ದ ಕೈ ತೆಗೆದಿದ್ದರಿಂದ ಮಗು ಕೆಳಗೆ ಬಿದ್ದಿತ್ತು.
Also Read : ಸುಮ್ಮನಿದ್ದ ಗೂಳಿಯನ್ನು ಕೆಣಕಿದ ವೃದ್ಧ : ಮತ್ತೆ ನಡೆದದ್ದೆಲ್ಲಾ ನೋವಿನ ಘಟನೆ...
ಸದ್ಯ ಈ ವಿಡಿಯೋ ನೆಟ್ಟಿಗರಲ್ಲಿ ಬಗೆಬಗೆ ಚರ್ಚೆಯನ್ನು ಹುಟ್ಟುಹಾಕಿದೆ. ಬಹುತೇಕರು ಮಗುವನ್ನು ಕೆಳಗೆ ಬೀಳುವುದನ್ನು ತಪ್ಪಿಸದ ವೃದ್ಧೆಯ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಕೆಲವರು ಬಲು ತಮಾಷೆಯ ದಾಟಿಯಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಈ ಚರ್ಚೆಗಳೇನೇ ಇದ್ದರೂ ಕಂದ ನೆಲಕ್ಕೆ ಬೀಳುವಾಗಂತೂ ನೋಡುವ ಎಲ್ಲರಿಗೂ ಖಂಡಿತಾ ನೋವಾಗುತ್ತದೆ...