ಆ್ಯಪ್ನಗರ

ಮಹಿಳೆಯ ಕಾಲಿಗೆ ಸುತ್ತಿಕೊಂಡ ಹೆಬ್ಬಾವು! : ರಕ್ಷಣೆಗೆಂದು ಹೋದಾಕೆಯ ರಕ್ಷಣೆಗೆ ಪೊಲೀಸರೇ ಬರಬೇಕಾಯಿತು!

ಪಾಪ... ಆ ಮಹಿಳೆ ಹಾವಿಗೆ ರಕ್ಷಣೆಗೆಂದು ಹೋಗಿದ್ದರು. ಆದರೆ, ಪರಿಸ್ಥಿತಿ ಆಕೆಯ ರಕ್ಷಣೆಗೆ ಪೊಲೀಸರು ಧಾವಿಸುವಂತೆ ಮಾಡಿತ್ತು...!

Vijaya Karnataka Web 19 Oct 2020, 3:33 pm
ಇದೊಂದು ಭಯಾನಕ ವಿಡಿಯೋ... ಆದರೆ, ಅದೃಷ್ಟ ಚೆನ್ನಾಗಿತ್ತು. ಹಾವು ಸೇರಿ ಯಾರಿಗೂ ತೊಂದರೆಯಾಗಿಲ್ಲ. ಸಕಾಲದಲ್ಲಿ ನಡೆದ ರಕ್ಷಣಾ ತಂಡದ ಕಾರ್ಯಾಚರಣೆಯನ್ನು ನಾವು ಮೆಚ್ಚಲೇಬೇಕು.
Vijaya Karnataka Web Python
| Screengrab from video | Courtesy : Queensland Police Service/Facebook


ಯಾವುದೇ ಹಾವು ಆಗಿರಲಿ, ಅದು ವಿಷಕಾರಿಯಾಗಿರಲಿ, ವಿಷವಿಲ್ಲದ ಹಾವೇ ಆಗಿರಲಿಲ್ಲ. ಹಾವನ್ನು ಕಂಡ ತಕ್ಷಣ ಬಹುತೇಕರು ಒಂದು ಕ್ಷಣ ದಿಗಿಲುಗೊಳ್ಳುವುದಂತೂ ಸತ್ಯ. ಆದರೆ, ಕೆಲವರಿಗೆ ಈ ಭಯ ಇಲ್ಲ. ಹೀಗಾಗಿ, ಕಷ್ಟದಲ್ಲಿದ್ದ ಹಾವುಗಳನ್ನು ರಕ್ಷಿಸುವ ಹೃದಯವಂತಿಕೆ ತೋರಿಸುತ್ತಾರೆ. ಇದರಲ್ಲಿ ಯಶಸ್ವಿ ಕೂಡಾ ಆಗುತ್ತಾರೆ. ಆದರೆ, ಕೆಲವೊಂದು ಸಲ ಪರಿಸ್ಥಿತಿ ಭಿನ್ನವಾಗುತ್ತದೆ. ರಕ್ಷಿಸಬೇಕೆಂದು ಬಂದಿದ್ದ ಹಾವಿನಿಂದಲೇ ಸಂಕಷ್ಟ ಎದುರಾಗುವುದೂ ಇದೆ. ಇದು ಕೂಡಾ ಅಂತಹದ್ದೇ ಒಂದು ಘಟನೆ. ಈ ದೃಶ್ಯವನ್ನು ನೋಡುವಾಗ ಹೃದಯ ಒಂದು ಕ್ಷಣ ಧಗ್ ಎನ್ನುತ್ತದೆ.

Also Read : ಕೊರೊನಾ ಸೋಂಕಿತರ ಖುಷಿಗೆ ವೈದ್ಯರ ಅದ್ಭುತ ಡಾನ್ಸ್‌ : ಡಾಕ್ಟರ್ ಪ್ರತಿಭೆಗೆ ನೆಟ್ಟಿಗರಿಂದ ಶಹಬ್ಬಾಸ್

ಇದು ನಡೆದಿರುವುದು ದಕ್ಷಿಣ ಕ್ವೀನ್ಸ್‌ ಲ್ಯಾಂಡ್‌ನ ವಾಯುವ್ಯ ಬ್ರಿಸ್ಬೇನ್‌ನ ಸ್ಯಾಮ್‌ಫೋರ್ಡ್ ವ್ಯಾಲಿಯಲ್ಲಿ. ಮಹಿಳೆಯೊಬ್ಬರು ಹೆಬ್ಬಾವನ್ನು ರಕ್ಷಿಸಲು ಹೋಗಿ ತಾವೇ ಸಂಕಷ್ಟಕ್ಕೆ ಸಿಲುಕಿದ ಕತೆ ಇದು. ಈ ಮಹಿಳೆ ತನ್ನ ಕಾರಿನೊಳಗೆ ಬೃಹತ್ ಗಾತ್ರದ ಹೆಬ್ಬಾವನ್ನು ಕಂಡಿದ್ದರು. ಹೀಗಾಗಿ, ಈ ಹಾವನ್ನು ರಕ್ಷಿಸಲು ಇವರು ಯತ್ನಿಸಿದ್ದರು. ಆದರೆ, ಪರಿಸ್ಥಿತಿ ಇವರಂದುಕೊಂಡಂತೆ ಇರಲಿಲ್ಲ. ಯಾಕೆಂದರೆ, ಆ ಬೃಹತ್ ಹೆಬ್ಬಾವು ಇವರ ಕಾಲನ್ನೇ ಸುಟ್ಟುವರಿದುಕೊಂಡಿತ್ತು...! ಎಷ್ಟು ಪ್ರಯತ್ನಿಸಿದರೂ ಹಾವಿನ ಹಿಡಿತವನ್ನು ಸಡಿಲಗೊಳಿಸಲು ಸಾಧ್ಯವಾಗಲೇ ಇಲ್ಲ. ಪರಿಣಾಮ, ಅನಿವಾರ್ಯವಾಗಿ ಇವರು ಕ್ವೀನ್ಸ್‌ಲ್ಯಾಂಡ್ ಪೊಲೀಸರಿಗೆ ಮಾಹಿತಿ ನೀಡಿದ್ದರು.

Also Read : ತಾಯಿಯನ್ನು ರಕ್ಷಿಸಲು ಶಸ್ತ್ರಸಜ್ಜಿತ ದರೋಡೆಕೋರರೊಂದಿಗೆ ಹೋರಾಡಿದ ಐದು ವರ್ಷದ ಪೋರ

ಸಂಕಷ್ಟದ ಬಗೆಗಿನ ಕರೆ ಸ್ವೀಕರಿಸಿದ ತಕ್ಷಣ ಇಬ್ಬರು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದರು. ಹೀಗೆ ಬಂದ ಪೊಲೀಸರು ಹಾವನ್ನು ರಕ್ಷಿಸುವ ಕಾರ್ಯಕ್ಕಿಳಿದಿದ್ದರು. ಹಾಗಂತ, ಈ ಕಾರ್ಯಾಚರಣೆ ಸುಲಭದ್ದಾಗಿರಲಿಲ್ಲ. ಈ ಹಾವಿನ ಉದ್ದವೇ 2-3 ಮೀಟರ್ ಇತ್ತು...! ಒಬ್ಬರು ಮಹಿಳಾ ಅಧಿಕಾರಿ ಮಹಿಳೆಯ ಕಾಲಿಗೆ ಸುತ್ತಿಕೊಂಡಿರುವ ಹಾವನ್ನು ಬಿಡಿಸುವ ಯತ್ನ ಮಾಡುತ್ತಿದ್ದರೆ, ಮತ್ತೊಬ್ಬರು ಆ ದೃಶ್ಯವನ್ನು ಸೆರೆ ಹಿಡಿಯುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಹೆಬ್ಬಾವಿನಿಂದ ಸಂಕಷ್ಟಕ್ಕೆ ಗುರಿಯಾಗಿದ್ದ ಮಹಿಳೆ ಹಾವಿನ ತಲೆಯನ್ನು ಹಿಡಿದುಕೊಂಡಿದ್ದರೆ, ಪೊಲೀಸ್ ಅಧಿಕಾರಿ ಹಾವಿನ ಬಾಲ ಹಿಡಿದು ಅದನ್ನು ಬಿಡಿಸುವ ಯತ್ನ ಮಾಡುತ್ತಿದ್ದರು.


Also Read : ಕಟ್ಟಡದಲ್ಲಿ ನೇತಾಡುತ್ತಿದ್ದ ಬಾಲಕನ ಜೀವ ಉಳಿಸಿದ ಬೀದಿ ವ್ಯಾಪಾರಿ : ವಿಡಿಯೋ ವೈರಲ್

ಹೀಗೆ ಒಂದಷ್ಟು ಹೊತ್ತಿನ ಪ್ರಯತ್ನದ ಬಳಿಕ ಹಾವಿನ ಹಿಡಿತವನ್ನು ಮಹಿಳೆಯ ಕಾಲಿನಿಂದ ಸಡಿಲಗೊಳಿಸುವಲ್ಲಿ ಪೊಲೀಸ್ ಅಧಿಕಾರಿ ಯಶಸ್ವಿಯಾಗಿದ್ದರು. ಬಳಿಕ ಆ ಮಹಿಳೆ ಹಾವನ್ನು ಹಿಡಿದು ಹುಲ್ಲುಗಳ ನಡುವೆ ಬಿಟ್ಟಿದ್ದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೆಲವರು ಈ ದೃಶ್ಯವನ್ನು ಕಂಡು ಆಘಾತ ವ್ಯಕ್ತಪಡಿಸಿದರೆ, ಹಲವರು ಹಾವನ್ನು ರಕ್ಷಣೆ ಮಾಡುವ ಎಲ್ಲರ ಪ್ರಯತ್ನವನ್ನೂ ಕೊಂಡಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ