ಆ್ಯಪ್ನಗರ

ಅರಣ್ಯ ಇಲಾಖೆ ಸಿಬ್ಬಂದಿ ಮೇಲೆರಗಿದ ಚಿರತೆ : ಸೆರೆ ಹಿಡಿದರೂ ಉಳಿಯಲೇ ಇಲ್ಲ ಖುಷಿ!

ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಯ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಆದರೆ, ಕಷ್ಟಪಟ್ಟು ಚಿರತೆ ಸೆರೆ ಹಿಡಿದರೂ ಅರಣ್ಯ ಸಿಬ್ಬಂದಿಗೆ ಉಳಿಯಲಿಲ್ಲ ಖುಷಿ...!

Vijaya Karnataka Web 29 May 2020, 8:25 am
ಮೊದಲೇ ಬೇಲಿಯಲ್ಲಿ ಹಾಕಿದ್ದ ಉರುಳಿಗೆ ಸಿಲುಕಿಕೊಂಡಿದ್ದ ಕೋಪದಲ್ಲಿತ್ತು ಆ ಚಿರತೆ... ಈ ನೋವಿನ ನಡುವೆಯೇ ಅಲ್ಲಿ ಜನರೆಲ್ಲಾ ಜಮಾಯಿಸಿದ್ದನ್ನು ಕಂಡು ಚಿರತೆಯ ಕೋಪ ನೆತ್ತಿಗೇರಿತ್ತು. ಹೀಗಾಗಿ, ತಾನು ಅಲ್ಲಿಂದ ಪಾರಾಗಲೆಂದು ಶರವೇಗದಲ್ಲಿ ಓಡಿದ ಆ ಚಿರತೆ ಅರಣ್ಯ ಸಿಬ್ಬಂದಿ ಮತ್ತು ರಕ್ಷಣಾ ತಂಡದಲ್ಲಿದ್ದ ಇನ್ನೊಬ್ಬ ಸದಸ್ಯರ ಮೇಲೆ ಚಂಗನೆ ಹಾರಿ ಅಲ್ಲಿಂದ ಓಡಲು ಯತ್ನಿಸಿತ್ತು...
Vijaya Karnataka Web Image by Raik Thorstad from Pixabay
| Representative image | Image by Raik Thorstad from Pixabay


Also Read : ಪಾಳು ಬಿದ್ದಿದ್ದ ಒಂದು ಸುಂದರ ಚರ್ಚ್‌ನಲ್ಲಿ ಭಯ ಸೃಷ್ಟಿಸಿತ್ತು ಅದೊಂದು ಕತೆ...!

ಈ ದೃಶ್ಯ ಸೆರೆಯಾಗಿದ್ದು ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮರಿಗುಡ ಮಂಡಲದನ ರಾಜಾಪೇಟ್ ತಾಂಡಾದಲ್ಲಿ. ಇಲ್ಲಿನ ಜಮೀನಿಗೆ ಬಂದು ತೊಂದರೆ ಕೊಡುವ ಕಾಡುಹಂದಿಯನ್ನು ಹಿಡಿಯುವ ಸಲುವಾಗಿ ಈ ಉರುಳು ಅಳವಡಿಸಲಾಗಿತ್ತು. ಈ ಉರುಳಿಗೆ ಸಿಲುಕಿ ಸುಮಾರು ಏಳು ವರ್ಷದ ಈ ಗಂಡು ಚಿರತೆ ಸಂಕಷ್ಟಕ್ಕೆ ತುತ್ತಾಗಿತ್ತು. ಇದನ್ನು ಕಂಡ ಜಮೀನಿನ ಮಾಲಿಕರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣ ಈ ಚಿರತೆ ಸೆರೆ ಹಿಡಿಯಲು ಹೈದರಾಬಾದಿನಿಂದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆಗಿಳಿದಿದ್ದರು. ಮತ್ತೊಂದೆಡೆ ಚಿರತೆಯನ್ನು ನೋಡಲು ಜನ ಕೂಡಾ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇತ್ತ, ಕಾರ್ಯಾಚರಣೆ ವೇಳೆ ಅನಿರೀಕ್ಷಿತ ಘಟನೆಯೊಂದು ನಡೆದು ಹೋಗಿತ್ತು. ಅದೇನೆಂದರೆ, ಉರುಳಿನಿಂದ ಪಾರಾದ ಚಿರತೆ ಓಡುವ ಭರದಲ್ಲಿ ಇಬ್ಬರ ಮೇಲೆ ಹಾರಿ ಗಾಯ ಮಾಡಿತ್ತು... ಹೀಗಾಗಿ, ಅಲ್ಲೊಂದು ಭಯಭೀತ ಪರಿಸ್ಥಿತಿ ನಿರ್ಮಾಣವಾಗಿತ್ತು.

Also Read : 76 ವರ್ಷದ ಅಜ್ಜಿಯ ಜೋಕಾಲಿಯಾಟ...! : ವೃದ್ಧೆಯ ಉತ್ಸಾಹಕ್ಕೆ ನೆಟ್ಟಿಗರು ಫಿದಾ

ಹೀಗೆ ಓಡಿದ್ದ ಚಿರತೆ ಅರಣ್ಯ ಇಲಾಖೆ ಸಿಬ್ಬಂದಿ ಬಂದಿದ್ದ ಜೀಪಿನಡಿಯಲ್ಲಿ ಹೋಗಿ ಕುಳಿತಿತ್ತು. ಇದಾದ ಬಳಿಕ ಬಲೆಯ ಮೂಲಕ ಕಷ್ಟಪಟ್ಟು ಚಿರತೆಯನ್ನು ಸೆರೆ ಹಿಡಿದ ಸಿಬ್ಬಂದಿ ನೆಹರೂ ಜಿಯಾಲಾಜಿಲ್ ಪಾರ್ಕ್‌ಗೆ ಕರೆತರುತ್ತಿದ್ದರು. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಚಿರತೆ ದಾರಿ ಮಧ್ಯೆಯೇ ಅಸುನೀಗಿತ್ತು.

Also Read : ಧಗಧಗನೇ ಹೊತ್ತಿ ಉರಿಯುತ್ತಿದ್ದರೂ ಸಾಗಿದ ಲಾರಿ...!

ಸದ್ಯ ಈ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಎಲ್ಲರೂ ಈ ಭಯಾನಕ ದೃಶ್ಯ ಕಂಡು ಬೆಚ್ಚಿಬಿದ್ದಿದ್ದಾರೆ. ಜೊತೆಗೆ, ಗಾಯಗೊಂಡವರು ಮತ್ತು ಅಸುನೀಗಿದ ಚಿರತೆಯ ಸ್ಥಿತಿಗೂ ಮರುಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ