ಆ್ಯಪ್ನಗರ

ಟೇಕಾಫ್ ಸಮಯದಲ್ಲಿ ವಿಮಾನದ ರೆಕ್ಕೆ ಮೇಲೆ ಕುಳಿತು ವ್ಯಕ್ತಿಯ ರಂಪಾಟ! : ಭಯಾನಕ ವಿಡಿಯೋ ವೈರಲ್

ಇದು ವ್ಯಕ್ತಿಯೊಬ್ಬನ ರಂಪಾಟದ ವಿಲಕ್ಷಣ ವಿಡಿಯೋ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Vijaya Karnataka Web 15 Dec 2020, 4:00 pm
ಕೆಲವರ ತಲೆಯಲ್ಲಿ ಅದ್ಯಾವ ರೀತಿಯ ಯೋಚನೆ ಸುಳಿದಾಡುತ್ತಿರುತ್ತದೋ ಏನೋ, ವಿಮಾನ ಟೇಕಾಫ್ ಆಗುವಷ್ಟರಲ್ಲಿ ಏನೇನೋ ರಂಪಾಟ ಸೃಷ್ಟಿ ಮಾಡುತ್ತಾರೆ. ಕೆಲ ಮಂದಿಯ ರಾದ್ಧಾಂತ ಹೇಗಿರುತ್ತದೆ ಎಂದರೆ ಒಂದು ಕ್ಷಣ ಎಲ್ಲರೂ ಭಯಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ಕೂಡಾ ಅಂತಹದ್ದೇ ಹುಚ್ಚಾಟದ ವಿಡಿಯೋ. ಇಲ್ಲೊಬ್ಬ ವ್ಯಕ್ತಿ ವಿಮಾನ ಟೇಕಾಫ್ ಆಗುವ ಹೊತ್ತಿಗೆ ಸೀದಾ ಹೋಗಿ ವಿಮಾನದ ರೆಕ್ಕೆ ಮೇಲೆ ಕುಳಿತಿದ್ದಾನೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಭಯಾನಕ ಮತ್ತು ವಿಲಕ್ಷಣ ವಿಡಿಯೋ ವೈರಲ್ ಆಗುತ್ತಿದೆ.
Vijaya Karnataka Web Image by StockSnap  from Pixabay
| Representative image | Image by StockSnap from Pixabay


ಇದು ನಡೆದದ್ದು ಲಾಸ್ ವೇಗಸ್‌ನಲ್ಲಿ. ಅಲಸ್ಕಾ ಏರ್‌ಲೈನ್ಸ್‌ ಮೊನ್ನೆ ಇನ್ನೇನು ಟೇಕಾಫ್ ಆಗಬೇಕು ಎನ್ನುವಷ್ಟರಲ್ಲಿ ವ್ಯಕ್ತಿಯೊಬ್ಬ ವಿಮಾನದ ರೆಕ್ಕೆ ಮೇಲೆ ಹೋಗಿ ಕುಳಿತು ಅದೇನೋ ಕಿರುಚಾಡುತ್ತಿದ್ದ. ಈ ಮೂಲಕ ಭಯಾನಕ ವಾತಾವರಣ ಸೃಷ್ಟಿಸಿದ್ದ.

Also Read : ಸೆಖೆ ಆಗುತ್ತದೆಯೆಂದು ವಿಮಾನದ ರೆಕ್ಕೆಯಲ್ಲಿ ನಿಂತು `ಗಾಳಿ' ತೆಗೆದುಕೊಂಡ ಮಹಿಳೆ!

ಈ ವಿಮಾನ ಲಾಸ್‌ ವೇಗಸ್‌ನಿಂದ ಪೋರ್ಟ್‌ಲ್ಯಾಂಡ್‌ನತ್ತ ಪ್ರಯಾಣಕ್ಕೆ ಅಣಿಯಾಗುತ್ತಿತ್ತು. ಮೆಕ್‌ಕಾರ್ರನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲು ವಿಮಾನ ಸಜ್ಜಾಗುತ್ತಿತ್ತು. ಈ ವೇಳೆ, ಇನ್ನೇನು ವಿಮಾನ ಹೊರಡಬೇಕು ಎನ್ನುವಷ್ಟರಲ್ಲಿ ವ್ಯಕ್ತಿಯೊಬ್ಬ ವಿಮಾನದ ಕಡೆ ಬರುವುದನ್ನು ಪೈಲಟ್ ಗಮನಿಸಿದ್ದರು. ಜೊತೆಗೆ, ನಿಯಂತ್ರಣ ಕೊಠಡಿಗೂ ಮಾಹಿತಿ ನೀಡಿದ್ದರು. ಹೀಗೆ ಬಂದಿದ್ದ ವ್ಯಕ್ತಿ ವಿಮಾನದ ರೆಕ್ಕೆ ಮೇಲೆ ಹತ್ತಿ ಕುಳಿತಿದ್ದ. ಈ ವ್ಯಕ್ತಿ ವಿಮಾನದ ರೆಕ್ಕೆ ಮೇಲೆ ನಡೆದುಕೊಂಡು ಹೋಗುವುದು ಮತ್ತು ಅಲ್ಲೇ ಕುಳಿತುಕೊಳ್ಳುವುದನ್ನು ವಿಮಾನದಲ್ಲಿದ್ದ ಪ್ರಯಾಣಿಕರು ಸೆರೆ ಹಿಡಿದಿದ್ದರು.


Also Read : ಫ್ಯಾಮಿಲಿ ಫೋಟೋಶೂಟ್ ವೇಳೆ ಅಮ್ಮನಿಗೆ ಮಕ್ಕಳ ಸರ್ಪ್ರೈಸ್ : ಕಣ್ಣಾಲಿಗಳನ್ನು ತುಂಬಿಸುವ ದೃಶ್ಯವಿದು!

ವಿಷಯ ತಿಳಿದ ತಕ್ಷಣ ಲಾಸ್ ವೇಗಸ್ ಮೆಟ್ರೋಪಾಲಿಟನ್ ಪೊಲೀಸರು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದರು. ಜೊತೆಗೆ, ಈ ವ್ಯಕ್ತಿಯ ಮನವೊಲಿಸಿ ಕೆಳಗಿಳಿಸಲು ಅಧಿಕಾರಿಗಳು ಪ್ರಯತ್ನಿಸಿದ್ದರು. ಆದರೆ, ಅಧಿಕಾರಿಗಳನ್ನು ಕಂಡ ತಕ್ಷಣ ಈತ ರೆಕ್ಕೆಯ ಮೇಲೆ ಏರಲು ಹೋಗಿ ನಿಯಂತ್ರಣ ಜಾರಿ ಕೆಳಗೆ ಬಿದ್ದಿದ್ದ...! ತಕ್ಷಣ ಈತನನ್ನು ವಶಕ್ಕೆ ಪಡೆದಿದ್ದ ಅಧಿಕಾರಿಗಳು ಈತನಿಗೆ ಚಿಕಿತ್ಸೆ ಕೊಡಿಸಿದ್ದಾರೆ.

Also Read : ಸ್ಟೆಪ್ಲರ್ ಪಿನ್‌ ಮೂಲಕವೇ ಮೂಡಿತ್ತು ಅದ್ಭುತ ಚಿತ್ರ : ಬೆರಗು ಮೂಡಿಸುವ ಕೌಶಲ್ಯವಿದು

ಇಷ್ಟೆಲ್ಲಾ ರಂಪಾಟದಿಂದ ವಿಮಾನ ಹಾರಾಟ ತಡವಾಗಿತ್ತು. ಮಧ್ಯಾಹ್ನ 12:30ಕ್ಕೆ ಹೊರಡಬೇಕಿದ್ದ ವಿಮಾನ ಸಂಜೆ 4.48ಕ್ಕೆ ತನ್ನ ಪ್ರಯಾಣವನ್ನು ಆರಂಭಿಸಿತ್ತು. ಸದ್ಯ ಈ ವಿಡಿಯೋವನ್ನು ಕಂಡ ನೆಟ್ಟಿಗರು ಈತನ ರಂಪಾಟಕ್ಕೆ ದಂಗಾಗಿದ್ದು, ಅಚ್ಚರಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ