ಆ್ಯಪ್ನಗರ

ಕೋರ್ಟ್‌ನಿಂದಲೇ ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಡ್ರಗ್ ವ್ಯಸನಿ : ಇದು ಪಕ್ಕಾ ಫಿಲ್ಮಿ ಸ್ಟೈಲ್ ಚೇಸಿಂಗ್

ಕೋರ್ಟ್‌ನಿಂದ ಡ್ರಗ್ ವ್ಯಸನಿಯೊಬ್ಬ ಎಸ್ಕೇಪ್ ಆಗಿದ್ದಾನೆ. ಪಕ್ಕಾ ಸಿನಿಮೀಯ ಶೈಲಿಯ ಈ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Vijaya Karnataka Web 28 Sep 2020, 9:48 am
ಪೊಲೀಸರು ಸುತ್ತಲು ಇದ್ದಾಗಲೇ ಕೈದಿಯೊಬ್ಬ ತಪ್ಪಿಸಿಕೊಳ್ಳುವುದು. ಹೀಗೆ ಓಡಿದ ಕೈದಿಯನ್ನು ಎದ್ದು ಬಿದ್ದು ಪೊಲೀಸರು ಚೇಸ್ ಮಾಡುವುದು, ಸಾಕಷ್ಟು ಸಾಹಸದ ಬಳಿಕ ಈತನನ್ನು ಹಿಡಿಯುವುದು ಈ ಎಲ್ಲಾ ದೃಶ್ಯಗಳನ್ನು ಒಮ್ಮೆಯಾದರೂ ಖಂಡಿತಾ ಸಿನೆಮಾಗಳಲ್ಲಿ ನೀವು ನೋಡಿರುತ್ತೀರಿ. ಆದರೆ, ಎಂದಾದರೂ ನಿಜ ಜೀವನದಲ್ಲಿ ಇಂತಹ ಘಟನೆ ನಡೆದಿರುವುದನ್ನು ಕಂಡಿದ್ದೀರಾ...? ಬಹುಶಃ ಇರಲಿಕ್ಕಿಲ್ಲ. ಸದ್ಯ ಇಂತಹದ್ದೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Vijaya Karnataka Web Image by fikret kabay from Pixabay
| Representative image | Image by fikret kabay from Pixabay


ಇದು ಪಕ್ಕಾ ಫಿಲ್ಮಿ ಸ್ಟೈಲ್ ದೃಶ್ಯ. ಇಲ್ಲೊಬ್ಬ ಕೈದಿ ಪೊಲೀಸರು ಇರುವಾಗಲೇ ಕೋರ್ಟ್‌ನಿಂದ ಎಸ್ಕೇಪ್ ಆಗಿದ್ದಾನೆ. ಈ ದೃಶ್ಯ ನ್ಯಾಯಾಲಯದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ನಡೆದಿರುವುದು ಅಮೇರಿಕಾದಲ್ಲಿ. 34 ವರ್ಷದ ನಿಕೋಲಸ್ ಗ್ಯಾರಿಸನ್ ಎಂಬಾತನನ್ನು ಡ್ರಗ್ ಬಳಕೆ ಆರೋಪದಲ್ಲಿ ಬಂಧಿಸಲಾಗಿತ್ತು. ಇದಾದ ಬಳಿಕ ಓಹಿಯೋದ ಹೈಲ್ಯಾಂಡ್ ಕೌಂಟಿ ಕೋರ್ಟ್‌ಹೌಸ್‌ನಲ್ಲಿ ಈತ ಮೆಥಾಂಫೆಟಮೈನ್ ಎಂಬ ಡ್ರಗ್ ಹೊಂದಿದ್ದ ಆರೋಪ ಸಾಬೀತಾಗಿತ್ತು. ಹೀಗಾಗಿ, ಆರು ತಿಂಗಳು ಜೈಲು ಶಿಕ್ಷೆಯನ್ನು ಈತನಿಗೆ ವಿಧಿಸಲಾಗಿತ್ತು. ಶಿಕ್ಷೆ ಪ್ರಕಟವಾದ ಬಳಿಕ ಈತನನ್ನು ವಶಕ್ಕೆ ಪಡೆದು ಪೊಲೀಸರು ಕರೆದೊಯ್ಯುವಾಗ ನಿಕೋಲಸ್ ಅಧಿಕಾರಿಗಳಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

Also Read : `ನಾನು ಟಬ್‌ನಿಂದ ಮೇಲೆ ಬರಲ್ಲ': ಮರಿಯಾನೆಯ ನೀರಾಟಕ್ಕೆ ಮನಸೋಲದವರಿಲ್ಲ

ಅರೆಕ್ಷಣದಲ್ಲಿ ನಡೆದ ಈ ಘಟನೆಯ ಬಳಿಕ ಪೊಲೀಸರು ಆರೋಪಿಯನ್ನು ಬೆನ್ನಟ್ಟಿದ್ದಾರೆ. ಈ ಚೇಸಿಂಗ್ ವೇಳೆ ಪೊಲೀಸ್ ಒಬ್ಬರು ಮೆಟ್ಟಿಲಿನಿಂದ ಉರುಳಿ ಬಿದ್ದ ದೃಶ್ಯವೂ ಸೆರೆಯಾಗಿದೆ. ಹೀಗೆ ಬಿದ್ದ ಪೊಲೀಸ್ ಅಧಿಕಾರಿಯ ಪಕ್ಕೆಲುಬುಗಳಿಗೆ ಭಾರೀ ಏಟಾಗಿದೆ. ತಲೆಗೆ ಏಟಾಗಿದ್ದರಿಂದ ಸ್ವಲ್ಪ ಹೊತ್ತು ಇವರು ಪ್ರಜ್ಞೆಯನ್ನೂ ಕಳೆದುಕೊಂಡಿದ್ದರು.



Also Read : ತನ್ನ ಸಮಾಧಿ ಬಳಿ ಆಟವಾಡುತ್ತಿದೆಯಾ 2 ವರ್ಷದ ಕಂದನ ಆತ್ಮ? ಆ ತಾಯಿಗೆ ಕಾಣಿಸಿದ್ದೇನು?

ಅಧಿಕಾರಿಗಳು ಎಷ್ಟು ಪ್ರಯತ್ನಿಸಿದರೂ ನಿಕೋಲಸ್ ಆ ಕ್ಷಣಕ್ಕೆ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಹೀಗಾಗಿ, ಪೊಲೀಸರು ಈತನ ಬೇಟೆಯನ್ನು ಮುಂದುವರಿಸಿದ್ದರು. ಇನ್ನೊಂದೆಡೆ, ನ್ಯಾಯಾಧೀಶರು ಈತನ ವಿರುದ್ಧ ಬಂಧನದ ವಾರೆಂಟ್ ಹೊರಡಿಸಿದ್ದರು. ಹೀಗೆ ನಿಕೋಲಸ್‌ಗಾಗಿ ತಮ್ಮ ಹುಡುಕಾಟ ಮುಂದುವರಿಸಿದ್ದ ಪೊಲೀಸರು ಒಂದೇ ದಿನದಲ್ಲಿ ಮಿಚಿಗನ್‌ನಲ್ಲಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.


Also Read : ಬ್ರಿಟಿಷರ ಕಾಲದ ಈ ಪ್ರಖ್ಯಾತ ಥಿಯೇಟರ್‌ ಬಗ್ಗೆ ಜನರಿಗೆ ಈಗಲೂ ಇದೆ 'ಭಯ'!

ಸದ್ಯ ಈತ ಎಸ್ಕೇಪ್ ಆಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯ ಕಂಡು ನೆಟ್ಟಿಗರೆಲ್ಲಾ ಶಾಕ್ ಆಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ