ಆ್ಯಪ್ನಗರ

ಪ್ರೆಶರ್ ಕುಕ್ಕರ್‌ನಿಂದ ಸ್ಟೀಮ್ ತೆಗೆದುಕೊಳ್ಳುವ `ಐಡಿಯಾ'!: ವಿಚಿತ್ರ ವಿಡಿಯೋ ವೈರಲ್

ವ್ಯಕ್ತಿಯೊಬ್ಬರು ಪ್ರೆಶರ್ ಕುಕ್ಕರ್‌ನಿಂದ ಸ್ಟೀಮ್ ತೆಗೆದುಕೊಳ್ಳುವ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ನೆಟ್ಟಿಗರಲ್ಲಿ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದೆ.

Vijaya Karnataka Web 25 Sep 2020, 1:43 pm
ಇದು ಎಷ್ಟು ಸಹಕಾರಿ ಎಂದು ಗೊತ್ತಿಲ್ಲ. ಇದು ಅಪಾಯಕಾರಿನಾ...? ಲಾಭಕರನಾ...? ಅದೂ ಚರ್ಚೆಯ ವಿಷಯವೇ. ಆದರೆ, ಸದ್ಯ ವಿಚಿತ್ರ `ಐಡಿಯಾ'ವನ್ನೊಳಗೊಂಡ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡುವುದಕ್ಕೆ ಕುತೂಹಲಕಾರಿಯಾಗಿದೆ.
Vijaya Karnataka Web Steam
| Screengrab from video | Courtesy : @vineet10/Twitter


ಈ ಹಿಂದೆ ಪ್ರೆಶರ್ ಕುಕ್ಕರ್ ಸ್ಟೀಮ್‌ನಿಂದ ತರಕಾರಿಗಳನ್ನು ಸ್ವಚ್ಛಗೊಳಿಸುವುದು ಹೇಗೆ ಎಂದು ತೋರಿಸುವ ವಿಡಿಯೋವೊಂದು ವೈರಲ್ ಆಗಿತ್ತು. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ತಮ್ಮ ಟ್ವಿಟರ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋ ಬಗೆಗೂ ಅಂದು ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಇದೇ ತೆರನಾದ ಇನ್ನೊಂದು ವಿಡಿಯೋ ವೈರಲ್ ಆಗುತ್ತಿದೆ. ಆದರೆ, ಇದು ತರಕಾರಿಗಳನ್ನು ಸ್ವಚ್ಛಗೊಳಿಸುವ ವಿಡಿಯೋ ಅಲ್ಲ. ಬದಲಾಗಿ ಮನುಷ್ಯನೇ ಪ್ರೆಶರ್ ಕುಕ್ಕರ್ ಹಬೆಯ ಮೂಲಕ ದೇಹವನ್ನು ಸ್ವಚ್ಛಗೊಳಿಸುವ ವಿಡಿಯೋ...!

Also Read : ಪ್ರೆಶರ್ ಕುಕ್ಕರ್‌ ಸ್ಟೀಮ್‌ನಲ್ಲಿ ತರಕಾರಿ ಸ್ವಚ್ಛ : ಇದು `ಅಪಾಯಕಾರಿ' ಅಂತಿದ್ದಾರೆ ನೆಟ್ಟಿಗರು

ಸದ್ಯ ವೈರಲ್ ಆಗುತ್ತಿರುವ ಕ್ಲಿಪ್‌ನಲ್ಲಿ ವ್ಯಕ್ತಿಯೊಬ್ಬರು ಪ್ರೆಶರ್ ಕುಕ್ಕರ್‌ನಿಂದ ಸ್ಟೀಮ್ ತೆಗೆದುಕೊಳ್ಳುವ ದೃಶ್ಯವಿದೆ. ಇದರ ಬಗ್ಗೆ ಮಹಿಳೆಯೊಬ್ಬರು ವಿವರಣೆಯನ್ನೂ ನೀಡುತ್ತಾರೆ. ಕುಕ್ಕರ್‌ನ ವಿಶಲ್ ಇರುವ ಜಾಗಕ್ಕೆ ವಾಟರ್ ಫಿಲ್ಟರ್‌ಗೆ ಬಳಸುವ ಪೈಪ್ ಫಿಕ್ಸ್‌ ಮಾಡಿ ಅದರ ಇನ್ನೊಂದು ತುದಿಗೆ ಇನ್ನೊಂದು ಕುಕ್ಕರ್‌ನ ಮುಚ್ಚಳವನ್ನು ಜೋಡಿಸಿ ಹಬೆ ತೆಗೆದುಕೊಳ್ಳಬಹುದು ಎಂಬ ವಿವರಣೆಯನ್ನು ಈ ಮಹಿಳೆ ನೀಡುತ್ತಾರೆ. ಕುಕ್ಕರ್‌ನಲ್ಲಿ ಅರ್ಧದಷ್ಟು ನೀರು ಕುದಿಸಲು ಇಟ್ಟು ಈ ಪೈಪ್‌ ಮೂಲಕ ಬರುವ ಸ್ಟೀಮ್ ಪಡೆದರೆ ಒಳ್ಳೆಯದು ಎಂಬುದು ಈ ಮಹಿಳೆ ಮಾತು.


Also Read : ಪ್ಯಾರಾಗ್ಲೈಡರ್‌ಗೆ ಹಾಸಿಗೆ ಜೋಡಿಸಿ ಮಲಗಿ ಆಕಾಶದಲ್ಲಿ ವಿಹರಿಸಿದ ಸಾಹಸಿ...!

ಈ ವಿಡಿಯೋವನ್ನು ಹಲವರು ನೋಡಿದ್ದಾರೆ. ಒಂದಷ್ಟು ಜನರಿಗೆ ಈ ಐಡಿಯಾ ಸಮಾಧಾನ ತಂದರೂ ಹೆಚ್ಚಿನವರು ಈ ವಿಧಾನದ ಬಗ್ಗೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೆಲವರು ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.


Also Read : ಬಳಸಿದ್ದ ಕಾಂಡೋಮ್‌ಗಳ ಮರು ಮಾರಾಟ! : 3.50 ಲಕ್ಷ ಕಾಂಡೋಮ್ಸ್‌ ವಶ!

ಒಂದಂತೂ ಸತ್ಯ. ಇದು ನಿಜವಾಗಿಯೂ ಸುರಕ್ಷಿತವೇ ಎಂಬುದನ್ನು ಖಂಡಿತಾ ಎಲ್ಲರೂ ಚಿಂತಿಸಬೇಕಾಗಿದೆ. ಹೀಗಾಗಿ, ತಜ್ಞರ ಸಲಹೆ ಇಲ್ಲದೆ ಇಂತಹ `ಪ್ರಯತ್ನ. ಪ್ರಯೋಗ' ಅಪಾಯಕಾರಿಯಾಗಬಹುದು ಎಂಬುದು ಹಲವರ ಅಭಿಪ್ರಾಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ