ಆ್ಯಪ್ನಗರ

ವರದಿಗಾರರ ಕಣ್ಣಿಗೆ ಬಡಿದು ಸಾಗಿದ ಹಕ್ಕಿ: ನೋವಲ್ಲೂ ವೃತ್ತಿಪರತೆ ಕಾಪಾಡಿಕೊಂಡ ಪತ್ರಕರ್ತರಿಗೆ ನೆಟ್ಟಿಗರ ಮೆಚ್ಚುಗೆ

ಇದು ವರದಿಗಾರರೊಬ್ಬರು ಅನಿರೀಕ್ಷಿತವಾಗಿ ಎದುರಿಸಿದ ಸನ್ನಿವೇಶದ ವಿಡಿಯೋ. ಈ ಪತ್ರಕರ್ತರು ತಮ್ಮ ವೃತ್ತಿಪರತೆಯಿಂದ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Vijaya Karnataka Web 27 Oct 2020, 5:27 pm
ವರದಿಗಾರಿಕೆ ಎಂಬುದು ಬಹಳ ಸೂಕ್ಷ್ಮ ಜವಾಬ್ದಾರಿ. ಪತ್ರಕರ್ತರು ಕೆಲವೊಮ್ಮೆ ಕಠಿಣ ಪರಿಸ್ಥಿತಿಗಳನ್ನೂ ಎದುರಿಸಬೇಕಾಗುತ್ತಿದೆ. ಈ ಕಠಿಣ ಪರಿಸ್ಥಿತಿಯಲ್ಲೂ ವೃತ್ತಿಪರತೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕಾದದ್ದು ಕೂಡಾ ಮುಖ್ಯವಾಗಿದೆ. ಯಾಕೆಂದರೆ, ಯಾವ ಸಂದರ್ಭದಲ್ಲಿ ಅನಿರೀಕ್ಷಿತ ಸವಾಲುಗಳು ಎದುರಾಗುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ.
Vijaya Karnataka Web Image by Mabel Amber from Pixabay
| Representative image | Image by Mabel Amber from Pixabay


ಇತ್ತೀಚೆಗೆ ನೇರ ಪ್ರಸಾರಕ್ಕೆ ಸಜ್ಜಾಗುತ್ತಿದ್ದ ಅರ್ಜೆಂಟೀನಾದ ಸುದ್ದಿವಾಹಿನಿಯ ವರದಿಗಾರರೊಬ್ಬರು ಕಳ್ಳನಿಂದ ಕೆಲ ಕಾಲ ಸಂಕಷ್ಟ ಅನುಭವಿಸಿದ್ದರು. ಯಾಕೆಂದರೆ, ನೇರಪ್ರಸಾರಕ್ಕೆ ಸಜ್ಜಾಗುತ್ತಿದ್ದ ಈ ಪತ್ರಕರ್ತನ ಕೈಯಲ್ಲಿದ್ದ ಮೊಬೈಲ್ ಫೋನನ್ನು ಕಸಿದು ಕಳ್ಳನೊಬ್ಬ ಅತೀ ವೇಗದಲ್ಲಿ ಪರಾರಿಯಾಗಿದ್ದ. ಈ ಸಂದರ್ಭದಲ್ಲಿ ಸಹಾಯಕ್ಕೆ ಬಂದ ಸ್ಥಳೀಯರು ಈತನನ್ನು ಬೆನ್ನಟ್ಟಿದ್ದರಿಂದ ಸ್ವಲ್ಪ ಹೊತ್ತಿನಲ್ಲಿಯೇ ಕಳ್ಳನಿಂದ ಮೊಬೈಲ್ ಫೋನ್ ಹಿಂದಕ್ಕೆ ಪಡೆಯುವುದಕ್ಕೆ ಸಾಧ್ಯವಾಗಿತ್ತು. ಈ ದೃಶ್ಯ ಸಾಕಷ್ಟು ವೈರಲ್ ಆಗಿತ್ತು. ಜೊತೆಗೆ, ನೆಟ್ಟಿಗರು ಸ್ಥಳೀಯರ ಕಾರ್ಯವನ್ನು ಕೊಂಡಾಡಿದ್ದರು.

Also Read : ವರದಿಗಾರ ನೇರಪ್ರಸಾರದಲ್ಲಿದ್ದಾಗಲೇ ಮೊಬೈಲ್ ಕಸಿದು ಕಳ್ಳ ಪರಾರಿ...!

ಇದೀಗ ಇದೇ ರೀತಿ ನೇರಪ್ರಸಾರಕ್ಕೆ ಸಜ್ಜಾಗುತ್ತಿದ್ದ ಪತ್ರಕರ್ತರೊಬ್ಬರು ಬೇರೊಂದು ಸವಾಲು ಎದುರಿಸಿದ್ದಾರೆ. ಈ ವಿಡಿಯೋಗಳು ಕೂಡಾ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಘಟನೆ ನಡೆದಿರುವುದು ಆಸ್ಟ್ರೇಲಿಯಾದಲ್ಲಿ. ಇಲ್ಲಿನ ಸುದ್ದಿವಾಹಿನಿಯ ವರದಿಗಾರರೊಬ್ಬರು ಸಂಜೆಯ ಬುಲೆಟಿನ್‌ಗಾಗಿ ನೇರ ಪ್ರಸಾರಕ್ಕೆ ಸಜ್ಜಾಗುತ್ತಿದ್ದರು. ಈ ವೇಳೆ, ಮ್ಯಾಗ್ಪಿ ಎಂಬ ಹಕ್ಕಿ ರಭಸವಾಗಿ ಬಂದು ಈ ವರದಿಗಾರರ ಕಣ್ಣಿನ ಭಾಗಕ್ಕೆ ಬಡಿದು ಹೋಗಿದೆ.


Also Read : ವರದಿಗಾರಿಕೆ ವೇಳೆ ಆನ್ ಆದ ಫೇಸ್ ಫಿಲ್ಟರ್! : ಈ ವಿಡಿಯೋ ನೋಡಿ ನಗೋದು ಪಕ್ಕಾ

ಮೆಲ್ಬೋರ್ನ್‌ನ ಹಿರಿಯ ಪ್ರತಿನಿಧಿ ಬ್ರೆಟ್ ಮೆಕ್ಲಿಯೋಡ್ ಈ ಪರಿಸ್ಥಿತಿ ಎದುರಿಸಿದ್ದವರು. ಪಾರ್ಟಿಮೆಂಟ್ ಹೌಸ್‌ನ ಹೊರ ಭಾಗದಲ್ಲಿ ಇವರು ನೇರ ಪ್ರಸಾರಕ್ಕೆ ಸಿದ್ಧರಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ರಭಸವಾಗಿ ಮುಖಕ್ಕೆ ಬಡಿದಿದ್ದರಿಂದ ಬ್ರೆಟ್ ನೋವಿನಲ್ಲಿ ಕಣ್ಣುಜ್ಜಿಕೊಳ್ಳುವುದನ್ನು ಕೂಡಾ ಈ ಕ್ಲಿಪ್‌ನಲ್ಲಿ ಕಾಣಬಹುದು. ಆದರೆ, ಇಂತಹ ಪರಿಸ್ಥಿತಿಯನ್ನು ಎದುರಿಸಿದರೂ ಬ್ರೆಟ್ ತಕ್ಷಣ ಸುಧಾರಿಸಿಕೊಂಡು ತಮ್ಮ ನೇರ ಪ್ರಸಾರವನ್ನು ಮುಂದುವರಿಸಿದ್ದಾರೆ. ಇವರ ಈ ವೃತ್ತಿಪರತೆ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


Also Read : `ನಾಳೆಯಿಂದ ನಾನು ಕೆಲಸಕ್ಕೆ ಬರುವುದಿಲ್ಲ ' : ನೇರಪ್ರಸಾರದಲ್ಲೇ ಹೇಳಿದ ಟಿವಿ ಪತ್ರಕರ್ತೆ...! : ಕಾರಣ ಸಖತ್ ಇಂಟ್ರೆಸ್ಟಿಂಗ್

ಗೂಡು ಕಟ್ಟಿದ ಸಂದರ್ಭದಲ್ಲಿ ಮ್ಯಾಗ್ಪಿ ಹಕ್ಕಿಗಳು ಜನರ ಮೇಲೆ ಹೀಗೆ ದಾಳಿ ಮಾಡುತ್ತವೆ. ಹೀಗಾಗಿ, ಈ ಅವಧಿಯಲ್ಲಿ ಹಕ್ಕಿಗಳಿಂದ ರಕ್ಷಿಸಿಕೊಳ್ಳಲು ಉದ್ಯಾನವನ ಅಥವಾ ಇನ್ಯಾವುದೇ ಜಾಗಗಳಿಗೆ ಹೋಗುವಾಗ ಕೊಡೆಗಳನ್ನು ಬಳಸಿಕೊಳ್ಳುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ