ಆ್ಯಪ್ನಗರ

ದೋಣಿಗೆ ಹೆದರಿ ನದಿಯ `ನೀರಿನ ಮೇಲೆ' ಓಡುತ್ತಿದೆ ಕಡವೆ! : ಅಚ್ಚರಿಯ ವಿಡಿಯೋ ವೈರಲ್

ಇದು ನಿಜಕ್ಕೂ ಅಚ್ಚರಿಯ ವಿಡಿಯೋ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಬಗೆಬಗೆ ಚರ್ಚೆಗೆ ಕಾರಣವಾಗಿದೆ. ಕೆಲವರು ಈ ದೃಶ್ಯವನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

Vijaya Karnataka Web 28 Oct 2020, 10:08 am
ನೀರಿನ ಮೇಲೆ ಓಡುವ ಕಡವೆ...! ಹಾಗಂತ, ಈ ಕಡವೆ ಕಡಿಮೆ ನೀರಿದ್ದಲ್ಲಿ ಇದು ಓಡಿದ್ದಲ್ಲ... ಈ ಕಡವೆ ಓಡಿದ್ದು ನದಿಯಲ್ಲಿ...! ಅದೂ ದೋಣಿಯೊಂದು ತನ್ನನ್ನು ಹಿಂಬಾಲಿಸುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಈ ಕಡವೆ ಬೋಟ್‌ಗೂ ಅಡ್ಡಾದಿಡ್ಡಿಯಾಗಿ ಓಡಿದೆ...! ಹಾಗಂತ, ಇದೇನೂ ಇಂದ್ರಜಾಲವಲ್ಲ...!
Vijaya Karnataka Web Image by jazapp from Pixabay
| Representative image | Image by jazapp from Pixabay


ದೋಣಿಯೊಂದು ಸಾಗಬಹುದಾದಂತಹ ನೀರಿನ ಮೇಲ್ಮೈಯಲ್ಲಿ ಪ್ರಾಣಿ ಅಥವಾ ಮನುಷ್ಯರು ವೇಗವಾಗಿ ಓಡಲು ಸಾಧ್ಯವೇ...? ಪುಟ್ಟ ಮಗು ಕೂಡಾ ಈ ಪ್ರಶ್ನೆಗೆ `ಸಾಧ್ಯವಿಲ್ಲ' ಎಂಬ ಉತ್ತರವನ್ನೇ ಕೊಡಬಹುದು. ಆದರೆ, ಸದ್ಯ ವೈರಲ್ ಆಗುತ್ತಿರುವ ಈ ದೃಶ್ಯವನ್ನು ನೋಡಿದಾಗ ಮಾತ್ರ ಮನಸ್ಸಿನಲ್ಲಿ ದೊಡ್ಡ ಗೊಂದಲವೇ ಉಂಟಾಗುತ್ತದೆ... ಅಲ್ಲದೆ, `ಸಾಧ್ಯವಿಲ್ಲ' ಎಂಬ ನಮ್ಮ ಭಾವನೆಯನ್ನೇ ಇದು ತಲೆಕೆಳಗೆ ಮಾಡುವಂತಿದೆ...!

Also Read : ತಾಳಿದವನು ಬಾಳಿಯಾನು : ಈ ಸಣ್ಣ ವಿಡಿಯೋದಲ್ಲಿದೆ ಬಹುದೊಡ್ಡ ಜೀವನ ಸಂದೇಶ

ಈ ದೃಶ್ಯ ಸೆರೆಯಾಗಿದ್ದು ಅಲಸ್ಕಾದ ನದಿಯಲ್ಲಿ. ಕ್ರಿಸ್ಟಿ ಪಾನಿಪ್ಚುಕ್ ಎಂಬವರು ಅಲಸ್ಕಾದ ನದಿಯಲ್ಲಿ ದೋಣಿಯಲ್ಲಿ ಸಾಗುತ್ತಿದ್ದಾಗ ಇವರಿಗೆ ಮೂಸ್ ಅಂದರೆ ಅಮೇರಿಕಾದಲ್ಲಿ ಕಾಣಸಿಗುವ ಕಡವೆಯೊಂದು ಜೊತೆಯಾಗಿತ್ತು. ಯಾವಾಗ ಈ ಮೂಸ್ ದೋಣಿಯನ್ನು ನೋಡಿತ್ತೋ ಅಲ್ಲಿಂದ ಬಲುವೇಗದಿಂದ ಓಡಲು ಆರಂಭಿಸಿತ್ತು. ಕಡವೆಯ ವೇಗಕ್ಕಿಂತಲೂ ಇಲ್ಲಿ ಗಮನ ಸೆಳೆದದ್ದು ಇದು ಓಡುತ್ತಿರುವ ಜಾಗದ ಬಗ್ಗೆ...! ಯಾಕೆಂದರೆ, ಈ ಮೂಸ್ ಓಡುತ್ತಿದ್ದದ್ದು ನದಿಯ ನೀರಿನ ಮೇಲೆ...! ಹಿಂಬದಿಯಿಂದ ಬೋಟ್ ಬರುತ್ತಿದ್ದರೆ ಅದಕ್ಕೆ ಅಡ್ಡವಾಗಿಯೂ ಈ ಕಡವೆ ಓಡಿದೆ...!

Also Read : ಹಾಲುಗಲ್ಲದ ಮುದ್ದು ಕಂದನೊಂದಿಗೆ ಶ್ವಾನದ ಆಟ : ಈ ಅಪೂರ್ವ ದೃಶ್ಯಕ್ಕೆ ನೆಟ್ಟಿಗರು ಫಿದಾ

ಕ್ರಿಸ್ಟಿ ತಮ್ಮ ದೋಣಿಯ ವೇಗವನ್ನು ಹೆಚ್ಚಿಸುತ್ತಿದ್ದಂತೆ ಮೂಸ್ ಕೂಡಾ ಬೋಟ್‌ನ ಪಕ್ಕದಲ್ಲೇ ನೀರಿನ ಮೇಲ್ಮೈಯಲ್ಲಿ ಸಲೀಸಾಗಿ ಓಡಿದೆ. ಒಂದು ಹಂತದಲ್ಲಿ ಈ ಕಡವೆ ನೀರಿನ ಮೇಲೆ ನಡೆಯುವಂತೆಯೂ ಕಾಣಿಸಿದೆ...! ಇಲ್ಲಿದೆ ನೋಡಿ ಆ ಅಚ್ಚರಿಯ ವಿಡಿಯೋ.


Also Read : ವರದಿಗಾರರ ಕಣ್ಣಿಗೆ ಬಡಿದು ಸಾಗಿದ ಹಕ್ಕಿ: ನೋವಲ್ಲೂ ವೃತ್ತಿಪರತೆ ಕಾಪಾಡಿಕೊಂಡ ಪತ್ರಕರ್ತರಿಗೆ ನೆಟ್ಟಿಗರ ಮೆಚ್ಚುಗೆ

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗಿಯೇ ವೈರಲ್ ಆಗುತ್ತಿದೆ. ಎಲ್ಲರೂ ಈ ದೃಶ್ಯವನ್ನು ಕಂಡು ಶಾಕ್ ಆಗಿದ್ದಾರೆ. ಅಚ್ಚರಿಯಿಂದ ಅದ್ಭುತ ಎಂದು ಎಲ್ಲರೂ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಈ ಮೂಸ್ ಆಳವಿಲ್ಲದ ನೀರಿನ ಮೇಲೆ ಚಲಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಈ ಕಡವೆ ದೋಣಿಯ ಮುಂದೆಯೂ ಓಡುತ್ತದೆ... ಹೀಗಾಗಿ, ಕಡವೆ ಓಡಿದ್ದ ಜಾಗ ದೋಣಿ ವಿಹಾರಕ್ಕೆ ಬೇಕಾದಷ್ಟು ಆಳವಾಗಿದೆ ಎಂದು ಹೇಳಲಾಗುತ್ತಿದೆ. ಇದೇ ನೆಟ್ಟಿಗರ ಕುತೂಹಲವನ್ನು ಹೆಚ್ಚಿಸಿದೆ. ಇದು ನಿಜವಾಗಿಯೂ ಕಡವೆಯ ಸಾಮರ್ಥ್ಯನಾ...? ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣ ಇದೆಯಾ ಎಂಬ ಬಗ್ಗೆ ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ. ಸದ್ಯ ಈ ಅಚ್ಚರಿಯ ವಿಡಿಯೋ ಲಕ್ಷಾಂತರ ವೀಕ್ಷಣೆಯನ್ನು ಗಳಿಸುವಲ್ಲಿಯೂ ಯಶಸ್ವಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ