ಆ್ಯಪ್ನಗರ

ಆನ್‌ಲೈನ್ ಕ್ಲಾಸ್ ವೇಳೆಯೇ ವಿದ್ಯಾರ್ಥಿಯ `ಕಿಡ್ನ್ಯಾಪ್'...! : ವಿಡಿಯೋ ವೈರಲ್

ಆನ್‌ಲೈನ್ ಕ್ಲಾಸ್ ನಡೆಯುತ್ತಿರುವಾಗಲೇ ವಿದ್ಯಾರ್ಥಿಯೊಬ್ಬನ ಕಿಡ್ನ್ಯಾಪ್ ನಡೆದಿದೆ. ಆದರೆ, ಇದರ ಹಿಂದಿನ ಅಸಲಿ ಕಾರಣ ಬೇರೆಯದ್ದೇ ಇದೆ...!

Vijaya Karnataka Web 24 Sep 2020, 4:49 pm
ಕೊರೊನಾ ಅಬ್ಬರದಿಂದಾಗಿ ತರಗತಿಗಳೆಲ್ಲಾ ಆನ್‌ಲೈನ್ ರೂಪ ಪಡೆದಿವೆ. ಎಲ್ಲಾ ಕ್ಲಾಸ್‌ಗಳೂ ಬಹುತೇಕ ಆನ್‌ಲೈನ್ ಮೂಲಕವೇ ನಡೆಯುತ್ತಿದೆ. ಆದರೆ, ಈ ಆನ್‌ಲೈನ್ ತರಗತಿ ವೇಳೆಯೂ ಒಂದಷ್ಟು ಅವಾಂತರಗಳು, ಭಯಾನಕ ಘಟನೆಗಳು, ತಮಾಷೆಯ ಸನ್ನಿವೇಶಗಳು ನಡೆಯುತ್ತಿವೆ ಮತ್ತು ಇವೆಲ್ಲಾ ಕ್ಷಣಾರ್ಧದಲ್ಲಿ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿವೆ. ಈಗಾಗಲೇ ಇಂತಹ ಅನೇಕ ಘಟನೆಗಳು ನಡೆದಿವೆ. ಇದೀಗ ಇಂತಹದ್ದೇ ಇನ್ನೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ವಿದ್ಯಾರ್ಥಿಯೊಬ್ಬನ `ಕಿಡ್ನ್ಯಾಪ್' ದೃಶ್ಯ...!
Vijaya Karnataka Web Kidnapping
| Screengrab from video | Courtesy : @Blayofficial/Twitter


ಉಪನ್ಯಾಸಕರು ತನ್ನ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾಗ ಒಬ್ಬ ವಿದ್ಯಾರ್ಥಿಯ `ಅಪಹರಣ' ನಡೆಯುತ್ತದೆ...! ಇಬ್ಬರು ಮುಸುಕುಧಾರಿಗಳು ಯುವಕನನ್ನು ಹಿಡಿದು ಎಳೆದೊಯ್ಯುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಕ್ಷಣಕ್ಕೆ ಇದನ್ನು ನೋಡಿದಾಗ ಶಾಕ್ ಆಗುತ್ತದೆ. ಆದರೆ, ಅಸಲಿ ಸತ್ಯ ಏನೆಂದರೆ ಇದು ನಿಜ ಅಪಹರಣ ಅಲ್ಲವಂತೆ. ಲಭ್ಯ ಮಾಹಿತಿ ಪ್ರಕಾರ ಆನ್‌ಲೈನ್ ಕ್ಲಾಸ್ ತಪ್ಪಿಸಿಕೊಳ್ಳುವ ಸಲುವಾಗಿ ಈ ಯುವಕ ತನ್ನ ಸ್ನೇಹಿತರಿಂದ `ತನ್ನನ್ನೇ' ಅಪಹರಣ ಮಾಡಿಸಿದ್ದನಂತೆ...!

Also Read : ಜಮೀನು ಮಾರಿ ತನ್ನ ಪತ್ನಿಗಾಗಿ ಆನೆ ಖರೀದಿಸಿ ಮನೆಗೆ ತಂದ ವ್ಯಕ್ತಿ...!

ಇದು ಯಾವಾಗ ಸೆರೆಯಾಗಿದ್ದು, ಎಲ್ಲಿ ಸೆರೆಯಾಗಿದ್ದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆರಂಭದಲ್ಲಿಈ ವಿಡಿಯೋ ಟಿಕ್‌ಟಾಕ್‌ನಲ್ಲಿ ಅಪ್ಲೋಡ್ ಆಗಿತ್ತು. ಇದೀಗ ಈ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಪ್ರಾಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಕೋಣೆಯೊಳಗೆ ಬರುವ ಇಬ್ಬರು ಆತನನ್ನು `ಅಪಹರಿಸುತ್ತಾರೆ'. ಈ ವೇಳೆ, ಪ್ರಾಧ್ಯಾಪಕರು `ಟೈಲರ್‌ ಈಗ ಕಿಡ್ನ್ಯಾಪ್ ಆಗಿರುವುದನ್ನು ನೀವು ನೋಡಿದ್ದೀರಾ...?' ಎಂದು ಬಾಕಿ ವಿದ್ಯಾರ್ಥಿಗಳಲ್ಲಿ ಕೇಳುತ್ತಾರೆ. ಈ ವೇಳೆ, ಒಬ್ಬರು ವಿದ್ಯಾರ್ಥಿನಿ ನಗುತ್ತಿದ್ದರೆ, ಮತ್ತೊಬ್ಬರು ಶಾಕ್ ಆಗಿದ್ದರು.


Also Read : ಸಂಗೀತಗಾರರ ತಂಡದೊಂದಿಗೆ ತುತ್ತೂರಿ ಹಿಡಿದು ಕುಣಿದ ಪುಟಾಣಿ : ಇದು ಅದ್ಭುತ ದೃಶ್ಯ

ಈ ವಿಡಿಯೋ ನೋಡಿದ ಅನೇಕರು ಆ ಕ್ಷಣಕ್ಕೆ ನಿಜವಾಗಿಯೂ ಟೈಲರ್ ಅಪಹರಣವಾಗಿರಬಹುದು ಎಂದೇ ಅಂದುಕೊಂಡಿದ್ದರು. ಇದಾದ ಬಳಿಕ ಈ ವಿದ್ಯಾರ್ಥಿ ಮತ್ತು ಆತನ ಸ್ನೇಹಿತರು ನಾವು ತಮಾಷೆಗಾಗಿ ಈ ರೀತಿ ಮಾಡಿದ್ದು, ನಾವೆಲ್ಲಾ ಸುರಕ್ಷಿತವಾಗಿದ್ದೇವೆ ಎಂದು ಇನ್ನೊಂದು ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

Also Read : `ಸೋ ಕ್ಯೂಟ್': ಡೋರ್‌ಮ್ಯಾಟ್‌ನಲ್ಲಿ ಕಾಲುಗಳನ್ನು ಒರೆಸಿಯೇ ಮನೆಯೊಳಗೆ ಪ್ರವೇಶಿಸುವ ಮುದ್ದು ಶ್ವಾನದ ಮರಿ!


ಇನ್ನೊಂದೆಡೆ, ಈ ತಮಾಷೆಯ ಬಗ್ಗೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಈ ವಿಡಿಯೋ ನೋಡಿ ನಕ್ಕು ಸುಮ್ಮನಾಗಿದ್ದರೆ, ಹಲವರು ಇಂತಹ `ನಾಟಕ' ಸರಿಯಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಇದೇ ರೀತಿ ನಿಜವಾಗಿ ನಡೆದಿದ್ದ ಪ್ರಕರಣವನ್ನು ಉಲ್ಲೇಖಿಸಿ ಈ ತಮಾಷೆಯನ್ನು ಟೀಕಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ