ಆ್ಯಪ್ನಗರ

ಟ್ರ್ಯಾಕ್ಟರ್ ಮೇಲೆ `ಬಲ' ಪ್ರಯೋಗ : ಎರಡು ತುಂಡಾಯಿತು ವಾಹನ...!

ಕ್ರೇನ್ ಮೂಲಕ ಎಳೆಯುವಾಗ ಟ್ರ್ಯಾಕ್ಟರ್ ಎರಡು ತುಂಡಾದ ವಿಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಇನ್ನೊಮ್ಮೆ ನೆಟ್ಟಿಗರ ನಡುವೆ ತಮಾಷೆಯ ಚರ್ಚೆ ಹುಟ್ಟುಹಾಕಿದೆ.

Vijaya Karnataka Web 26 Aug 2020, 1:25 pm
ಟ್ರ್ಯಾಕ್ಟರ್... ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಹಾಯ ಮಾಡುವ ವಾಹನ. ಉಳುಮೆಗೆ, ಗೊಬ್ಬರ ಸಾಗಿಸಲು, ಕೃಷಿ ಉತ್ಪನ್ನಗಳ ರವಾನೆ ಹೀಗೆ ಎಲ್ಲಾ ವಿಧದಲ್ಲೂ ಟ್ರ್ಯಾಕ್ಟರ್‌ಗಳು ಬಳಕೆಯಾಗುತ್ತವೆ. ಕೃಷಿಗೆ ಹೆಚ್ಚಿನ ಪ್ರಮಾಣದಲ್ಲಿ ಟ್ರ್ಯಾಕ್ಟರ್ ಬಳಕೆಯಾದರೂ ಕೃಷಿ ಚಟುವಟಿಕೆ ಇಲ್ಲದ ಸಂದರ್ಭದಲ್ಲಿ ವಿವಿಧ ವಸ್ತುಗಳ ಸಾಗಾಟಕ್ಕೂ ಈ ವಾಹನ ಬಳಕೆಯಾಗುತ್ತದೆ. ಆದರೆ, ಯಾವುದೇ ವಾಹನವಿದ್ದರೂ ಅದಕ್ಕೊಂದು ನಿರ್ದಿಷ್ಟ ಸಾಮರ್ಥ್ಯ ಎಂಬುದಿರುತ್ತದೆ. ಆ ಸಾಮರ್ಥ್ಯಕ್ಕಿಂತ ಜಾಸ್ತಿ ಭಾರ ಹಾಕಿದರೆ ಅಥವಾ ಬಲ ಪ್ರಯೋಗಿಸಿದರೆ ಖಂಡಿತಾ ಅವಾಂತರಗಳು ಆಗುತ್ತವೆ. ಇದು ಕೂಡಾ ಅಂತಹದ್ದೇ ಅವಾಂತರದ ದೃಶ್ಯ.
Vijaya Karnataka Web Tractor Accident
| Screengrab from video | Courtesy : Pankaj Nain IPS/Twitter


Also Read : ಪುಟಾಣಿಯ ಶೌರ್ಯ : ಈಜುಕೊಳಕ್ಕೆ ಬಿದ್ದ ಸ್ನೇಹಿತನನ್ನು ರಕ್ಷಿಸಿದ ಮೂರು ವರ್ಷದ ಪೋರ

ಟ್ರ್ಯಾಕ್ಟರ್ ಒಂದು ಎರಡು ತುಂಡಾಗುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಐಪಿಎಸ್ ಅಧಿಕಾರಿ ಪಂಕಜ್ ನೈನ್ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Also Read : 12 ವರ್ಷದ ಬಳಿಕ ಭೇಟಿಯಾದ ತಾಯಿ ಮಗಳು : ಭಾವನಾತ್ಮಕವಾಗಿದೆ ಆನೆಗಳ ಪುನರ್ಮಿಲನದ ಈ ದೃಶ್ಯ

ಈ ವಿಡಿಯೋದಲ್ಲಿ ಲೋಡ್ ತುಂಬಿದ್ದ ಟ್ರ್ಯಾಕ್ಟರ್ ನಿಂತಿದ್ದ ದೃಶ್ಯವಿದೆ. ಈ ಟ್ರ್ಯಾಕ್ಟರ್ ಕೆಟ್ಟು ನಿಂತಿತ್ತೋ ಅಥವಾ ಇದರ ಚಕ್ರಗಳು ಹೂತು ಹೋಗಿತ್ತೋ ಎಂಬುದು ಅಸ್ಪಷ್ಟ. ಆದರೆ, ಈ ಟ್ರ್ಯಾಕ್ಟರ್ ಮುಂದೆ ಸಾಗುತ್ತಿರಲಿಲ್ಲ ಎಂಬುದು ಸ್ಪಷ್ಟ. ಹೀಗಾಗಿ, ಕ್ರೇನ್ ಮೂಲಕ ಟ್ರ್ಯಾಕ್ಟರನ್ನು ಎಳೆಯುವ ಪ್ರಯತ್ನ ಮಾಡಲಾಗಿತ್ತು. ಆದರೆ, ಎಷ್ಟು ಪ್ರಯತ್ನ ಪಟ್ಟರೂ ಟ್ರ್ಯಾಕ್ಟರ್ ಮುಂದೆ ಬರಲಿಲ್ಲ. ಬದಲಾಗಿ ಟ್ರ್ಯಾಕ್ಟರೇ ಎರಡು ತುಂಟಾಗಿ ಬಿದ್ದಿತ್ತು...! ಈ ದೃಶ್ಯ ನೋಡಿ ಟ್ರ್ಯಾಕ್ಟರ್ ಚಾಲಕ ಸೇರಿ ಅಲ್ಲಿದ್ದವರೆಲ್ಲಾ ತಬ್ಬಿಬ್ಬಾಗಿದ್ದರು.

Also Read : ಅಂತ್ಯಸಂಸ್ಕಾರಕ್ಕೆ ಕಡೆಯ ಸಿದ್ಧತೆ ಮಾಡುತ್ತಿದ್ದಾಗ ಸ್ಮಶಾನದಲ್ಲಿ ಕಣ್ಣು ಬಿಟ್ಟಿದ್ದಳು 20ರ ಯುವತಿ!

ಹಾಗಂತ, ಇದು ಈಗಿನ ವಿಡಿಯೋ ಅಲ್ಲ. ಈ ವರ್ಷದಾರಂಭದಲ್ಲಿ ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ಟ್ರ್ಯಾಕ್ಟರ್ ತುಂಡಾಗುವ ವಿಡಿಯೋ ಇಂಟರ್‌ನೆಟ್‌ನಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಈ ವಿಡಿಯೋ ನೋಡಿ ಕೆಲವರು ಹಾಸ್ಯದ ದಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ