ಆ್ಯಪ್ನಗರ

Viral Video : ಚಂಗನೆ ಹಾರಿ ದಾಳಿ ಮಾಡಿದ ಲಂಗೂರ್ : ಬ್ಯಾಲೆನ್ಸ್‌ ತಪ್ಪಿದ್ದ ಪೊಲೀಸ್...!

ಪೊಲೀಸ್ ಪರೇಡ್ ವೇಳೆ ಲಂಗೂರ್ ದಾಳಿ ಮಾಡಿರುವ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ಅನಿರೀಕ್ಷಿತ ದಾಳಿ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

Vijaya Karnataka Web 2 Feb 2020, 7:53 am
ಅವರೆಲ್ಲಾ ಶಿಸ್ತಿನಿಂದ ಪರೇಡ್ ಮಾಡುತ್ತಿದ್ದರು. ಅಷ್ಟರಲ್ಲಿ ಅಲ್ಲಿ ನಡೆದದ್ದು ಅನಿರೀಕ್ಷಿತ ದಾಳಿ...! ಈ ದಾಳಿಗೆ ಪರೇಡ್ ಮಾಡುತ್ತಿದ್ದ ಪೊಲೀಸ್ ಒಬ್ಬರು ಬ್ಯಾಲೆನ್ಸ್ ತಪ್ಪಿದ್ದರು...!
Vijaya Karnataka Web police
| Screengrab from video | Courtesy : Pankaj Nain IPS/Twitter


Also Read : Coronavirus : ಬಿಯರ್ ತಯಾರಿಕಾ ಕಂಪನಿಗೆ ಟೆನ್ಷನ್ ತಂದ ಡೆಡ್ಲಿ ಕೊರೊನಾ ವೈರಸ್...! ಯಾಕೆ ಗೊತ್ತಾ...?

ಅಷ್ಟಕ್ಕೂ ಅಲ್ಲಿ ದಾಳಿ ಮಾಡಿದ್ದು ಒಂದು ಲಂಗೂರ್... ಈ ಲಂಗೂರ್‌ಗೆ ಅದ್ಯಾವ ಕೋಪ ಇತ್ತೋ ಓಡಿ ಬಂದು ಒಂದೇ ಸಮನೆ ಚಂಗನೆ ಹಾರಿ ಪರೇಡ್ ನಿರತ ಪೊಲೀಸ್ ಒಬ್ಬರ ಮೇಲೆ ದಾಳಿ ಮಾಡಿತ್ತು.


ಐಪಿಎಸ್ ಅಧಿಕಾರಿ ಪಂಕಜ್ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಇದು ಭಾರೀ ವೈರಲ್ ಆಗುತ್ತಿದೆ.

Also Read : Viral Video : ಆಸ್ಟ್ರೇಲಿಯಾದಲ್ಲಿ ಕ್ಷಣಕ್ಷಣಕ್ಕೂ ಕಾಳ್ಗಿಚ್ಚು ವ್ಯಾಪಿಸುತ್ತಿದ್ದದ್ದು ಹೇಗೆ...? ಇಲ್ಲಿದೆ ಅಂದಿನ ವಿಡಿಯೋ...!

ಶಿಸ್ತಿನ ಸಿಪಾಯಿಗಳು ಪಥಸಂಚಲನ ಮಾಡುತ್ತಿದ್ದ ಸಂದರ್ಭದಲ್ಲಿಯೇ ಲಂಗೂರ್‌ ಓಡಿ ಬಂದು ಈ ದಾಳಿ ಮಾಡಿದೆ. ಈ ಲಂಗೂರ್ ಬಲವಾಗಿ ದೂಡಿದ್ದರಿಂದ ಆ ಪೊಲೀಸ್ ಬ್ಯಾಲೆನ್ಸ್‌ ತಪ್ಪಿದ್ದರು. ಜೊತೆಗೆ, ಈ ಅನಿರೀಕ್ಷಿತ ದಾಳಿಗೆ ಒಂದು ಕ್ಷಣ ಎಲ್ಲರೂ ಬೆಚ್ಚಿಬಿದ್ದಿದ್ದರು.

Also Read : Super Dad : ಸಾವಿಗೂ ಹೆದರದೆ ಮಗಳ ರಕ್ಷಣೆಗೆ ನಿಂತ ಅಪ್ಪ : ಕಲ್ಲುಹೃದಯವನ್ನೇ ಕರಗಿಸುವಂತಹ ವಿಡಿಯೋ ಇದು

ಈ ವಿಡಿಯೋ ಯಾವಾಗ ಚಿತ್ರೀಕರಿಸಿದ್ದು ಮತ್ತು ಇದು ಎಲ್ಲಿನ ವಿಡಿಯೋ ಎಂಬುದು ಸ್ಪಷ್ಟವಾಗಿಲ್ಲ. ಈ ಲಂಗೂರ್ ಅದ್ಯಾವ ಕಾರಣಕ್ಕೆ ಓಡಿ ಬಂದು ಈ ರೀತಿ ದಾಳಿ ಮಾಡಿದೆ ಎಂಬುದೂ ಗೊತ್ತಿಲ್ಲ. ಆದರೆ, ಲಂಗೂರ್ ಕೋಪಕ್ಕೆ ತುತ್ತಾಗಿದ್ದ ಪಾಪದ ಆ ಪೊಲೀಸ್ ಅಧಿಕಾರಿಯ ಆ ಕ್ಷಣದ ಸ್ಥಿತಿ ನೆನೆದಾಗ ನಿಜಕ್ಕೂ ಮರುಕ ಉಂಟಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ