ಆ್ಯಪ್ನಗರ

ನಡುರಸ್ತೆಯಲ್ಲಿ ದಂಪತಿಯ ಗಲಾಟೆ : ಟ್ರಾಫಿಕ್ ನಿಯಂತ್ರಿಸುವಷ್ಟರಲ್ಲಿ ಪೊಲೀಸರು ಸುಸ್ತು...!

ನಡುರಸ್ತೆಯಲ್ಲಿ ದಂಪತಿ ಜಗಳ ಮಾಡಿಕೊಂಡ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಈ ಗಲಾಟೆಯಿಂದ ಉಂಟಾದ ಟ್ರಾಫಿಕ್ ಜಾಮ್ ನಿಯಂತ್ರಿಸುವಲ್ಲಿ ಪೊಲೀಸರು ಸುಸ್ತಾಗಿ ಹೋಗಿದ್ದರು.

Vijaya Karnataka Web 13 Jul 2020, 5:33 pm
ವಿವಾಹ ಎಂಬುದು ಎಲ್ಲರ ಬದುಕಿನ ಮಹತ್ವದ ಘಟ್ಟ. ಪರಸ್ಪರ ಸಹಬಾಳ್ವೆಯಿಂದ, ಮನಸ್ಸು ಹಂಚಿಕೊಂಡು ಜೀವನದುದ್ದಕ್ಕೂ ಕಷ್ಟ ಸುಖದಲ್ಲಿ ಜೊತೆಯಾಗಿರುವವರು ಗಂಡ ಹೆಂಡತಿ. ಆದರೆ, ಎಲ್ಲಾ ಸಂದರ್ಭದಲ್ಲೂ ಪರಿಸ್ಥಿತಿ ಒಂದೇ ರೀತಿ ಇರುವುದಿಲ್ಲ. ಸಂಸಾರ ಎಂದರೆ ಮೇಲೆ ಚಿಕ್ಕಪುಟ್ಟ ಮನಸ್ತಾಪ, ಜಗಳ, ಕೋಪ ಸಾಮಾನ್ಯ. ಪ್ರೀತಿ ಇದ್ದಲ್ಲಿ ಜಗಳ ಇರುತ್ತದೆ ಎಂಬಂತೆ ಪ್ರತಿ ಕುಟುಂಬದಲ್ಲೂ ಈ ಜಟಾಪಟಿ ಇದ್ದೇ ಇರುತ್ತದೆ ಮತ್ತು ಬಹುತೇಕ ಸಂದರ್ಭದಲ್ಲಿ ಈ ಕೋಪ ಶೀಘ್ರ ಮರೆಯಾಗುತ್ತದೆ. ಆದರೆ, ಕೆಲವೊಂದು ಸಲ ಸಣ್ಣದಾಗಿ ಶುರುವಾದ ಜಗಳವೂ ಬೆಟ್ಟದ ರೂಪ ತಾಳಿ ಸತಿಪತಿಗಳೇ ದೂರವಾಗುವ ಮಟ್ಟಕ್ಕೂ ಬರುವುದಿದೆ. ಒಂದಷ್ಟು ದಿನ ನಾಲ್ಕು ಗೋಡೆಗಳ ನಡುವೆ ಇರುವ ಈ ಮನಸ್ತಾಪ ಬಳಿಕ ಬೀದಿ ಜಗಳದ ರೂಪ ತಾಳುವುದು ಕೂಡಾ ಹೊಸದೇನು ಅಲ್ಲ. ಆದರೆ, ಇಂತಹ ಜಗಳ ಕೆಲವೊಂದು ಸಲ ನಡುರಸ್ತೆಯಲ್ಲಿ ಸ್ಫೋಟಗೊಂಡು ದೊಡ್ಡ ರಾದ್ಧಾಂತಕ್ಕೆ ಕಾರಣವಾಗುವುದೂ ಇದೆ. ಸದ್ಯ ಮುಂಬೈಯಲ್ಲಿ ಇಂತಹದ್ದೇ ಸನ್ನಿವೇಶ ಎದುರಾಗಿತ್ತು. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
Vijaya Karnataka Web Fighting On The Road
| Screengrab from video | Courtesy : Times of India/Twitter


Also Read : ಮಹಿಳೆಯ ಗಂಟಲಿನಲ್ಲಿತ್ತು 3.8 ಸೆಂಟಿಮೀಟರ್ ಉದ್ದದ ಹುಳು...!

Also Read : ಈ ಪ್ರಖ್ಯಾತ ಹೋಟೆಲ್‌ನ ಕೋಣೆ ಕೋಣೆಗೆ ಹೋದರೂ ಸಿಗುತ್ತದೆ ದೆವ್ವದ ಕತೆ...!

ಅದು ಮುಂಬೈನ ಪ್ರದೇಶವೊಂದರ ಅತ್ಯಂತ ಬ್ಯುಸಿ ರಸ್ತೆ. ಈ ರಸ್ತೆಯಲ್ಲಿಯೇ ಪ್ರತ್ಯೇಕ ಕಾರಿನಲ್ಲಿ ಬಂದಿದ್ದ ದಂಪತಿ ಪರಸ್ಪರ ಜಗಳಕ್ಕೆ ನಿಂತಿದ್ದರು. ಪತ್ನಿ ತನ್ನ ಕಾರಿನಿಂದ ಇಳಿದು ಪತಿ ಇದ್ದ ಕಾರಿನ ಡ್ರೈವಿಂಗ್ ಸೀಟ್‌ನ ವಿಂಡೋ ಗ್ಲಾಸ್ ಎಳೆದು ಗಲಾಟೆ ಮಾಡಿದ್ದಲ್ಲದೆ, ಬಳಿಕ ಕಾರಿನ ಬೋನಟ್ ಮೇಲೆ ಹತ್ತಿ ಚಪ್ಪಲಿಯಿಂದ ಹೊಡೆದು ರೌದ್ರಾವತಾರ ತಾಳಿದ್ದರು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇತ್ತ, ಈ ಗಲಾಟೆಯಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ಈ ಜಗಳ ನಿಲ್ಲಿಸುವುದಾ, ಟ್ರಾಫಿಕ್ ಕಂಟ್ರೋಲ್ ಮಾಡುವುದಾ ಎಂಬ ದೊಡ್ಡ ಟೆನ್ಷನ್‌ನಲ್ಲಿ ಮುಳುಗಿದ್ದರು.

Also Read : ಬ್ರಿಟಿಷರ ಕಾಲದ `ಗೊಂಬೆಗಳ ಮನೆ'ಯಲ್ಲಿದೆಯಂತೆ ಯುವತಿಯರ ಪ್ರೇತಾತ್ಮಗಳ ಸಂಚಾರ

ಎಷ್ಟು ಸಮಾಧಾನ ಮಾಡಿದರೂ ಗಲಾಟೆಗೆ ನಿಂತ ಪತ್ನಿ ಸಮಾಧಾನ ಆಗಿರುವ ರೀತಿ ಕಾಣುತ್ತಿರಲಿಲ್ಲ. ಅದೂ ಅಲ್ಲದೆ, ಪತಿಯ ಕಾರಿನಲ್ಲಿದ್ದ ಸಹ ಪ್ರಯಾಣಿಕೆಯೊಂದಿಗೆ ಆತನಿಗೆ ಸಂಬಂಧ ಇದೆ ಎಂದೂ ಪತ್ನಿ ಆರೋಪಿಸಿದ್ದು, ಪತ್ನಿ ಆಕೆಗೂ ಥಳಿಸಿದ್ದಾಳೆ ಎನ್ನಲಾಗಿದೆ. ಈ ಬಳಿಕ ಮೂವರನ್ನು ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿದ್ದಾರೆ ಮತ್ತು ಸಾರ್ವಜನಿಕರಿಗೆ ತೊಂದರೆ ಕೊಟ್ಟಿದ್ದಕ್ಕೆ ದಂಡವನ್ನೂ ವಿಧಿಸಿದ್ದಾರೆ ಎಂದು ಗೊತ್ತಾಗಿದೆ. ಸದ್ಯ ಈ ಗಲಾಟೆಯ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ