ಆ್ಯಪ್ನಗರ

ಸಿಟ್ಟು ಬಂದು ಪಕ್ಕದಲ್ಲಿದ್ದವನಿಗೆ ಹೊಡೆದ ಮದುಮಗ...! : ಇಲ್ಲಿದೆ ವಿಡಿಯೋ

ಮದುಮಗನೊಬ್ಬ ಸಿಟ್ಟು ಬಂದು ಪಕ್ಕದಲ್ಲಿದ್ದ ವ್ಯಕ್ತಿಗೆ ಹೊಡೆದಿದ್ದಾನೆ. ಈ ಯುವಕ ಕೋಪಗೊಳ್ಳುವುದಕ್ಕೂ ಒಂದು ಕಾರಣ ಇದೆ. ಆದರೆ, ಪಾಪ ವಧು, ಆಗಷ್ಟೇ ವರಿಸಿದ ಗಂಡನನ್ನು ಸಮಾಧಾನ ಮಾಡುವಷ್ಟರಲ್ಲಿ ಸುಸ್ತಾಗಿದ್ದಳು..

Vijaya Karnataka Web 6 Dec 2019, 4:01 pm
ಮದುವೆ ಎಂದರೆ ಆ ಖುಷಿಯೇ ಬೇರೆ... ತಮಾಷೆ, ಕೀಟಲೆ, ತುಂಟಾಟ ಈ ಖುಷಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಆದರೆ, ಕೆಲವೊಮ್ಮೆ ತಮಾಷೆ ಕೂಡಾ ದೊಡ್ಡ ಗಲಾಟೆಗೆ ಕಾರಣವಾಗುತ್ತದೆ. ತಮಾಷೆಯಿಂದ ಶುರುವಾದ ಗಲಾಟೆ ಬೆಟ್ಟದ ರೂಪದ ತಾಳಿ ಮದುವೆಯೇ ನಿಂತು ಹೋದ ಒಂದಷ್ಟು ಉದಾಹರಣೆಗಳಿವೆ. ಸದ್ಯ ಇಂತಹದ್ದೇ ಟಿಕ್‌ಟಾಕ್ ವಿಡಿಯೋ ವೈರಲ್ ಆಗುತ್ತಿದೆ. ಟ್ವಿಟ್ಟರಿನಲ್ಲಿ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ.
Vijaya Karnataka Web Groom slaps man
ಯುವಕನಿಗೆ ಹೊಡೆಯುತ್ತಿರುವ ಮದುಮಗ : | Image Courtesy: Godman Chikna/Twitter


Also Read : ವ್ಹಾವ್ ಅದ್ಭುತ ಗೆಲುವು... ಖಂಡಿತಾ ಕಣ್ಣೀರು ತರಿಸುವ ದೃಶ್ಯವಿದು...

ವಿಡಿಯೋದ ಆರಂಭದಲ್ಲಿ ಎಲ್ಲರೂ ಖುಷಿ ಖುಷಿಯಾಗಿ ಇರುವ ದೃಶ್ಯವಿದೆ. ಮದುಮಗಳ ಪಕ್ಕದಲ್ಲಿ ಮದುಮಗನೂ ಕೆನ್ನೆ ಕೆಂಪು ಮಾಡಿ ನಾಚುತ್ತಾ ಕುಳಿತಿದ್ದ. ಇವರು ಕುಳಿತಿದ್ದ ಆಲಂಕಾರಿಕ ಚೇರ್‌ನ ಹಿಂದೆ ನಿಂತಿದ್ದ ಯುವಕನೊಬ್ಬ ಮದುಮಗನಿಗೆ ಕೀಟಲೆ ಮಾಡುತ್ತಿದ್ದ. ಮದುಮಗನ ಪೇಟಾವನ್ನು ತೆಗೆದು ತುಂಟಾಟ ಮಾಡುತ್ತಿದ್ದ. ಮದುಮಗನೂ ಇದನ್ನು ನಗುತ್ತಲೇ ಸ್ವೀಕರಿಸುತ್ತಿದ್ದ.

Also Read : ಯಾವತ್ತೋ ರಕ್ಷಿಸಿದ ವ್ಯಕ್ತಿಯ ಭೇಟಿಗೆ ಪ್ರತಿವರ್ಷ 8,000 ಕಿ.ಮೀ ದೂರ ಸಾಗಿ ಬರುತ್ತದೆ ಈ ಪೆಂಗ್ವಿನ್...!

ತುಂಬಾ ಹೊತ್ತಿನ ತನಕ ಇದು ಮುಂದುವರಿದಿದೆ. ಆದರೆ, ಒಂದು ಹಂತದಲ್ಲಿ ಮದುಮಗ ತಾಳ್ಮೆ ಕಳೆದುಕೊಂಡಿದ್ದ. ಹೀಗಾಗಿ, ಇನ್ನೊಂದು ಸಲ ತನಗೆ `ತೊಂದರೆ' ಕೊಡುವ ಯುವಕನ ಕೈ ಹಿಡಿದು ಚೆನ್ನಾಗಿ ಬಾರಿಸಿದ್ದಾನೆ. ಅಷ್ಟರವರೆಗೆ ಚೆನ್ನಾಗಿದ್ದ ಸನ್ನಿವೇಶ ದಿಢೀರ್ ಆಗಿ ಗಲಾಟೆಯ ರೂಪ ಪಡೆದಿದೆ. ಪಾಪ ವಧು ಮದುಮಗನನ್ನು ಸಮಾಧಾನ ಮಾಡಲು ಹಿಡಿದು ಎಳೆದು ಕುಳಿತುಕೊಳ್ಳಿಸಲು ಯತ್ನಿಸುವ ದೃಶ್ಯವೂ ಇಲ್ಲಿ ಸೆರೆಯಾಗಿದೆ.

Also Read : ಲತಾ ಮಂಗೇಶ್ಕರ್‌ರಂತೆ ಹಾಡುವ ಎರಡು ವರ್ಷದ ಕಂದ...! : ತಲೆದೂಗಲೇಬೇಕು ಈ ಪ್ರತಿಭೆಗೆ

ಇದು ಎಲ್ಲಿನ ವಿಡಿಯೋ ಮತ್ತು ಯಾವಾಗ ಚಿತ್ರೀಕರಣವಾಗಿದ್ದ ವಿಡಿಯೋ ಎಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ. ಆದರೆ, ಸದ್ಯ ಈ ವಿಡಿಯೋ ಸಖತ್ ಆಗಿಯೇ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಎಲ್ಲರನ್ನೂ ಒಂದು ಕ್ಷಣ ಕಿಸಕ್ಕನೆ ನಗುವಂತೆ ಮಾಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ