ಆ್ಯಪ್ನಗರ

Viral Video : ಅಜ್ಜನ ಕಿತಾಪತಿಗೆ 30 ಅಡಿ ಎತ್ತರದಿಂದ ಬಿದ್ದ ಪೇಂಟರ್...!

ವೃದ್ಧರೊಬ್ಬರು ಪೇಂಟರ್ ನಿಂತಿದ್ದ ಏಣಿಯನ್ನು ಅಲುಗಾಡಿಸಿ ಆತನನ್ನು ಕೆಳಗೆ ಬೀಳಿಸಿದ್ದಾರೆ. ಅಜ್ಜನ ಕಿತಾಪತಿಯ ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

Vijaya Karnataka Web 10 Jan 2020, 11:12 am
ಆ ಪೇಂಟರ್ ಮನೆಯ ಹೊರಗಡೆ ಏಣಿಯೇರಿ ಪೇಂಟ್ ಮಾಡುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ವ್ಹೀಲ್‌ ಚೇರ್‌ನಲ್ಲಿ ಬಂದವರು ಒಬ್ಬರು ಅಜ್ಜ. ಹೀಗೆ ಬಂದ ಅಜ್ಜನಿಗೆ ಅದೇನನಿಸಿತೋ ಏನೋ ಪೇಂಟರ್ ನಿಂತಿದ್ದ ಏಣಿಯನ್ನು ಅಲುಗಾಡಿಸಲು ಶುರು ಮಾಡಿದರು...! ಈ ಅಜ್ಜ ಪೇಂಟರನ್ನು ಕೆಳಗೆ ಬೀಳಿಸಬೇಕು ಎಂಬ ಉದ್ದೇಶದಿಂದಲೇ ತನ್ನೆಲ್ಲಾ ಬಲವನ್ನು ಪ್ರಯೋಗಿಸಿ ಎಣಿಯನ್ನು ಅಲ್ಲಾಡಿಸಿದ್ದರು... ಎಲ್ಲಿವರೆಗೆ ಎಂದರೆ ಪೇಂಟರ್ ಕೆಳಗೆ ಬೀಳುವ ತನಕ ಇವರು ಏಣಿ ಅಲುಗಾಡಿಸುವುದನ್ನು ಬಿಡಲಿಲ್ಲ...!
Vijaya Karnataka Web Painter falls 30 ft from ladder
ಸಿಸಿ ಕ್ಯಾಮೆರಾ ದೃಶ್ಯ | Screengrab from video


Also Read : ಪ್ರೀತಿ ಪರ್ವತ : ಮೊಟ್ಟೆಯನ್ನು ವಾಹನದ ಚಕ್ರದಿಂದ ರಕ್ಷಿಸುವ ತಾಯಿ ಹಕ್ಕಿಯ ಜಾಣ್ಮೆಗೆ ನೀವು ಫಿದಾ ಆಗ್ತೀರ

ಇದು ನಡೆದಿರುವುದು ಪೇರುವಿನ ಲಿಮಾ ಎಂಬ ಪ್ರದೇಶದಲ್ಲಿ. ಈ ಅಜ್ಜನ ಕಿತಾಪತಿಗೆ ಪೇಂಟರ್ 30 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದರು. ಈ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಇದು ಸಾಮಾಜಿಕ ಮಾಧ್ಯಮಗಳಲ್ಲಿ ಸಖತಾಗಿಯೇ ಹರಿದಾಡುತ್ತಿದೆ. ಇದು ಮೂರಂತಸ್ತಿನ ಕಟ್ಟಡವಾಗಿತ್ತು. ಹೀಗಾಗಿ, ಈ ಏಣಿ ಜಾರಬಾರದೆಂದು ಕಟ್ಟಡದ ಬಾಗಿಲಿಗೆ ಕಟ್ಟಲಾಗಿತ್ತು. ಆದರೂ, ಅಜ್ಜ ಏಣಿಯನ್ನು ಅಲುಗಾಡಿಸುವ ವೇಗಕ್ಕೆ ಪೇಂಟರ್ ಬ್ಯಾಲೆನ್ಸ್‌ ತಪ್ಪಿ ಪೇಂಟರ್ ಕೆಳಗೆ ಬಿದ್ದಿದ್ದರು.

Also Read : ಅಮ್ಮನಿಗೆ ಅಮ್ಮನೇ ಸಾಟಿ... : ತಾಯಿ ಪ್ರೀತಿಯಲ್ಲೇ ಮನಸ್ಸು ಗೆಲ್ಲುತ್ತಾಳೆ ಈ ಸಿಂಹಿಣಿ...

Video Courtesy : Info - Viral - Fun/Youtube

ಈ ವೇಳೆ, ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಕಿತಾಪತಿ ಮಾಡಿದ ಅಜ್ಜನನ್ನು ಪ್ರಶ್ನಿಸುವ ದೃಶ್ಯವೂ ಸೆರೆಯಾಗಿದೆ. ಕೆಳಗೆ ಬಿದ್ದ ಪೇಂಟರನ್ನು ಫರ್ನಾಂಡೀಸ್ ಸ್ಯಾಂಚೆಝ್ ಎಂದು ಗುರುತಿಸಲಾಗಿದೆ. ತಕ್ಷಣ ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಅದೃಷ್ಟವಶಾತ್ ಯಾವುದೇ ದೊಡ್ಡ ಮಟ್ಟದ ಗಾಯಗಳಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

Also Read : ಭಯಪಡ್ಬೇಡಿ... ಇದು ಏಲಿಯನ್ ಅಲ್ಲ...! : ನಿಜ ಗೊತ್ತಾದರೆ ಖಂಡಿತಾ ಶಾಕ್ ಆಗ್ತೀರ...!

ತನ್ನ ವ್ಹೀಲ್‌ ಚೇರ್‌ಗೆ ಏಣಿ ಅಡ್ಡ ಇತ್ತು ಎಂಬ ಕಾರಣಕ್ಕೆ ಕೋಪಗೊಂಡ ಅಜ್ಜ ಹೀಗೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಲ್ಲದೆ, ಈ ಅಜ್ಜ ಸದಾ ಹೀಗೆಯೇ ಎಲ್ಲದಕ್ಕೂ ರೇಗಾಡುತ್ತಾ ಮಾತನಾಡುತ್ತಾರೆ ಎಂದೂ ಸ್ಥಳೀಯರು ತಿಳಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ