ಆ್ಯಪ್ನಗರ

ಜೆಸಿಬಿ ಮೂಲಕ ಪ್ರವಾಹದಲ್ಲಿ ಮುಳುಗಿದ್ದ ಕಾರಿನಲ್ಲಿದ್ದವರ ರಕ್ಷಣೆ! : ವಿಡಿಯೋ ವೈರಲ್

ಪ್ರವಾಹ ಸಂದರ್ಭದಲ್ಲಿ ಮುಳುಗುತ್ತಿದ್ದ ಕಾರಿನಿಂದ ಮೂವರನ್ನು ಜೆಸಿಬಿ ಮೂಲಕ ರಕ್ಷಿಸುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ. ಈ ವಿಡಿಯೋ ಒಂದು ಕ್ಷಣ ಭಯ ಹುಟ್ಟಿಸುವಂತಿದೆ.

Vijaya Karnataka Web 13 Aug 2020, 1:50 pm
ಈಗ ಎಲ್ಲಿ ನೋಡಿದರೂ ಬಹುತೇಕ ಮಳೆಯದ್ದೇ ಅಬ್ಬರ. ಕೊರೊನಾ ವೈರಸ್ ಆರ್ಭಟದ ನಡುವೆ ಅಲ್ಲಲ್ಲಿ ವರುಣ ಕೂಡಾ ತನ್ನ ಪ್ರತಾಪ ತೋರಿಸುತ್ತಿದ್ದಾನೆ. ಪರಿಣಾಮ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಅನೇಕ ಅವಾಂತರಗಳು ಸಂಭವಿಸಿವೆ. ಮಳೆಯಿಂದಾದ ಈ ಅವಾಂತರಗಳನ್ನು ಕಂಡಾಗಲೇ ಎದೆ ನಡುಗಿದಂತಾಗುತ್ತದೆ. ಕೆಲವು ಕಡೆ ಪ್ರವಾಹದಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಎಲ್ಲಾ ಹೃದಯ ವಿದ್ರಾವಕ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಇಂತಹದ್ದೇ ಮತ್ತೊಂದು ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ಮುನ್ನೆಲೆಗೆ ಬಂದಿದೆ.
Vijaya Karnataka Web Image by Linda Russ from Pixabay
| Representative image | Image by Linda Russ from Pixabay


Also Read : 2 ಬೆಕ್ಕುಗಳಿಗೆ ಪುಟಾಣಿ ಬಾಲಕಿಯ ಕ್ಲಾಸ್! : ಅದ್ಭುತವಾಗಿದೆ ಈ ಮುಗ್ಧ ವಿಡಿಯೋ

ಇದು ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸುವ ಕಾರ್ಯಾಚರಣೆಯ ವಿಡಿಯೋ. ತೀವ್ರ ಪ್ರವಾಹದಿಂದ ಕಾರೊಂದು ಕೊಚ್ಚಿ ಹೋಗಿತ್ತು. ಈ ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದರು. ಹೀಗೆ ಕೊಚ್ಚಿ ಹೋಗಿದ್ದ ಕಾರು ಬಹುತೇಕ ನೀರಿನಲ್ಲಿ ಮುಳುಗಿತ್ತು. ಹೀಗಾಗಿ, ಪ್ರಾಣ ರಕ್ಷಣೆಗೋಸ್ಕರ ಈ ಮೂವರು ಕಾರಿನ ಮೇಲೆ ಬಂದು ಕುಳಿತಿದ್ದರು. ಕ್ಷಣಕ್ಷಣಕ್ಕೂ ಪ್ರಾಣ ಭಯ ಹೆಚ್ಚಾಗುತ್ತಿದ್ದಂತೆಯೇ ಇವರನ್ನು ಜೆಸಿಬಿ ಮೂಲಕ ರಕ್ಷಿಸಲಾಗಿದೆ. ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾನ್ಶು ಕಬ್ರಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಇಲ್ಲಿದೆ ವೈರಲ್ ವಿಡಿಯೋ :

Also Read : ಸಾವಿರಕ್ಕೂ ಅಧಿಕ ಪ್ರಾಣಿಗಳನ್ನು ರಕ್ಷಿಸಿರುವ ಧೀರೆ : ಇದು ಸಾಧಕಿಯೊಬ್ಬರ ಕತೆ

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಲವರ ಗಮನ ಸೆಳೆದಿದೆ. ಎಲ್ಲರೂ ಬಲು ಕುತೂಹಲದಿಂದಲೇ ಉಸಿರುಬಿಗಿ ಹಿಡಿದು ಈ ವಿಡಿಯೋವನ್ನು ನೋಡಿದ್ದಾರೆ. ಜೊತೆಗೆ, ಭಯ, ಅಚ್ಚರಿಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

Also Read : ವ್ಹಾವ್... ಬಾತುಕೋಳಿ ಮರಿ ಮತ್ತು ಶ್ವಾನದ ಸ್ನೇಹ : ಮನಸೆಳೆಯದೇ ಇರದು ಈ ಬಾಂಧವ್ಯ

ಹಾಗಂತ, ಇದು ಈಗಿನ ವಿಡಿಯೋ ಅಲ್ಲ. ನೆಟ್ಟಿಗರೊಬ್ಬರು ಇದು 2019ರಲ್ಲಿ ನಡೆದ ಘಟನೆ ಎಂದು ಮಾಹಿತಿ ನೀಡಿದ್ದಾರೆ.

ಹಳೆಯ ವಿಡಿಯೋ ಆದರೂ ಈ ವಿಡಿಯೋವನ್ನು ಸದ್ಯ ಜನ ಬಲು ಕುತೂಹಲದಿಂದಲೇ ವೀಕ್ಷಿಸಿದ್ದಾರೆ. ಜೊತೆಗೆ, ಮೂವರ ರಕ್ಷಣಾ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆಯೇ ಎಲ್ಲರೂ ಒಂದು ಕ್ಷಣ ನಿಟ್ಟುಸಿರು ಬಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ