ಅವರಿಬ್ಬರು ಖುಷಿ ಖುಷಿಯಾಗಿಯೇ ಆಗಸಕ್ಕೆ ಹಾರಿದ್ದರು... ಅದೆಷ್ಟೋ ಅಡಿ ಎತ್ತರದಲ್ಲಿ ವಿಹರಿಸುತ್ತಾ ಎಲ್ಲಾ ವಿಹಂಗಮ ನೋಟವನ್ನು ಸವಿಯುತ್ತಿದ್ದರು... ಆದರೆ, ಇವರ ಈ ಖುಷಿ ಅಲ್ಪಾಯುಷಿಯಾಗಿತ್ತು. ಯಾಕೆಂದರೆ, ಈ ಇಬ್ಬರು ಸ್ಕೈಡೈವರ್ಸ್ ಕನಸಿನಲ್ಲೂ ಊಹಿಸದೇ ಇರುವಂತಹ ಘಟನೆಯೊಂದು ಅಲ್ಲಿ ನಡೆದು ಹೋಗಿತ್ತು. ಹೀಗಾಗಿ, ನೋಡ ನೋಡುತ್ತಿದ್ದಂತೆಯೇ ಆ ಇಬ್ಬರು ನತದೃಷ್ಟರು ಕೆಳಗೆ ಬಿದ್ದಿದ್ದರು...!
Also Read : ಪ್ರೀತಿಗೆ ಕರಗುವ ಹುಲಿ, ಕೋತಿಗೆ ಸಿಕ್ತು ತಾಯಿ ಪ್ರೀತಿ: ಇದು ಪ್ರಾಣಿಪ್ರಪಂಚದ ಅಚ್ಚರಿ
ಫ್ಲೋರಿಡಾದಲ್ಲಿ ಸೆರೆಯಾದ ದೃಶ್ಯವಿದು. ಪ್ಯಾರಾಚ್ಯೂಟ್ನಲ್ಲಿ ಕಾಣಿಸಿಕೊಂಡ ತೊಂದರೆಯಿಂದ ಈ ಇಬ್ಬರು ಸ್ಕೈಡೈವರ್ಸ್ ಕೆಳಗೆ ಬಿದ್ದಿದ್ದಾರೆ. ಇವರಿಬ್ಬರು ಕೆಳಗೆ ಬೀಳುವ ದೃಶ್ಯವನ್ನು ನೋಡಿದಾಗ ಎದೆಯೇ ನಡುಗಿದಂತಾಗುತ್ತದೆ. ಸುಮಾರು 32 ಸೆಕೆಂಡಿನ ಈ ಭಯಾನಕ ವಿಡಿಯೋ ಈಗ ಫೇಸ್ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
Also Read : ಬ್ರೆಡ್ ಮಾಡಲು ಹೋಗಿ ಮುಖಕ್ಕೆ ಪೆಟ್ಟು ತಿಂದ ಮಹಿಳೆ! : ಇಲ್ಲಿದೆ ಫನ್ನಿ ವಿಡಿಯೋ
ಈ ಘಟನೆಯ ಪ್ರತ್ಯಕ್ಷದರ್ಶಿ ಕ್ರಿಸ್ಟಿನಾ ರೆನ್ಫ್ರೊ ಈ ವಿಡಿಯೋವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇಲ್ಲಿನ `ಡಾಗ್ ಪಾರ್ಕ್ ಬಳಿ ಈ ಘಟನೆ ನಡೆದಿದೆ' ಎಂದು ಕ್ರಿಸ್ಟಿನಾ ಬರೆದುಕೊಂಡಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಘಟನೆ ನಡೆದ ತಕ್ಷಣ ಈ ಇಬ್ಬರು ಸ್ಕೈಡೈವರ್ಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಇವರಿಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಗೊತ್ತಾಗಿದೆ. ಸದ್ಯ ಈ ಘಟನೆಗೆ ಕಾರಣವಾದ ಪ್ಯಾರಾಚ್ಯೂಟ್ ದೋಷದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
Also Read : ಮುದ್ದಿನ ಶ್ವಾನಗಳೊಂದಿಗೆ ಲೈವ್ ಮೀಟಿಂಗ್ : ಈ ವಿಡಿಯೋ ನೋಡಿದರೆ ನಕ್ಕು ಬಿಡ್ತೀರ!
ಟೈಟುಸ್ವಿಲ್ಲೆ ಅಗ್ನಿಶಾಮಕ ಇಲಾಖೆ ಕೂಡಾ ಈ ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಫೋಟೋಗಳನ್ನು ನೋಡಿದಾಗಲೇ ದಿಗಿಲಾಗುತ್ತದೆ.
ಇತ್ತ, ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿದ ಎಲ್ಲರೂ ಈ ಘಟನೆಗೆ ಮರುಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಇಬ್ಬರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ನಿಜಕ್ಕೂ ಈ ವಿಡಿಯೋ ನೋಡಿದಾಗ ಹೃದಯ ಕರಗುತ್ತದೆ...