ಆ್ಯಪ್ನಗರ

ಪ್ರದೇಶದ ಅಧಿಪತ್ಯಕ್ಕಾಗಿ ತಾಯಿ ಮಗಳ ಫೈಟಿಂಗ್! ಈ ಕದನದಲ್ಲಿ ಗೆದ್ದವರು ಯಾರು ಗೊತ್ತಾ...?

ತಾಯಿ ಮಗಳು ತಮ್ಮ ಏರಿಯಾದಲ್ಲಿ ಪ್ರಾಬಲ್ಯ ಸಾಧಿಸಲು ಹೊಡೆದಾಡುವ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೆಟ್ಟಿಗರು ಬಲು ಕುತೂಹಲದಿಂದಲೇ ವೀಕ್ಷಿಸಿದ್ದಾರೆ.

Vijaya Karnataka Web 9 Oct 2020, 9:31 am
ಇದು ತಾಯಿ ಮಗಳ ಕದನ... ತಮ್ಮ ಅಧಿಪತ್ಯ ಸಾಧಿಸುವ ಸಲುವಾಗಿ ನಡೆಯುವ ಹೋರಾಟವಿದು... ಇದು ವನ್ಯಜೀವಿಗಳ ಬದುಕಿನ ಚಿತ್ರಣವೂ ಹೌದು...
Vijaya Karnataka Web Image from Pixabay
| Representative image | Image from Pixabay


ವನ್ಯಲೋಕ ಎಂಬುದು ಎಲ್ಲರ ಪಾಲಿಗೂ ಕುತೂಹಲದ ಕೇಂದ್ರ. ಇಲ್ಲಿನ ಪ್ರಾಣಿಗಳ ಜೀವನವನ್ನು ತಿಳಿದುಕೊಳ್ಳುವ ಆಸಕ್ತಿ ಬಹುತೇಕ ಎಲ್ಲರಿಗೂ ಇರುತ್ತದೆ. ಈಗಂತೂ ಸೋಶಿಯಲ್ ಮೀಡಿಯಾಗಳ ಪ್ರಾಬಲ್ಯ ಹೆಚ್ಚಿದ್ದರಿಂದ ವನ್ಯಲೋಕದ ಅಪರೂಪದ ಮತ್ತು ಆಸಕ್ತಿಕರ ವಿಷಯ, ವಿಡಿಯೋಗಳಿಗೇನು ತೊಂದರೆ ಇಲ್ಲ. ಸದಾ ಇಲ್ಲಿ ಕುತೂಹಲಿಗಳ ಮನಸ್ಸು ತಣಿಸುವ ಒಂದಲ್ಲ ಒಂದು ಆಸಕ್ತಿದಾಯಕ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಅಂತಹ ಕೌತುಕದ ದೃಶ್ಯದಲ್ಲಿ ಇದು ಕೂಡಾ ಒಂದು.

Also Read : ಕಂದನನ್ನು ಬಿಗಿದಪ್ಪಿ ಮುದ್ದಿಸುವ ಶ್ವಾನ : ಈ ಪ್ರೀತಿ, ವಿಶ್ವಾಸವೇ ಸುಂದರ...

ಇದು ತಾಯಿ ಮಗಳ ಹೋರಾಟದ ದೃಶ್ಯ. ವನ್ಯಲೋಕದಲ್ಲಿ ಅಧಿಪತ್ಯಕ್ಕಾಗಿ ನಡೆಯುವ ಹೋರಾಟ ಹೊಸದಲ್ಲ. ಹುಲಿ, ಸಿಂಹದಂತಹ ಬಲಾಢ್ಯ ಪ್ರಾಣಿಗಳ ನಡುವೆ ಈ ಕದನ ಆಗಾಗ ನಡೆಯುತ್ತಿರುತ್ತದೆ. ಅಂತೆಯೇ, ಈ ಬಾರಿ ಎರಡು ಹುಲಿಗಳು ಹೊಡೆದಾಟ ನಡೆಸಿವೆ. ವಿಶೇಷ ಎಂದರೆ ಸಂಬಂಧದಲ್ಲಿ ಈ ಹುಲಿಗಳು ತಾಯಿ ಮಗಳು.

Also Read : 82 ವರ್ಷದ ಸ್ನೇಹಿತೆ ಮೇಲೆರಗಿದ್ದ ವ್ಯಕ್ತಿಯನ್ನು ಹೊಡೆದು ನೆಲಕ್ಕುರುಳಿಸಿದ 67 ವರ್ಷದ ಧೈರ್ಯವಂತೆ

ಇಲ್ಲಿ ಓಡೋಡಿ ಬರುವ ಹುಲಿ ಟಿ 84 ತಾಯಿ. ಇವಳ ಮಗಳು ರಿದ್ಧಿ. ರಿದ್ಧಿ ನೆಲದಲ್ಲಿ ಕುಳಿತಿದ್ದಾಳೆ. ಇವರಿಬ್ಬರ ನಡುವೆ ಹೋರಾಟ ನಡೆದಿದೆ. ಅದೃಷ್ಟವಶಾತ್ ಇಬ್ಬರೂ ಇನ್ನಷ್ಟು ಮಾರಣಾಂತಿಕವಾಗಿ ಹೊಡೆದಾಡಿಲ್ಲ ಮತ್ತು ಇಬ್ಬರಿಗೂ ಗಾಯಗಳಾಗಿಲ್ಲ. ಆದರೆ, ಅಮ್ಮ ಇನ್ನೂ ಶಕ್ತಿಯುತವಾಗಿದ್ದು, ತನ್ನ ಪ್ರದೇಶದಲ್ಲಿ ಹಿಡಿತವನ್ನು ಸಾಧಿಸಿರುವುದನ್ನು ಇಲ್ಲಿ ಕಾಣಬಹುದು. ವೈಲ್ಡ್‌ಲೆನ್ಸ್‌ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ. ರಣಥಂಬೋರ್‌ನಲ್ಲಿ ಸೆರೆಯಾದ ದೃಶ್ಯವಿದು.


Also Read : ಥೇಟ್ ಪ್ರತಿಮೆಯಂತೆ ತಿರುಗುವ ಪ್ರತಿಭಾವಂತ : ಅಚ್ಚರಿಯ ವಿಡಿಯೋ ವೈರಲ್

ಸದ್ಯ ಈ ವಿಡಿಯೋವನ್ನು ಎಲ್ಲರೂ ಬಲು ಕುತೂಹಲದಿಂದ ನೋಡಿದ್ದಾರೆ. ಕೆಲವರು ತಾಯಿ ಮಗಳ ನಡುವೆ ನಡೆದ ಕದನ ಎಂದು ಕೇಳಿ ಇನ್ನಷ್ಟು ಅಚ್ಚರಿಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ