ಆ್ಯಪ್ನಗರ

ಅಮ್ಮನ ಪ್ರೀತಿಯ ಅಪ್ಪುಗೆ... : ವ್ಹಾವ್... ಇದು ಅದ್ಭುತ ವಿಡಿಯೋ

ಕೋಲಾ ತನ್ನ ಕಂದನನ್ನು ವಾತ್ಸಲ್ಯದಿಂದ ಬಿಗಿದಪ್ಪುವ ಅದ್ಭುತ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Vijaya Karnataka Web 25 Jun 2020, 1:10 pm
ಅಮ್ಮನ ಪ್ರೀತಿಗಿಂತ ಮಿಗಿಲಾದ ಶಕ್ತಿ ಈ ಭೂಮಿ ಮೇಲೆ ಇದೆಯಾ...? ಖಂಡಿತಾ ಇಲ್ಲ. ಅಮ್ಮನ ನಿಷ್ಕಲ್ಮಶ ವಾತ್ಸಲ್ಯದ ಪವಿತ್ರ ಅಪ್ಪುಗೆಯಲ್ಲಿರುವ ಹಿತ ಬೇರೆಲ್ಲೂ ಸಿಗುತ್ತದಾ...? ಖಂಡಿತಾ ಇಲ್ಲ... ಅದಕ್ಕೇ ಹೇಳುವುದು ತಾಯಿ ಎಂದರೆ ಪ್ರತ್ಯಕ್ಷ ದೇವರೆಂದು. ತಾಯಿ ಮಮತೆ ಎಂಬುದು ಬೆಲೆ ಕಟ್ಟಲಾಗದ ನಿಧಿ. ಎಂತಹ ನೋವನ್ನೂ ದೂರ ಮಾಡುವ ಶಕ್ತಿ ಅಮ್ಮನ ಪ್ರೀತಿಯ ಮಾತಿನಲ್ಲಡಗಿರುತ್ತದೆ. ಕಣ್ಣಿಗೆ ಕಾಣುವ ದೇವರಾದ ತಾಯಿಯನ್ನು ಎಷ್ಟು ಹೊಗಳಿದರೂ ಅದು ಕಡಿಮೆಯೇ...
Vijaya Karnataka Web koala
| Screengrab from video | Courtesy : Sudha Ramen IFS/Twitter


Also Read : ಹಸಿವಿನಿಂದ ಬಸ್‌ನೊಳಗೇ ಜೀವ ಬಿಟ್ಟಿದ್ದ ಯುವಕ! : ಮತ್ತೆ ಕಾಡುತ್ತಿದೆ ಕರಾಳ ನೆನಪು...!

ತಾಯ್ತನ ಎನ್ನುವುದು ಕೂಡಾ ಒಂದು ಮಧುರ ಅನುಭವ. ಮಕ್ಕಳ ಲಾಲನೆ, ಪಾಲನೆಯಲ್ಲಿರುವ ಖುಷಿ, ಹಿತವೇ ಬೇರೆ. ಪ್ರತಿಯೊಬ್ಬ ತಾಯಿಯೂ ಈ ಕ್ಷಣವನ್ನು ಸಂಭ್ರಮಿಸುತ್ತಾಳೆ. ಹಾಗಂತ, ಬರೀ ಮನುಷ್ಯರಲ್ಲಿ ಮಾತ್ರ ಇಂತಹ ಖುಷಿ ಕಾಣಸಿಗುವುದಿಲ್ಲ. ಪ್ರಾಣಿಗಳಲ್ಲೂ ಈ ಸೊಬಗಿನ ನೋಟವನ್ನು ಕಾಣಬಹುದು. ಅದಕ್ಕೆ ಸಾಕ್ಷಿ ಈ ವಿಡಿಯೋ.

Also Read : `ಥ್ಯಾಂಕ್ಯೂ ಮಾ...' : ಎರಡು ವರ್ಷದ ಮುದ್ದು ಕಂದನಿಗೆ ನೀವೆಷ್ಟು ಮಾರ್ಕ್ಸ್‌ ಕೊಡ್ತೀರಿ...?

ಇಲ್ಲೊಂದು ತಾಯಿ ಕೋಲಾ ತನ್ನ ಕಂದನನ್ನು ಅಪ್ಪಿಕೊಳ್ಳುವ ಅದ್ಭುತ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಧಾ ರಾಮನ್ ಅವರು ಈ ಸುಂದರ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ತಾಯಿ ಕೋಲಾ ತನ್ನ ಮಡಿಲಲ್ಲಿ ಇರುವ ಕಂದನನ್ನು ಅತ್ಯಂತ ವಾತ್ಸಲ್ಯ ಭರಿತವಾಗಿ ಅಪ್ಪಿಕೊಳ್ಳುವ ದೃಶ್ಯವಿದೆ. ಈ ವಿಡಿಯೋ ನೋಡಿದಾಗಲೇ ಮನಸ್ಸು ತುಂಬಿ ಬರುತ್ತದೆ. ಆ ವಾತ್ಯಲ್ಯದ ಆಪ್ಯಾಯಮಾನ ಅನುಭವ ಎಂತಹದ್ದು ಎಂಬುದು ಈ ತಾಯಿ ಕೋಲಾದ ಮುಖಭಾವದಲ್ಲೇ ಗೊತ್ತಾಗುತ್ತದೆ...

Also Read : ಪಾರ್ಸೆಲ್ ಮನೆ ಬಾಗಿಲಿನಲ್ಲಿಟ್ಟು ಓಡಿದ ಡೆಲಿವರಿ ವುಮನ್! : ಈಕೆಯನ್ನು ಮೆಚ್ಚಿದ ನೆಟ್ಟಿಗರು!

ನಿರೀಕ್ಷೆಯಂತೆಯೇ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಈ ಅಪೂರ್ವ ವಿಡಿಯೋ ಕಂಡು ಖುಷಿಪಟ್ಟಿದ್ದಾರೆ. ಅಲ್ಲದೆ, ತಾಯಿ ಮಮತೆಯನ್ನು ಕೊಂಡಾಡಿದ್ದಾರೆ.

ನಿಜಕ್ಕೂ ಇದು ಅತ್ಯದ್ಭುತ ವಿಡಿಯೋ. ಕಂದನನ್ನು ಮುದ್ದಿಸುವ ಈ ತಾಯಿ ಕೋಲಾವನ್ನು ಕಂಡಾಗ ಮನಸ್ಸಲ್ಲೊಂದು ಹಿತಕರ ಭಾವನೆ ಮೂಡುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ