ಆ್ಯಪ್ನಗರ

11 ಲಕ್ಷ ರೂಪಾಯಿ ವರದಕ್ಷಿಣೆ ನಿರಾಕರಿಸಿ ಮಾದರಿಯಾದ ಯೋಧ

ಬಿಎಸ್‌ಎಫ್ ಕಾನ್ಸ್‌ಸ್ಟೇಬಲ್ ಒಬ್ಬರು ವರದಕ್ಷಿಣೆ ನಿರಾಕರಿಸಿ ಮಾದರಿಯಾಗಿದ್ದಾರೆ. ಜೊತೆಗೆ, ವರದಕ್ಷಿಣೆ ಮುಕ್ತ ಸಮಾಜ ನಿರ್ಮಾಣವಾಗಬೇಕೆಂದು ಇವರು ಬಯಸಿದ್ದಾರೆ.

Vijaya Karnataka Web 13 Nov 2019, 6:23 pm
ಜೈಪುರ : ವರದಕ್ಷಿಣೆ ಎಂಬ ಪಿಡುಗು ನಿವಾರಣೆಯಾಗಬೇಕು ನಿಜ. ಇದಕ್ಕಾಗಿ, ಕಾನೂನೇ ಇದೆ. ಆದರೂ ನಮ್ಮಲ್ಲಿ ವರದಕ್ಷಿಣೆ ಎಂಬುದು ಪೂರ್ಣ ಪ್ರಮಾಣದಲ್ಲಿ ದೂರವಾಗಿಲ್ಲ. ಇಂತಹ ಸಂದರ್ಭದಲ್ಲಿ ಒಂದಷ್ಟು ಮಂದಿ ವರದಕ್ಷಿಣೆಯನ್ನು ಸಾರಾ ಸಗಟಾಗಿ ನಿರಾಕರಿಸಿ ಸಮಾಜಕ್ಕೆ ಮಾದರಿಯಾಗುತ್ತಿದ್ದಾರೆ. ಅಂತವರಲ್ಲಿ ಬಿಎಸ್‌ಎಫ್‌ನ ಈ ಕಾನ್ಸ್‌ಸ್ಟೇಬಲ್ ಕೂಡಾ ಒಬ್ಬರು. ಯಾಕೆಂದರೆ, ಮದುವೆ ವೇಳೆ ಇವರು ಬರೋಬ್ಬರಿ 11 ಲಕ್ಷ ರೂಪಾಯಿ ವರದಕ್ಷಿಣೆಯನ್ನು ಬೇಡ ಎಂದು ತಿರಸ್ಕರಿಸಿದ್ದಾರೆ. ಬದಲಾಗಿ, 11 ರೂಪಾಯಿ ಮತ್ತು ಒಂದು ತೆಂಗಿನಕಾಯಿಯನ್ನು ದಕ್ಷಿಣೆಯಂತೆ ಪಡೆದಿದ್ದಾರೆ.
Vijaya Karnataka Web BSF Constable
ವರದಕ್ಷಿಣೆ ನಿರಾಕರಿಸುತ್ತಿರುವ ವರ


Also Read : ರಿಸೆಪ್ಶನ್ ವೇಳೆ ಬಂದ `ಕವರ್‌'ನಿಂದ ಮುರಿದು ಬಿತ್ತು ಮದುವೆ...! : ಸಂಚಿನ ಹಿಂದಿತ್ತು `ಆಕೆ'ಯ ಕೈಚಳಕ...!

ಅಂಬ ಬಾರಿ ಪ್ರದೇಶದ ಜಿತೇಂದ್ರ ಸಿಂಗ್ ಈ ಮಾದರಿ ಬಿಎಸ್‌ಎಫ್ ಕಾನ್ಸ್‌ಸ್ಟೇಬಲ್. ಮದುವೆ ವೇಳೆ ವಧುವಿನ ಪೋಷಕರು ಇವರಿಗೆ ನಗದನ್ನು ವರದಕ್ಷಿಣೆಯಾಗಿ ನೀಡಿದ್ದರು. ಆದರೆ, ಇದನ್ನು ಜಿತೇಂದ್ರ ನಿರಾಕರಿಸುತ್ತಿದ್ದಂತೆಯೇ ಮದುವೆಗೆ ಬಂದವರ ಕಣ್ಣಾಲಿಗಳು ತುಂಬಿದ್ದವು. ಎಲ್ಲರೂ ಆನಂದಬಾಷ್ಪ ಸುರಿಸಿ ವಧುವರರನ್ನು ಹರಸಿದರು.

Also Read : ಇದು ಚಿನ್ನದ ಖಜಾನೆ ಇರುವ ಕಲ್ಲಿನ ಗುಹೆ...!

ಚಂಚಲ್ ಶೆಖಾವತ್ ಜಿತೇಂದ್ರ ಬಾಳಸಂಗಾತಿಯಾಗಿ ಬಂದಿದ್ದಾರೆ. `ನನಗೆ ಅಳಿಯ ಹಣ ನಿರಾಕರಿಸುವಾಗ ಆಘಾತವಾಗಿತ್ತು. ಇವರ ಮನೆಯವರು ಇನ್ನೂ ಹೆಚ್ಚಿನ ಹಣವನ್ನು ನಿರೀಕ್ಷಿಸುತ್ತಿದ್ದಾರಾ? ಅಥವಾ ಮದುವೆಗೆ ಮಾಡಿರುವ ವ್ಯವಸ್ಥೆಗಳ ಬಗ್ಗೆ ಇವರೆಲ್ಲಾ ಅಸಮಾಧಾನ ಹೊಂದಿದ್ದಾರಾ ಎಂದು ನಾನು ಚಿಂತಿತನಾಗಿದ್ದೆ. ಆದರೆ, ಬಳಿಕ ಗೊತ್ತಾಯ್ತು ವರನ ಕುಟುಂಬಸ್ಥರು ವರದಕ್ಷಿಣೆ ಪದ್ಧತಿಯನ್ನೇ ವಿರೋಧಿಸುತ್ತಿರುವ ಸತ್ಯ' ಎಂದು ವಧು ಚಂಚಲ್ ಶೆಖಾವತ್ ತಂದೆ ಗೋವಿಂದ ಸಿಂಗ್ ಶೆಖಾವತ್ ಖುಷಿ ವ್ಯಕ್ತಪಡಿಸಿದ್ದಾರೆ.

Also Read : ಈ ಕೋಟೆಯೊಳಗೆ ರಾತ್ರಿ ಹೋದವರು ಯಾರೂ ವಾಪಸ್ ಬಂದಿಲ್ಲವಂತೆ...!

`ನನ್ನ ಪತ್ನಿ ತಾನು ಎಲ್‌ಎಲ್‌ಬಿ ಮತ್ತು ಎಲ್‌ಎಲ್‌ಎಂ ವ್ಯಾಸಂಗ ಮಾಡಲು ಬಯಸಿದ್ದಳು. ಪಿಎಚ್‌ಡಿ ಮಾಡಬೇಕು ಎಂದೂ ಹೇಳಿದ್ದಳು. ಆಕೆ ಹೀಗೆ ಹೇಳಿದ ದಿನವೇ ನನಗೆ ಖುಷಿಯಾಗಿತ್ತು. ಇವಳು ನನಗೆ ಮತ್ತು ನನ್ನ ಕುಟುಂಬಕ್ಕೆ ಹೊಂದಿಕೊಳ್ಳುವಂತಹ ಹುಡುಗಿ ಎಂಬುದು ನನಗೆ ಅಂದೇ ಖಾತ್ರಿಯಾಗಿತ್ತು. ಆಗಲೇ ನಾನು ಮತ್ತು ನನ್ನ ಕುಟುಂಬಸ್ಥರು ವರದಕ್ಷಿಣೆ ಪಡೆಯಬಾರದು ಎಂದು ನಿರ್ಧಾರ ಮಾಡಿದ್ದೆವು. ಇದನ್ನು ಮದುವೆ ದಿನವೇ ವಧುವಿನ ಕುಟುಂಬಸ್ಥರಿಗೆ ಹೇಳಬೇಕೆಂದು ನಾವೆಲ್ಲಾ ನಿರ್ಧರಿಸಿದ್ದೆವು' ಎಂದು ಹೇಳಿದ್ದಾರೆ ಛತ್ತೀಸ್‌ಗಡದಲ್ಲಿ ಕೆಲಸ ಮಾಡುತ್ತಿರುವ ಬಿಎಸ್‌ಫ್‌ ಕಾನ್ಸ್‌ಸ್ಟೇಬಲ್ ಜಿತೇಂದ್ರ ಸಿಂಗ್.

ಸದ್ಯ ಜಿತೇಂದ್ರ ಅವರ ಈ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಎಲ್ಲರೂ ವರದಕ್ಷಿಣೆಯನ್ನು ನಿರಾಕರಿಸಿ ಸಮಾಜಕ್ಕೆ ಮಾದರಿಯಾಗಬೇಕೆಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ