ಆ್ಯಪ್ನಗರ

ನೀರಿನ ಕ್ಯಾನ್‌ನೊಳಗೆ ಕೈ ಹಾಕಿ ನೋವಾದಂತೆ ಕಂದನ ನಟನೆ! : ವ್ಹಾವ್... ಸೂಪರ್ ದೃಶ್ಯವಿದು

ಈ ದೃಶ್ಯ ಮನಸ್ಸಿಗೆ ಮುದ ನೀಡುತ್ತದೆ. ಖಂಡಿತಾ ಈ ಪುಟಾಣಿಯ ಆಟ, ನಿರ್ಮಲ ನಗುವಿಗೆ ಫಿದಾ ಆಗದೇ ಇರುವವರು ಯಾರೂ ಇಲ್ಲ.

Vijaya Karnataka Web 16 Sep 2020, 2:19 pm
ಪುಟ್ಟ ಕಂದಮ್ಮಗಳು ಏನು ಮಾಡಿದರೂ ಅದು ನೋಡಲು ಚೆಂದವೇ... ನಿರ್ಮಲ ಮನಸ್ಸಿನ ಪುಟಾಣಿಗಳ ಆಟ ಯಾವತ್ತೂ ಮನ ತಣಿಸದೆ ಇರದು... ಮುದ್ದು ಮಕ್ಕಳ ಖುಷಿಯ ಸ್ವಚ್ಛಂದ ಲೋಕದಲ್ಲಿ ಎಲ್ಲವೂ ಸೊಗಸೇ... ಈಗಂತೂ ಸಾಮಾಜಿಕ ಮಾಧ್ಯಮಗಳಲ್ಲಿ ಮುದ್ದು ಮಕ್ಕಳ ಸಾಕಷ್ಟು ಅಪೂರ್ವ ವಿಡಿಯೋ ಕಾಣಸಿಗುತ್ತವೆ. ಈ ಎಲ್ಲಾ ವಿಡಿಯೋಗಳು ಎಲ್ಲರನ್ನೂ ಕ್ಷಣಾರ್ಧದಲ್ಲಿ ಸೆಳೆಯುವುದರಲ್ಲಿಯೂ ಯಶಸ್ಸಾಗುತ್ತವೆ. ಸದ್ಯ ಇಂತಹದ್ದೇ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ. ಈ ಸೊಬಗಿನ ದೃಶ್ಯಕ್ಕೆ ಫಿದಾ ಆಗದೇ ಇರುವವರು ಯಾರೂ ಇಲ್ಲ.
Vijaya Karnataka Web baby
| Screengrab from video | Courtesy : @backt0nature/Twitter


ಇದು ಪುಟ್ಟ ಕಂದಮ್ಮ ತಮ್ಮ ಮನೆಯವರನ್ನು ಪ್ರಾಂಕ್ ಮಾಡುವ ಅಪೂರ್ವ ದೃಶ್ಯ. ಮುದ್ದು ಕಂದಮ್ಮ ಮನೆಯಲ್ಲಿರುವ ನೀರಿನ ಕ್ಯಾನ್‌ನೊಳಗೆ ಕೈ ಹಾಕಿ ನೋವಾದಂತೆ ನಟಿಸುವ ದೃಶ್ಯವಿದು. ಈ ಕಂದನ ಮುಖಭಾವ ನೋಡಿ ಭಯದಲ್ಲಿ ಹೆತ್ತವರು ಹೋಗಿ ಕ್ಯಾನ್‌ನೊಳಗಿನಿಂದ ಕೈ ತೆಗೆದರೆ ಈ ಪುಟಾಣಿ ಖುಷಿಯಿಂದ ನಗುವ ದೃಶ್ಯವಂತೂ ಸೂಪರ್.

Also Read : ಆಟೋಮ್ಯಾಟಿಕ್ ಪಾನಿಪುರಿ ಯಂತ್ರ : ಹೊಸ ಐಡಿಯಾಕ್ಕೆ ಜನ ಫಿದಾ

ಬ್ಯಾಕ್ ಟು ನೇಚರ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ಅಪೂರ್ವ ವಿಡಿಯೋ ಅಪ್ಲೋಡ್ ಮಾಡಲಾಗಿದೆ. 16 ಸೆಕೆಂಡುಗಳ ವಿಡಿಯೋ ಇದು. ಪುಟಾಣಿ ನೀರಿನ ಕ್ಯಾನ್‌ನೊಳಗೆ ಕೈ ಹಾಕುವ ದೃಶ್ಯದ ಮೂಲಕ ಈ ವಿಡಿಯೋ ಶುರುವಾಗುತ್ತದೆ. ಹೀಗೆ ಕ್ಯಾನ್‌ನೊಳಗೆ ಕೈ ಹಾಕಿದ ಮಗು ನೋವಾದಂತೆ ನಟಿಸುತ್ತಾಳೆ. ಇದನ್ನು ನೋಡಿ ವ್ಯಕ್ತಿಯೊಬ್ಬರು ಹೋಗಿ `ಸಿಕ್ಕಿಕೊಂಡಿದ್ದ' ಮಗುವಿನ ಕೈಯನ್ನು ತೆಗೆಯುತ್ತಾರೆ. ಆಗ ಕಂದ ಜೋರಾಗಿ ನಗುತ್ತಾಳೆ.

Also Read : ದೇವರಂತಹ ಪುಟಾಣಿಗಳ ಖುಷಿಯ ಲೋಕ : ಇದು ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯ


Also Read : ಮಕ್ಕಳ ಮಾನವೀಯತೆ : ಬಾಸ್ಕೆಟ್‌ಬಾಲ್ ತಂಡದ ಹೃದಯವಂತಿಕೆಗೆ ನೆಟ್ಟಿಗರು ಫಿದಾ

ಸದ್ಯ ಈ ಸೊಬಗಿನ ದೃಶ್ಯಕ್ಕೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಸಾವಿರಾರು ಮಂದಿ ಈ ಕ್ಯೂಟ್ ವಿಡಿಯೋವನ್ನು ನೋಡಿ ಕಂದನ ನಟನೆಯನ್ನು `ಅದ್ಭುತ' ಎಂದು ಬಣ್ಣಿಸಿದ್ದಾರೆ. ನಿಜಕ್ಕೂ ಈ ಮುಗ್ಧ ಮಗುವಿನ ಆಟ ಮನಸ್ಸಿಗೆ ಖುಷಿ ನೀಡುತ್ತದೆ. ನೋಡಿದ ತಕ್ಷಣ ಮುಖದಲ್ಲೊಂದು ನಗುವರಳುತ್ತದೆ. ಬಹುಶಃ ನೀವು ಕೂಡಾ ಈ ವಿಡಿಯೋವನ್ನು ಮತ್ತೆ ಮತ್ತೆ ನೋಡಿ ಖುಷಿಪಟ್ಟಿರಬಹುದು...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ