ಆ್ಯಪ್ನಗರ

ಕೊರೊನಾ ಸೋಂಕಿತ ವೃದ್ಧೆಗೆ ಹಾಡು ಹೇಳಿ ಧೈರ್ಯ ತುಂಬಿದ ಡಾಕ್ಟರ್: ವಿಡಿಯೋ ವೈರಲ್

ಕೊರೊನಾ ಸೋಂಕಿತ ವೃದ್ಧೆಯೊಬ್ಬರಿಗೆ ಹಾಡು ಹೇಳಿ ಧೈರ್ಯ ತುಂಬಿದ ವೈದ್ಯರೊಬ್ಬರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಹೃದಯಸ್ಪರ್ಶಿ ವಿಡಿಯೋಗೆ ಎಲ್ಲರೂ ಫಿದಾ ಆಗಿದ್ದಾರೆ.

Vijaya Karnataka Web 11 Jul 2020, 1:59 pm
2020 ಬಲು ಸಂಕಷ್ಟದ ವರ್ಷ. ಈಗಾಗಲೇ ಅರ್ಧ ವರ್ಷ ಮುಗಿದಿದೆ. ಆದರೆ, ಶುರುವಾದ ಸಮಸ್ಯೆಯಂತೂ ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ. ರಕ್ಕಸ ಕೊರೊನಾ ವೈರಸ್ ಇಡೀ ಜಗತ್ತನ್ನೇ ದುರ್ಬಲಗೊಳಿಸಿ ತನ್ನ ಪ್ರಾಬಲ್ಯ ಸಾಧಿಸುತ್ತಿದೆ. ಹೆಚ್ಚಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಭೀತಿ ಮೂಡಿಸುತ್ತಿದೆ. ಹೀಗಾಗಿ, ಜನರೆಲ್ಲಾ ಈಗ ತಮ್ಮ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ಯಾವ ಕ್ಷಣದಲ್ಲಿ ಏನಾಗುತ್ತದೋ ಏನೋ ಎಂಬ ಭಯದಲ್ಲಿ ಜಗತ್ತಿನ ಜನರಿದ್ದಾರೆ.
Vijaya Karnataka Web doctor
| Screengrab from video | Courtesy : khalo atheer/Twitter


Also Read : ಆಕ್ಸಿಡೆಂಟ್‌ನಿಂದ ಸಿಕ್ಕಿಬಿದ್ದರು ಇಬ್ಬರು ಖತರ್ನಾಕ್ ಕಾರು ಕಳ್ಳರು! : ಈ ಕತೆಯೇ ರೋಚಕ!

ಆದರೆ, ಜನರೆಲ್ಲಾ ಭಯದಲ್ಲಿ ಇರುವ ಸಂದರ್ಭದಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಕೊರೊನಾ ವಾರಿಯರ್ಸ್ ಎಲ್ಲರ ಪಾಲಿನ ಆಶಾಕಿರಣವಾಗಿದ್ದಾರೆ. ಈ ಕೊರೊನಾ ವಾರಿಯರ್ಸ್ ಮುಂಚೂಣಿಯಲ್ಲಿ ನಿಂತು ಈ ರಕ್ಕಸ ವೈರಾಣು ವಿರುದ್ಧ ಹೋರಾಟ ಮಾಡಿ ಜನರ ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವದಾದ್ಯಂತ ವೈದ್ಯರು, ನರ್ಸ್‌ಗಳು ವಿಶ್ರಾಂತಿ ಇಲ್ಲದೆ ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿದ್ದಾರೆ. ದಿನವಿಡೀ ಸೋಂಕಿತ ಚಿಕಿತ್ಸೆಯಲ್ಲಿ ತೊಡಗಿರುವ ಆರೋಗ್ಯ ಕಾರ್ಯಕರ್ತರು ಎಲ್ಲರ ಪಾಲಿಗೆ ದೇವರಾಗಿದ್ದಾರೆ. ತಮ್ಮ ವೈಯಕ್ತಿಕ ಜೀವನವನ್ನೆಲ್ಲಾ ಬದಿಗೊತ್ತಿ ಕರ್ತವ್ಯವೇ ದೇವರು ಎಂದು ಸೇವೆ ಸಲ್ಲಿಸುತ್ತಿರುವ ಜಗತ್ತಿನ ವೈದ್ಯರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

Also Read : ಒಂದೇ ಮಂಟಪದಲ್ಲಿ ಇಬ್ಬರನ್ನು ವರಿಸಿದ ಯುವಕ...! : ಇದು ವಿಚಿತ್ರ ಪ್ರೇಮಕತೆ...!

ಹೀಗೆ ಬಿಡುವಿಲ್ಲದೆ ಸೇವೆ ಸಲ್ಲಿಸುತ್ತಿದ್ದರೂ ವೈದ್ಯರು ಕೊರೊನಾ ಸೋಂಕಿತ ಮನಸ್ಸಿನಲ್ಲಿ ನೆಮ್ಮದಿ ತರುತ್ತಿದ್ದಾರೆ. ಸೋಂಕಿತರು ಧೃತಿಗೆಡದಂತೆ ಸದಾ ಪ್ರಯತ್ನ ಪಡುತ್ತಿರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ವೈದ್ಯರ ಅನೇಕ ಹೃದಯಸ್ಪರ್ಶಿ ವಿಡಿಯೋಗಳು ಈಗಾಗಲೇ ವೈರಲ್ ಆಗಿದ್ದವು. ಈಗ ಇಂತಹದ್ದೇ ಇನ್ನೊಂದು ವಿಡಿಯೋ ಜನರ ಗಮನ ಸೆಳೆದಿದೆ. ವೈದ್ಯರೊಬ್ಬರು ಕೊರೊನಾ ಸೋಂಕಿತ ವೃದ್ಧೆಯೊಬ್ಬರ ಮೊಗದಲ್ಲಿ ಸಂತಸ ತುಂಬಲು ಹಾಡು ಹೇಳಿರುವ ವಿಡಿಯೋ ಇದು. ಸದ್ಯ ಈ ವಿಡಿಯೋಗೆ ಎಲ್ಲರೂ ಮನಸೋತಿದ್ದಾರೆ.

Also Read : ಬಾತುಕೋಳಿ ಜತೆ ಮರಿಯಾನೆಯ ಫೈಟ್ : ಈ ವಿಡಿಯೋ ನೋಡಿದರೆ ನಕ್ಕು ಸುಸ್ತಾಗ್ತೀರ!

ಇದು ಇರಾಕ್‌ನ ಆಸ್ಪತ್ರೆಯೊಂದರಲ್ಲಿ ಸೆರೆಯಾದ ದೃಶ್ಯ. ಉಸಿರುಗಟ್ಟಿಸುವ ರಕ್ಷಣಾ ದಿರಿಸಿನಲ್ಲೂ ಈ ಡಾಕ್ಟರ್ ಸೋಂಕಿತೆಯ ಮೊಗದಲ್ಲಿ ನಗುವರಳಿಸಲು ಮಾಡುತ್ತಿರುವ ಈ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅರೇಬಿಕ್ ಭಾಷೆಯಲ್ಲಿರುವ ಹಾಡನ್ನು ಸುಶ್ರಾವ್ಯ ಧ್ವನಿಯಲ್ಲಿ ಹಾಡಿ ಈ ಡಾಕ್ಟರ್ ಗಮನ ಸೆಳೆಯುತ್ತಾರೆ. ವೈದ್ಯರ ಈ ಹಾಡಿಗೆ ಕರಗಿದ ವೃದ್ಧೆ ಆನಂದಭಾಷ್ಪ ಸುರಿಸುತ್ತಾರೆ. ಈ ವೇಳೆ, ಡಾಕ್ಟರ್ ಆ ವೃದ್ಧೆಯ ಹಣೆಗೆ ಪ್ರೀತಿಯಿಂದ ಮುತ್ತಿಕ್ಕಿ ಅಲ್ಲಿಂದ ಹೊರಡುತ್ತಾರೆ. ಈ ಬಾಂಧವ್ಯ ನಿಜಕ್ಕೂ ಹೃದಯ ಕರಗಿಸುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ