ಆ್ಯಪ್ನಗರ

ಮೃತ ಮರಿಗಳ ಗುಂಡಿಗೆ ತಾನೇ ಮಣ್ಣು ಹಾಕಿದ ಶ್ವಾನ...! : ಇದು ಕಣ್ಣೀರು ತರಿಸುವ ದೃಶ್ಯ

ಈ ತಾಯಿಯ ದುಃಖಕ್ಕೆ ಆ ಭೂಮಿ ತೂಕ. ತನ್ನ ಕರುಳಬಳ್ಳಿಯನ್ನು ಕಳೆದುಕೊಂಡ ಈ ಶ್ವಾನದ ನೋವನ್ನು ನೋಡಿದರೆ ನಿಜಕ್ಕೂ ಕಣ್ಣೀರು ಬರುತ್ತದೆ... ಸದ್ಯ ವೈರಲ್ ಆಗುತ್ತಿರುವ ವಿಡಿಯೋದ ಕೊನೆಯ ದೃಶ್ಯಗಳನ್ನು ನೋಡಿದಾಗ ನಿಜಕ್ಕೂ ಹೃದಯ ಭಾರವಾಗುತ್ತದೆ...

Vijaya Karnataka Web 14 Jul 2020, 1:09 pm
ಅವಳು ತಾಯ್ತನದ ಖುಷಿಯಲ್ಲಿದ್ದಳು... ಕಂದಮ್ಮಗಳ ಲಾಲನೆ ಪಾಲನೆಯಲ್ಲಿ ಖುಷಿ ಅನುಭವಿಸುತ್ತಿದ್ದಳು... ಆದರೆ, ಆ ಖುಷಿ ಅಲ್ಪಾಯುಷಿಯಾಗಿತ್ತು... ಯಾಕೆಂದರೆ, ಕಂದಮ್ಮಗಳು ಸಾವನ್ನಪ್ಪಿದ್ದವು... ಆದರೆ, ಆ ಬಳಿಕದ ಅವಳ ಸ್ಥಿತಿ ನೋಡಿದರೆ ಖಂಡಿತಾ ಕಣ್ಣೀರು ಬರುತ್ತದೆ. ಆ ಮೂಕರೋದನೆಯನ್ನು ಕಂಡಾಗ ಮಾತೇ ಬರದು..
Vijaya Karnataka Web Image by patrycja1670 from Pixabay
| Representative image | Image by patrycja1670 from Pixabay


ಅಮ್ಮ ಎಂದರೆ ಅಮ್ಮ... ಅಮ್ಮನಿಗೆ ಸರಿಸಾಟಿಯೇ ಇಲ್ಲ. ಎಲ್ಲರ ಪಾಲಿಗೂ ಅಮ್ಮ ದೇವತೆ. ಅದು ಮನುಷ್ಯರಾಗಿರಲಿ, ಪ್ರಾಣಿಗಳಾಗಿರಲಿ. ಅಮ್ಮನ ಸ್ಥಾನ, ಮಹತ್ವ ಒಂದೇ. ಅದು ಬೆಲೆ ಕಟ್ಟಲು ಸಾಧ್ಯವೇ ಇಲ್ಲದಂತಹ ಸ್ಥಾನ, ಮಮತೆಯ ಪಟ್ಟ. ಮಕ್ಕಳೇ ಅಮ್ಮನ ಪಾಲಿನ ನಿಧಿ. ಅಮ್ಮನ ಮಮತೆ ಎಂತಹದ್ದು ಎಂಬುದಕ್ಕೆ ಈ ಮೂಕ ರೋದನೆ ಸಾಕ್ಷಿ... ಈ ಶ್ವಾನದ ದುಃಖ, ಸ್ಥಿತಿ ನೋಡಿದರೆ ಖಂಡಿತಾ ಕಣ್ಣೀರು ಬರುತ್ತದೆ...

Also Read : ಹಳದಿ ಕಪ್ಪೆಗಳ ರಹಸ್ಯ ನಿಮಗೆ ತಿಳಿದಿದೆಯೇ...? : ವಿಡಿಯೋ ಹಿಂದಿದೆ ಕಹಾನಿ

Also Read : ಮಳೆಯಲ್ಲಿ ಅದ್ಭುತವಾಗಿ ಬ್ಯಾಲೆ ಡಾನ್ಸ್‌ ಮಾಡಿದ್ದ ಬಾಲಕನಿಗೆ ಒಲಿದು ಬಂತು ಅದೃಷ್ಟ

ಆ ಶ್ವಾನದ ಮರಿಗಳು ಸಾವನ್ನಪ್ಪಿದ್ದವು. ಇದು ಗೊತ್ತಾಗಿ ಒಂದಷ್ಟು ಹೃದಯವಂತರು ಈ ಮರಿಗಳನ್ನು ಸರಿಯಾದ ರೀತಿಯಲ್ಲಿ ಹೂಳುವುದಕ್ಕೆ ಕೊಂಡೊಯ್ದಿದ್ದರು. ಬಹುಶಃ ಇದು ತಾಯಿ ಶ್ವಾನಕ್ಕೂ ಗೊತ್ತಾಗಿರಬೇಕು. ಇದಕ್ಕಾಗಿಯೇ ಇವಳು ಯಾವುದೇ ರೀತಿಯ ಪ್ರತಿರೋಧವೊಡ್ಡಿರಲಿಲ್ಲ. ಬದಲಾಗಿ, ತಾನೂ ತನ್ನ ಕಂದಮ್ಮಗಳ ಕಳೇಬರವನ್ನು ಮಣ್ಣು ಮಾಡುವುದಕ್ಕೆ ಸಹಾಯ ಮಾಡಿದ್ದಳು. ಗುಂಡಿ ಇದ್ದಲ್ಲಿಗೆ ಹೋಗಿ ತಾನೇ ಮಣ್ಣು ಹಾಕಿದ್ದಳು...! ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಹ ದೃಶ್ಯವಿದು... ಈ ತಾಯಿ ಮರಿಗಳ ಕಳೇಬರವಿದ್ದ ಗುಂಡಿಗೆ ತನ್ನ ಕಾಲುಗಳಿಂದ ಮಣ್ಣು ಹಾಕಿಲ್ಲ, ಬದಲಾಗಿ ತನ್ನ ಮುಖದಲ್ಲೇ ಮಣ್ಣುಗಳನ್ನು ಎಳೆದು ಎಳೆದು ಹಾಕುತ್ತಿದ್ದಳು... ಎಂತಹ ಪ್ರೀತಿ ಅಲ್ವಾ...? ಎಂತಹ ಹೃದಯವಂತಿಕೆಯಲ್ವಾ...? ಈ ದೃಶ್ಯ ನೋಡಿದರೆ ಯಾರಾದರೂ ಅಳದೇ ಇರುವರೇ...

Also Read : ಸೇಬು, ಲಿಂಬೆ, ಬದನೆ ತರನೇ ಕಾಣುತ್ತದೆ. ಆದರೆ, ಇವುಗಳು ಹಣ್ಣು, ತರಕಾರಿಯಲ್ಲ!

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಧಾ ರಾಮನ್ ಅವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಎಲ್ಲರ ಹೃದಯವನ್ನೂ ಭಾರವಾಗಿಸಿದೆ. ಈ ವಿಡಿಯೋ ಎಲ್ಲಿನದ್ದು, ಯಾವಾಗ ಸೆರೆಯಾಗಿದ್ದು ಎಂದು ಗೊತ್ತಿಲ್ಲ. ಆದರೆ, ಈ ತಾಯಿ ಮಮತೆ ಮಾತ್ರ ನಮ್ಮನ್ನು ಭಾವುಕರನ್ನಾಗಿಸುವುದಂತೂ ಸತ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ