ಆ್ಯಪ್ನಗರ

ಆಸ್ಟ್ರೇಲಿಯಾದಿಂದ ನ್ಯೂಜಿಲೆಂಡಿಗೆ ವಿಮಾನದಲ್ಲಿ ಪ್ರಯಾಣಿಸಿದ ಹೆಬ್ಬಾವು...!

ಹೆಬ್ಬಾವೊಂದು ಬಹುದೂರ ವಿಮಾನದಲ್ಲೇ ಪ್ರಯಾಣಿಸಿದೆ. ರನ್‌ ವೇನಲ್ಲಿ ಹಾವಿದ್ದ ವಿಮಾನ ಲ್ಯಾಂಡ್ ಆದಾಗ ಇನ್ನೊಂದು ವಿಮಾನದ ಪೈಲಟ್ ಗಮನಿಸಿದ್ದರಿಂದ ಈ ಹಾವಿನ ಪ್ರಯಾಣದ ವಿಷಯ ಬೆಳಕಿಗೆ ಬಂದಿದೆ. ಆದರೆ, ಈ ಹೆಬ್ಬಾವಿನ ಕತೆ ದುರಂತದಲ್ಲೇ ಮುಗಿದಿದೆ.

Vijaya Karnataka Web 26 Dec 2019, 8:09 am
ಕ್ವೀನ್‌ಸ್ಟೌನ್, ನ್ಯೂಜಿಲೆಂಡ್ : ಬೃಹತ್ ಹೆಬ್ಬಾವೊಂದು ಆಸ್ಟ್ರೇಲಿಯಾದಿಂದ ನ್ಯೂಜಿಲೆಂಡಿಗೆ ವಿಮಾನದಲ್ಲೇ ಪ್ರಯಾಣಿಸಿದೆ. ಆದರೆ, ಪ್ರಯಾಣಿಕರ ಅದೃಷ್ಟ ಚೆನ್ನಾಗಿತ್ತು ಈ ಹೆಬ್ಬಾವು ವಿಮಾನದ ಒಳಗೆ ಬಂದಿರಲಿಲ್ಲ. ವಿಮಾನದ ಅಂಡರ್‌ಕ್ಯಾರೇಜ್‌ನಲ್ಲಿ ಕುಳಿತು ಇದು ಹಾಯಾಗಿ ಬಹುದೂರ ಪ್ರಯಾಣ ಮಾಡಿತ್ತು. ಆದರೆ, ಎಷ್ಟೇ ದೂರ ವಿಮಾನದಲ್ಲಿ ಪ್ರಯಾಣಿಸಿದ್ದರೂ ಈ ಹೆಬ್ಬಾವಿನ ಕತೆ ದುರಂತದಲ್ಲೇ ಮುಗಿದಿತ್ತು.
Vijaya Karnataka Web phython
ಸಾಂದರ್ಭಿಕ ಚಿತ್ರ | Image by sipa from Pixabay


Also Read : ಕಣ್ಮರೆಯಾಗುತ್ತಿದ್ದವು ಠಾಣೆಯಲ್ಲಿಟ್ಟಿದ್ದ ಗೊಂಬೆಗಳು...! : ಕಳ್ಳಿ ಮಾತ್ರ ಪೊಲೀಸ್ ಇಲಾಖೆಯಲ್ಲೇ ಇದ್ದಳು...!

ಆಸ್ಟ್ರೇಲಿಯಾದಿಂದ ಬಂದಿದ್ದ ಈ ಹೆಬ್ಬಾವು ಕ್ವೀನ್‌ಸ್ಟೌನ್‌ನ ಏರ್‌ಪೋರ್ಟಿನಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ರನ್‌ ವೇನಲ್ಲಿ ಬಿದ್ದಿತ್ತು. ಇದನ್ನು ಇನ್ನೊಂದು ವಿಮಾನದ ಪೈಲಟ್ ಗಮನಿಸಿ ಈ ವಿಮಾನದವರ ಗಮನಕ್ಕೆ ತಂದಿದ್ದರು. ರನ್ ಮೇಲೆ ಬಿದ್ದಾಗಲೇ ಹೆಬ್ಬಾವಿಗೆ ತುಂಬಾ ಗಾಯಗಳಾಗಿತ್ತು. ಬಹುತೇಕ ಈ ಹಾವು ಉಳಿಯುವುದೇ ಕಷ್ಟವಾಗಿತ್ತು.

ಬಳಿಕ ಈ ವಿಷಯ ಅಧಿಕಾರಿಗಳ ಕಿವಿಗೂ ಬಿದ್ದಿತ್ತು. ಹೀಗಾಗಿ ನ್ಯೂಜಿಲೆಂಡ್ ಏರ್‌ಪೋರ್ಟಿನ ಬಯೋಸೆಕ್ಯೂರಿಟಿ ಅಧಿಕಾರಿಗಳು ಹೆಬ್ಬಾವಿನ ವಿಷಯವನ್ನು ಸಂಬಂಧಪಟ್ಟವರಿಗೆ ತಿಳಿಸಿದ್ದು, ಅಧಿಕಾರಿಗಳು ಬಂದು ಹೆಬ್ಬಾವನ್ನು ಹಿಡಿದಿದ್ದರು. ಅಧಿಕಾರಿಗಳು ಹೆಬ್ಬಾವನ್ನು ಹಿಡಿದ ವೇಳೆ ಅದಿನ್ನೂ ಬದುಕಿತ್ತು. ಆದರೆ, ನಂತರ ಈ ಹಾವು ಸಾವನ್ನಪ್ಪಿತ್ತು.

Also Read : `ನಾಳೆಯಿಂದ ನಾನು ಕೆಲಸಕ್ಕೆ ಬರುವುದಿಲ್ಲ ' : ನೇರಪ್ರಸಾರದಲ್ಲೇ ಹೇಳಿದ ಟಿವಿ ಪತ್ರಕರ್ತೆ...! : ಕಾರಣ ಸಖತ್ ಇಂಟ್ರೆಸ್ಟಿಂಗ್

ಹಾಗಂತ, ವಿಮಾನದಲ್ಲಿ ಹಾವು ಪ್ರಯಾಣಿಸುವುದು ಇದೇ ಮೊದಲೇನು ಅಲ್ಲ. ಫೆಬ್ರವರಿಯಲ್ಲಿ ಹೆಬ್ಬಾವೊಂದು ಕ್ವೀನ್ಸ್‌ಲ್ಯಾಂಡ್‌ನಿಂದ ಗ್ಲ್ಯಾಸ್ಗೋಗೆ 14,900 ಕಿಲೋಮೀಟರ್‌ಗಿಂತ ಹೆಚ್ಚು ದೂರ ಪ್ರಯಾಣಿಸಿತ್ತು. ಪ್ರಯಾಣಿಕರೊಬ್ಬರು ತನ್ನ ಇತರ ಬ್ಯಾಗಿನೊಂದಿಗೆ ಇಟ್ಟಿದ್ದ ಶೂನೊಳಗೆ ಕುಳಿತು ಈ ಸಣ್ಣ ಹೆಬ್ಬಾವು ಸಂಚರಿಸಿತ್ತು. ಈ ಹೆಬ್ಬಾವನ್ನು ಕಂಡ ಆ ಮಹಿಳೆ ಅಂದು ದಿಗಿಲುಗೊಂಡಿದ್ದರು. ಆರಂಭದಲ್ಲಿ ತನ್ನ ಮಗಳು ಮತ್ತು ಅಳಿಯ ಆಟಿಕೆಯ ಹೆಬ್ಬಾವನ್ನು ತನ್ನ ಶೂನೊಳಗೆ ಇಟ್ಟು ತಮಾಷೆ ಮಾಡುತ್ತಿದ್ದಾರೆ ಎಂದು ಇವರು ಅನುಮಾನಗೊಂಡಿದ್ದರು. ಆದರೆ, ಶೂ ಒಳಗೆ ಇದ್ದದ್ದು ಅಸಲಿ ಹಾವು ಎಂದು ಗೊತ್ತಾದ ತಕ್ಷಣ ಇವರ ಎದೆಯೊಡೆದಂತಾಗಿತ್ತು. ಬಳಿಕ ಸ್ಕಾಟ್‌ಲ್ಯಾಂಡಿನಲ್ಲಿ ಈ ಹಾವನ್ನು ರಕ್ಷಿಸಲಾಗಿತ್ತು.

Also Read : ಅಯ್ಯೋ... ಬಾಲಕನತ್ತ ಓಡಿ ಬರುವ ಈ ಹುಲಿಯನ್ನು ನೋಡುವಾಗಲೇ ಭಯವಾಗುತ್ತದೆ...!

ಇದಕ್ಕೂ ಮೊದಲು ಈ ವರ್ಷದ ಆರಂಭದಲ್ಲಿ ಜಕಾರ್ತಾಗೆ ಪ್ರಯಾಣ ಬೆಳೆಸಿದ್ದ ಲಯನ್ ಏರ್‌ ವಿಮಾನದಲ್ಲಿ ವಿಷಕಾರಿ ಚೇಳು ಕಾಣಿಸಿಕೊಂಡು ಆತಂಕ ಮೂಡಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ