ಆ್ಯಪ್ನಗರ

ಅಯ್ಯೋ ಪಾಪ... ಹೀಗ್ ಮಾಡಿದ್ದು ಸರೀನಾ...? : ನೆಟ್ಟಿಗರಲ್ಲೀಗ ಬರೀ ಇದೇ ಚರ್ಚೆ!

ಮುಖಕ್ಕೆ ಮಾಸ್ಕ್‌ ತೊಟ್ಟು ಸೈಕಲ್ ಪೆಡಲ್ ತುಳಿಯುತ್ತಿರುವ ಚಿಂಪಾಂಜಿಯ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಮೃಗಾಲಯದಲ್ಲಿ ಔಷಧಿ ಸಿಂಪಡಣೆಗೆ ಚಿಂಪಾಂಜಿಯನ್ನು ಹೀಗೆ ಬಳಸಲಾಗಿದ್ದು, ಈಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

Vijaya Karnataka Web 17 Apr 2020, 10:15 am
ಮುಖಕ್ಕೆ ಮಾಸ್ಕ್‌, ಬಟ್ಟೆ ತೊಟ್ಟು ಆ ಚಿಂಪಾಂಜಿ ಸೈಕಲ್ ತುಳಿಯುತ್ತಿತ್ತು... ಹಿಂಬದಿಯಿಂದ ವ್ಯಕ್ತಿಯೊಬ್ಬ ಕೊರೊನಾ ವೈರಸ್ ಸೋಂಕು ನಿವಾರಕವನ್ನು ಸಿಂಪಡಣೆ ಮಾಡುತ್ತಾ ಸಾಗುತ್ತಿದ್ದ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಆಗಿಯೇ ವೈರಲ್ ಆಗುತ್ತಿದೆ.
Vijaya Karnataka Web Image by Marcus Bouvin from Pixabay
| Representative image | Image by Marcus Bouvin from Pixabay


Also Read : ಪ್ರಶ್ನೆಯಾಗಿಯೇ ಉಳಿದಳು ವ್ಯಾಲೆಂಟೈನ್ ಡೇಯಂದೇ ಶವವಾಗಿ ಸಿಕ್ಕಿದ ಹುಡುಗಿ!

ಥೈಲ್ಯಾಂಡಿನ ಮೃಗಾಲಯವೊಂದರಲ್ಲಿ ಸೆರೆಯಾದ ದೃಶ್ಯವಿದು. ಬ್ಯಾಂಕಾಕ್‌ನ ಹೊರವಲಯದಲ್ಲಿ ಸಮುತ್‌ಪ್ರಕರ್ನ್‌ ಮೊಸಳೆ ಪಾರ್ಕ್ ಮತ್ತು ಮೃಗಾಲಯವಿದೆ. ಇಲ್ಲಿ ಕೊರೊನಾ ವೈರಸ್‌ ಹರಡದಂತೆ ಔಷಧಿಯನ್ನು ಸಿಂಪಡಿಸಲಾಗಿದೆ. ಈ ಔಷಧಿ ಸಿಂಪಡಣೆಗೆ ಚಿಂಪಾಂಜಿಯನ್ನೂ ಬಳಸಲಾಗಿತ್ತು. ಹೀಗಾಗಿ, ಮುಖಕ್ಕೆ ಮಾಸ್ಕ್‌ ತೊಟ್ಟ ಚಿಂಪಾಂಚಿ ಸೈಕಲ್ ತುಳಿಯುತ್ತಿರುವ ಈ ವಿಡಿಯೋ ಈಗ ನೆಟ್ಟಿಗರಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

Also Read : ತನ್ನ ವಾಹನ ಅಪಘಾತ ಮಾಡಿ ಇನ್ನೊಂದು ಕಾರು ಕದ್ದು ಪರಾರಿ : ಇಲ್ಲೂ ಆಕೆಗೆ ಕಾಡಿತು ವಿಧಿ!

ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಕಂಡ ಬಹುತೇಕ ನೆಟ್ಟಿಗರು ಚಿಂಪಾಂಜಿಯನ್ನು ಈ ರೀತಿ ಬಳಸಿಕೊಂಡಿದ್ದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಲ್ಲರೂ ಈ ವಿಡಿಯೋ ಕಂಡು ಮರುಗಿದ್ದಾರೆ. ಅಲ್ಲದೆ, ಪ್ರಾಣಿಗಳ ರಕ್ಷಣೆಯ ವಿಚಾರದಲ್ಲಿ ಹೋರಾಟ ನಡೆಸುವ ಪೆಟಾ ಕೂಡಾ ಇದೊಂದು `ಹೃದಯ ವಿದ್ರಾವಕ' ದೃಶ್ಯ ಎಂದು ಹೇಳಿಕೊಂಡಿದೆ. ಈ ಬಗ್ಗೆ ಮಾತನಾಡಿರುವ ವಕ್ತಾರ ನಿರಾಲಿ ಷಾ, ಸಮುತ್ಪ್ರಕರ್ನ್ ಕ್ರೊಕೊಡೈಲ್ ಫಾರ್ಮ್ ಮತ್ತು ಮೃಗಾಲಯದಂತಹ ಸ್ಥಳಗಳು ಈಗ ಪ್ರಾಣಿಗಳಿಗೆ ನರಕಯಾತನೆಗಳಾಗಿವೆ. ಚಿಂಪಾಂಜಿಯಂತಹ ಪ್ರಾಣಿಗಳು ಇಲ್ಲಿ ದಿನಾ ಸೆರೆಯಲ್ಲಿ ಶೋಚನೀಯ ಜೀವನವನ್ನು ಅನುಭವಿಸುತ್ತಿವೆ ಎಂದು ದೂರಿದ್ದಾರೆ.

Also Read : ಹೊಟ್ಟೆಗಿಲ್ಲದ ಕೋಪ...! ಈ ಕರಡಿ ಮಾಡಿದ್ದೇನು ಗೊತ್ತಾ...? ಅಯ್ಯೋ ದೇವರೇ...!

ಆದರೆ, ಮೃಗಾಲಯವನ್ನು ಸ್ವಚ್ಛಗೊಳಿಸುವ ಸಲುವಾಗಿ ಚಿಂಪಾಂಜಿಯನ್ನು ಬಳಸಿಕೊಳ್ಳಲಾಗಿದೆ ಎಂಬುದು ಈ ಮೃಗಾಲಯದ ನಿರ್ದೇಶಕ ಉಥೆನ್ ಯಾಂಗ್‌ಪ್ರಫಾಕಾರ್ನ್ ಸ್ಪಷ್ಟನೆ. ಸರ್ಕಾರದ ಆದೇಶದಂತೆ ಈಗ ಮೃಗಾಲಯವನ್ನು ಮುಚ್ಚಲಾಗಿದೆ. ಹೀಗಾಗಿ ವಾರಕ್ಕೆ ಎರಡ್ಮೂರು ಸಲ ಈ ಮೃಗಾಲಯವನ್ನು ಸ್ವಚ್ಛ ಮಾಡಲಾಗುತ್ತದೆ. ಈ ಚಿಂಪಾಂಜಿಗೂ ತರಬೇತಿ ನೀಡಲಾಗಿದೆ. ಅಲ್ಲದೆ, ಚಿಂಪಾಂಜಿಗೂ ಚಟುವಟಿಕೆ ನೀಡಿ ಅವುಗಳ ಮನಸ್ಸಿಗೂ ಉಲ್ಲಾಸ ನೀಡುವ ಸಲುವಾಗಿ ಹೊರಗೆ ಕರೆದುಕೊಂಡು ಬಂದು ಈ ರೀತಿ ಬಳಸಿಕೊಳ್ಳಲಾಗಿದೆ ಎಂಬುದು ಇವರ ಮಾತು.

ಸದ್ಯ ಪರ ವಿರೋಧದ ಚರ್ಚೆಯ ನಡುವೆ ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ