ಆ್ಯಪ್ನಗರ

ತನ್ನ ಬರ್ತ್‌ಡೇಗೆ ಭರ್ಜರಿ ಶಾಪಿಂಗ್! ಆದರೆ, ವಸ್ತುಗಳನ್ನು ಖರೀದಿಸಿದ್ದು ಮನುಷ್ಯರಲ್ಲ!

ಬರ್ತ್‌ಡೇ ಶಾಪಿಂಗ್‌ನ ಭರ್ಜರಿ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಆದರೆ, ಇಲ್ಲಿ ಖುಷಿ ಖುಷಿಯಾಗಿ ಶಾಪಿಂಗ್ ಮಾಡಿದ್ದು ಮನುಷ್ಯರಲ್ಲ...!

Vijaya Karnataka Web 24 Mar 2020, 5:05 pm
ಈಗ ಏನಿದ್ದರೂ ಬರೀ ಕೊರೊನಾ ಕೊರೊನಾ ಕೊರೊನಾ... ಎಲ್ಲರಿಗೂ ಈ ರಕ್ಕಸ ವೈರಾಣುವಿನದ್ದೇ ಟೆನ್ಷನ್ ಆಗಿ ಹೋಗಿದೆ. ಈಗ ಯಾವ ಬಳಿ ಮಾತನಾಡಿದರೂ ಕೊರೊನಾ ಕುರಿತ ವಿಷಯ ಚರ್ಚೆಗೆ ಬಂದೇ ಬರುತ್ತದೆ. ಆ ಪರಿ ಈ ಡೆಡ್ಲಿ ವೈರಸ್ ಜನರ ನೆಮ್ಮದಿ ನುಂಗಿದೆ. ಇದೇ ವೈರಾಣುವಿನ ಕಾಟದಿಂದ ಇಡೀ ರಾಷ್ಟ್ರವೇ ಸ್ತಬ್ಧವಾಗುತ್ತಿದೆ. ಬಹುತೇಕ ರಾಜ್ಯಗಳಲ್ಲಿ ಕರ್ಫ್ಯೂ ಘೋಷಣೆಯಾಗಿದ್ದು, ಎಲ್ಲರೂ ಮನೆಯೊಳಗೇ ಉಳಿಯುವಂತಾಗಿದೆ.
Vijaya Karnataka Web dog
| Screengrab from video | Courtesy : Twitter/ Rex Chapman


Also Read : ಜೀಬ್ರಾ ರೀತಿಯ ಡ್ರೆಸ್ ತೊಟ್ಟು ಬರುವ ವ್ಯಕ್ತಿ : ಇದರ ಹಿಂದಿದೆ ಕರುಣಾಜನಕ ಕತೆ...!

ಮನೆಯಲ್ಲಿ ಕುಳಿತುಕೊಳ್ಳುವುದು ಕೂಡಾ ಒಂದು ರೀತಿಯಲ್ಲಿ ಬೋರ್. ಆದರೆ, ದೇಶ, ರಾಜ್ಯ ಮತ್ತು ನಮ್ಮವರ ಒಳಿತಿಗಾಗಿ ಅನಿವಾರ್ಯವಾಗಿ ನಾವು ಈ ಕಷ್ಟವನ್ನು ಅನುಭವಿಸಲೇಬೇಕಾಗಿದೆ. ಹೀಗೆ ಮನೆಯೊಳಗೇ ಇದ್ದು ಟೆನ್ಷನ್‌ನಲ್ಲಿ ಕಾಲ ಕಳೆಯುತ್ತಿರುವವರ ಮನಸ್ಸಿಗೆ ಮುದ ನೀಡುವ ವಿಡಿಯೋವೊಂದು ಇಲ್ಲಿದೆ. ಈ ವಿಡಿಯೋ ಒಂದು ಕ್ಷಣ ಎಲ್ಲಾ ಟೆನ್ಷನ್, ನೋವನ್ನು ಮರೆಸಿ ಬಿಡುತ್ತದೆ. ಅಂತಹ ಶಕ್ತಿ ಈ ಮುದ್ದಾದ ಶ್ವಾನದ ವಿಡಿಯೋಗಿದೆ.

Also Read : ಈ ಪ್ರಖ್ಯಾತ ಐಷಾರಾಮಿ ಹಡಗಿನಲ್ಲಿತ್ತಂತೆ ಪ್ರೇತಾತ್ಮಗಳ ಕಾಟ...!


ಈ ವಿಡಿಯೋದಲ್ಲಿ ತನ್ನ ಮಾಲಕರೊಂದಿಗೆ ಶ್ವಾನವೊಂದು ಮಾಲ್‌ನಲ್ಲಿ ಭರ್ಜರಿಯಾಗಿ ಶಾಪಿಂಗ್ ಮಾಡುವ ದೃಶ್ಯ ಸೆರೆಯಾಗಿದೆ. ತನಗೆ ಬೇಕಾದ ಆಟದ ವಸ್ತುಗಳನ್ನು ಈ ಶ್ವಾನ ಆಯ್ದುಕೊಂಡು ಸಾಗುವ ದೃಶ್ಯ ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ರೆಕ್ಸ್ ಚಾಪ್ಮನ್ ಎಂಬವರು ಈ ವಿಡಿಯೋವನ್ನು ಶೇರ್ ಮಾಡಿದ್ದು, ಈ ಮುದ್ದು ಶ್ವಾನದ ಬುದ್ಧಿವಂತಿಕೆಯನ್ನೂ ಕೊಂಡಾಡಿದ್ದಾರೆ.

Also Read : ಹೆಣ್ಮಗು ಹುಟ್ಟಬಾರದೆಂದು ಅದೊಂದು ಸಮಾಧಿಯ ತುಂಡನ್ನೇ ತೆಗೆಯುತ್ತಿದ್ದರು...!

ಸುಮಾರು 29 ಸೆಕೆಂಡಿನ ಈ ವಿಡಿಯೋಗೆ ಈಗ ನೆಟ್ಟಿಗರು ಫುಲ್ ಫಿದಾ ಆಗಿ ಹೋಗಿದ್ದಾರೆ. ಎಲ್ಲವನ್ನು ವಾಸನೆ ಮೂಲಕವೇ ಗ್ರಹಿಸಿ, ಅಳೆದು ತೂಗಿ ಆಟದ ವಸ್ತುಗಳನ್ನು ಆಯ್ದುಕೊಳ್ಳುವ ಈ ಶ್ವಾನದ ಚಾಕಚಕ್ಯತೆ ನಿಜಕ್ಕೂ ಬೆರಗಾಗಿಸುತ್ತದೆ.

ಇದು ಕೆಲ ತಿಂಗಳು ಹಳೆಯ ವಿಡಿಯೋ. ಆದರೆ, ಸದ್ಯ ಇಂಟರ್‌ನೆಟ್‌ನಲ್ಲಿ ಇದು ಮತ್ತೆ ಮುನ್ನೆಲೆಗೆ ಬಂದಿದೆ. ಹಳೆಯದ್ದೋ ಹೊಸದ್ದೋ ಈ ವಿಡಿಯೋವನ್ನು ಎಷ್ಟು ನೋಡಿದರೂ ಮನಸ್ಸು ತಣಿಯದು. ಶ್ವಾನಗಳೆಂದರೇನೇ ನೋಡಲು ಖುಷಿ. ಅವುಗಳ ಆಟ, ತುಂಟಾಟ, ಆಪ್ತತೆ ಮನಸ್ಸಿನ ನೋವನ್ನು ದೂರ ಮಾಡುತ್ತವೆ. ಈ ವಿಡಿಯೋ ಕೂಡಾ ಹಾಗೆಯೇ... ಈ ಶ್ವಾನ ಕೂಡಾ ತನ್ನ ಚುರುಕು ಬುದ್ಧಿಯ ಕಾರಣಕ್ಕೆ ಇಷ್ಟವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ