ಆ್ಯಪ್ನಗರ

ಶ್ವಾನದ ಈ ಪರಿಶುದ್ಧ ಪ್ರೀತಿ ಖಂಡಿತಾ ಹೃದಯಕ್ಕೆ ತಟ್ಟುತದೆ...

ಇದು ಅತ್ಯಂತ ಹೃದಯಸ್ಪರ್ಶಿ ವಿಡಿಯೋ. ಈ ವಿಡಿಯೋ ನೋಡಿದಾಗ ಮನಸ್ಸು ತುಂಬಿ ಬರುತ್ತದೆ. ಶ್ವಾನವೊಂದರ ಪರಿಶುದ್ಧ ಮನಸ್ಸು ಎಲ್ಲಾ ನೋವನ್ನು ಮರೆಸುವಂತಿದೆ...

Vijaya Karnataka Web 10 Jun 2020, 10:03 am
ಮುದ್ದು ಶ್ವಾನಗಳು ಪಕ್ಕದಲ್ಲಿದ್ದರೆ ಅದರ ಖುಷಿಯೇ ಬೇರೆ. ಅವುಗಳ ಆಟ, ತುಂಟಾಟ ಮನಸ್ಸಿಗೆ ಹಿತ ನೀಡುತ್ತದೆ. ಎಷ್ಟೋ ಸಂದರ್ಭದಲ್ಲಿ ಒತ್ತಡ ನಿರ್ವಹಣೆಗೆ ಈ ಶ್ವಾನಗಳ ಒಡನಾಟ ತುಂಬಾ ಸಹಾಯ ಮಾಡುತ್ತದೆ... ಮುದ್ದು ಶ್ವಾನಗಳ ನಿಸ್ವಾರ್ಥ ಪ್ರೀತಿ ಮನಸ್ಸಿಗೊಂದು ಉಲ್ಲಾಸ ತಂದು ಒತ್ತಡವನ್ನು ಅರೆ ಕ್ಷಣದಲ್ಲಿ ದೂರ ಮಾಡುತ್ತದೆ... ಜನರ ಈ ಮುದ್ದು ಗೆಳೆಯರು ಬರೀ ಆಟ, ತುಂಟಾಟದಿಂದ ಮಾತ್ರ ಮನಸ್ಸು ಗೆಲ್ಲುವುದಿಲ್ಲ. ಬದಲಾಗಿ ಬೆಟ್ಟದಷ್ಟು ಪ್ರೀತಿ ಕೊಡುವುದರಲ್ಲೂ ಮುದ್ದಿನ ಶ್ವಾನಗಳು ಸದಾ ಮುಂದು. ಶ್ವಾನಗಳ ಪ್ರೀತಿ ಸದಾ ಅಪ್ಯಾಯಮಾನ...
Vijaya Karnataka Web DOG
| Screengrab from video | Courtesy : tiktok/@mollymasterson


Also Read : Bizarre Incident : ಯುವಕನ ಗುದನಾಳದೊಳಗೆ ಸೇರಿತ್ತು ಮೀನು...!

ಮನಸ್ಸಿನಲ್ಲಿ ಯಾವುದಾದರೂ ದುಗುಡ ಕಾಡುತ್ತಿದ್ದಾಗ ಪ್ರೀತಿಪಾತ್ರರು ಬಂದು ಮುದ್ದಿನಿಂದ ಅಪ್ಪಿ ಸಾಂತ್ವನ ಹೇಳಿದರೆ ನೂರಾನೆ ಬಲ ಬರುತ್ತದೆ. ಮನಸ್ಸಲ್ಲೊಂದು ಸಮಾಧಾನ ಮೂಡುತ್ತದೆ. ಕಳೆದು ಹೋಗಿದ್ದ ಚೈತನ್ಯ ಮತ್ತೆ ಮರಳುತ್ತದೆ. ಯಾರಾದರೂ ದುಃಖದಲ್ಲಿದ್ದಾಗ ಮನುಷ್ಯರು ಹೀಗೆ ಬಿಗಿದಪ್ಪಿ ಸಮಾಧಾನ ಹೇಳುವುದು ಸಹಜ. ಆದರೆ, ಬರೀ ಮನುಷ್ಯರಷ್ಟೇ ಹೀಗೆ ಪ್ರೀತಿಯಿಂದ ಅಪ್ಪಿಕೊಂಡು ಸಮಾಧಾನ ಹೇಳುವುದಿಲ್ಲ... ಶ್ವಾನಗಳೂ ತಮ್ಮ ಮಾಲಿಕರಿಗೆ ಅತೀ ಪ್ರೀತಿಯಿಂದ ಅಪ್ಪಿಗೆ ನೋಡಿ ಸಮಾಧಾನ ಮಾಡುತ್ತವೆ. ಸದ್ಯ ಅಂತಹದ್ದೇ ಒಂದು ಸುಂದರ ವಿಡಿಯೋ ಟಿಕ್‌ಟಾಕ್‌ನಲ್ಲಿ ಎಲ್ಲರ ಮನಗೆದ್ದಿದೆ. ಖಂಡಿತಾ ಇಂತಹದ್ದೊಂದು ಪ್ರೀತಿ ಮನಸ್ಸಿಗೆ ನೆಮ್ಮದಿ ತರುತ್ತದೆ.

Also Read : ಪ್ರಮುಖ ವ್ಯಕ್ತಿಗಳ ಸಮಾಧಿ ಇರುವ ಈ ಸ್ಮಶಾನದ ಬಗೆಗಿದೆ `ಭಯಾನಕ' ಕತೆಗಳು!

@mollymasterson He is to pure ##fyp ##dogs ♬ original sound - mollymasterson
ಟಿಕ್‌ಟಾಕ್ ಬಳಕೆದಾರರಾದ @MollyMasteron ಎಂಬವರ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ. ಮೊಲ್ಲಿಮಾಸ್ಟರಾನ್ ಅವರು ಶ್ವಾನವನ್ನು ಪ್ರೀತಿಯಿಂದ ಬಿಗಿದಪ್ಪಿದಾಗ ಅದು ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತದೆ ಎಂಬ ಪರೀಕ್ಷೆಗಿಳಿದಿದ್ದರು. ಅದರಂತೆ ತನ್ನ ಮುದ್ದಿನ ಶ್ವಾನವನ್ನು ಅತ್ಯಂತ ಪ್ರೀತಿಯಿಂದ ತಬ್ಬಿಕೊಂಡಾಗ ಆ ಶ್ವಾನ ಕೂಡಾ ಅಷ್ಟೇ ಪ್ರೀತಿಯಿಂದ ಭುಜಕ್ಕೆ ಮುಖಕೊಟ್ಟು ಪ್ರೀತಿ ಹಂಚಿಕೊಂಡಿದೆ. ಎಷ್ಟು ಪವಿತ್ರ, ಪರಿಶುದ್ಧ ಪ್ರೀತಿ ಇದಲ್ವಾ...? ನೋಡುವಾಗಲೇ ಹೃದಯ ತುಂಬಿ ಬರುತ್ತದೆ...

Also Read : ಚಕ್ರವ್ಯೂಹದಂತಿರುವ ಈ ಕಾಡಿನೊಳಗೆ ಹೋದರೆ ಜೀವಂತವಾಗಿ ಮರಳುವುದು ತುಂಬಾ ಕಷ್ಟವಂತೆ!

ಒಂದಷ್ಟು ಹೊತ್ತು ತಬ್ಬಿಕೊಂಡಾಗಲೂ ಶ್ವಾನ ಗೊಂದಲಗೊಳ್ಳಲಿಲ್ಲ ಅಥವಾ ಅಲ್ಲಿಂದ ಓಡಿ ಹೋಗಲಿಲ್ಲ. ಬದಲಾಗಿ ತುಂಬಾ ಮುಗ್ಧವಾಗಿ ಕಣ್ಣು ಮುಚ್ಚಿ ತನ್ನ ಮಾಲಕಿಯ ಹೆಗಲಿಗೆ ಮುಖವಿಟ್ಟು ಧೈರ್ಯ ತುಂಬುವಂತೆ ಪ್ರೀತಿ ಕೊಟ್ಟಿದೆ.. ಇದೇ ಕಾರಣಕ್ಕೆ ಈ ವಿಡಿಯೋ ಎಲ್ಲರಿಗೂ ಇಷ್ಟವಾಗಿದೆ. ಲಕ್ಷಾಂತರ ಮಂದಿ ಈ ವಿಡಿಯೋವನ್ನು ನೋಡಿ ಖುಷಿ ಪಟ್ಟಿದ್ದಾರೆ. ಎಲ್ಲರೂ ಈ ಮುದ್ದು ಶ್ವಾನದ ಪ್ರೀತಿಯನ್ನು ಕೊಂಡಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ