ಆ್ಯಪ್ನಗರ

ಕೊರೊನಾ ಕಂಡರೆ ಕೆಂಡದಂತಹ ಕೋಪ! : ಸಿಟ್ಟನ್ನು ಈಕೆ ತೀರಿಸಿಕೊಂಡಿದ್ದು ಹೇಗೆ ಗೊತ್ತಾ?

ಮಹಿಳೆಯೊಬ್ಬರು ಕೊರೊನಾ ವೈರಸ್‌ ಮೇಲಿನ ತನ್ನ ಕೋಪ ತೀರಿಸಿಕೊಂಡ ವಿಡಿಯೋ ಈಗ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ.

Vijaya Karnataka Web 21 Apr 2020, 8:27 pm
ಕೊರೊನಾ... ಸದ್ಯ ಎಲ್ಲರ ಬಾಯಿಯಲ್ಲೂ ಕೇಳುವ ಪದ ಇದೊಂದೇ. ಅಷ್ಟರ ಮಟ್ಟಿಗೆ ಈ ರಕ್ಕಸ ವೈರಾಣು ಎಲ್ಲರಲ್ಲೂ ಭೀತಿ ಮೂಡಿಸಿದೆ. ಒಂದೆರಡು ದೇಶ ಅಲ್ಲ ವಿಶ್ವದ ಬಹುತೇಕ ದೇಶಗಳು ಈ ರಕ್ಕಸ ವೈರಾಣುವಿನ ಕಾರಣಕ್ಕೆ ನಲುಗಿ ಹೋಗಿವೆ. ಸಾವಿರಗಟ್ಟಲೆ ಜನ ಈಗಾಗಲೇ ಈ ವೈರಸ್ ಕಾರಣದಿಂದ ಜೀವ ಬಿಟ್ಟಿದ್ದಾರೆ. ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಆಗಿವೆ. ಹೀಗಾಗಿ, ಭಯದಲ್ಲಿ ಜನರು ಮನೆಯಿಂದಲೇ ಆಚೆ ಬರುತ್ತಿಲ್ಲ.
Vijaya Karnataka Web Angry Woman
| Screengrab from video | Courtesy : tiktok/@sroyal2219


Also Read : Viral Video : ಈ ಕಂದನ ಎಕ್ಸ್‌ಪ್ರೆಶನ್‌ ಕಂಡು ನೀವು ಖಂಡಿತಾ ಫಿದಾ ಆಗ್ತೀರಿ

ಹಳ್ಳಿ ಹಳ್ಳಿಗಳಲ್ಲೂ ಈ ಬಗ್ಗೆ ಜನ ಜಾಗೃತರಾಗಿದ್ದಾರೆ. ನಮ್ಮ ಜನರು ಈ ವೈರಾಣುವಿನ ಬಗ್ಗೆ ಅದೆಷ್ಟು ಎಚ್ಚರಿಕೆಯಿಂದ ಇದ್ದಾರೆ, ಸಿಟ್ಟಾಗಿದ್ದಾರೆ ಎಂದರೆ ಕೊರೊನಾ ವೈರಸ್‌ನ ಚಿತ್ರ ಕಂಡರೂ ಉರಿದುರಿದು ಬೀಳುತ್ತಾರೆ. ಇಂತಹದ್ದೇ ಒಂದು ವಿಡಿಯೋ ಈಗ ಟಿಕ್‌ಟಾಕ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

Also Read : ಡ್ಯಾಡಿ... ಒಳಗೆ ಬನ್ನಿ! ಈ ಡಾಕ್ಟರ್ ದುಃಖ ಆ ಭೂಮಿ ತೂಕ! : ಇದು ಕಣ್ಣೀರು ತರಿಸುವ ದೃಶ್ಯ!

ಜನರ ಜಾಗೃತಿಗಾಗಿ ರಸ್ತೆಯಲ್ಲಿ ಬಿಡಿಸಿದ್ದ ಕೊರೊನಾ ವೈರಸ್‌ನ ದೊಡ್ಡ ಚಿತ್ರವನ್ನು ಕಂಡು ಮಹಿಳೆಯೊಬ್ಬರು ತಮ್ಮ ಕೋಪವನ್ನು ತೀರಿಸಿಕೊಂಡಿದ್ದಾರೆ. `ಗೋ ಕೊರೊನಾ... ಗೋ ಕೊರೊನಾ...' ಎನ್ನುತ್ತಾ ಚಿತ್ರದ ಕೊರೊನಾ ವೈರಸ್‌ಗೆ ಚಪ್ಪಲಿಯಲ್ಲಿ ಹೊಡೆದು ಇವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರು ಮಹಿಳೆಯರಿದ್ದಾರೆ. ಒಬ್ಬಾಕೆ ಚಿತ್ರಕ್ಕೆ ಹೊಡೆದು ತಮ್ಮ ಸಿಟ್ಟನ್ನು ಪ್ರದರ್ಶಿಸುತ್ತಿದ್ದರೆ, ಮತ್ತೊಬ್ಬರು ನಗುತ್ತಾ ಅಲ್ಲಿಂದ ಈಚೆ ಬರುವ ದೃಶ್ಯವಿದೆ.

@sroyal2219 Corona ko padi chappal ##arielsharetheload ##gharbaithoindia ##tiktokindia_ ##rajasthan ##marwadi ♬ original sound - Kamal Bishnoi
ಸದ್ಯ ಟಿಕ್‌ಟಾಕ್‌ನಲ್ಲಿ ಈ ವಿಡಿಯೋ ಭರ್ಜರಿಯಾಗಿಯೇ ವೈರಲ್ ಆಗುತ್ತಿದೆ. ಈ ವಿಡಿಯೋ ಕಂಡ ನೆಟ್ಟಿಗರು ನಕ್ಕು ಎಂಜಾಯ್ ಮಾಡುತ್ತಿದ್ದಾರೆ. ಇದು ರಾಜಸ್ಥಾನದಲ್ಲಿ ಸೆರೆಯಾದ ದೃಶ್ಯ ಎಂದು ಹೇಳಲಾಗುತ್ತಿದೆ.

Also Read : ಶ್ವಾನದೊಂದಿಗೆ ವಾಕಿಂಗ್‌ಗೆ ಹೋಗಿದ್ದ ಹುಡುಗಿ ಮತ್ತೆ ಬಂದಿದ್ದು ಶವವಾಗಿ!

ಕೊರೊನಾ ದೇಶಕ್ಕೆ ದಾಂಗುಡಿ ಇಟ್ಟ ಬಳಿಕ ಜನರ ನೆಮ್ಮದಿಗೇ ಕೊಳ್ಳಿ ಇಟ್ಟಿದೆ. ಹೀಗಾಗಿ, ರಕ್ಕಸ ವೈರಸ್ಸನ್ನು ಹೊಡೆದೋಡಿಸಲು ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಗಳಿರುಳು ಶ್ರಮಿಸುತ್ತಿದ್ದಾರೆ. ಆದರೂ ವೈರಸ್ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಲೇ ಇರುವುದು ಆತಂಕ ಮೂಡಿಸಿದೆ. ಹೀಗಾಗಿ, ಜನ ಆದಷ್ಟು ಎಚ್ಚರಿಕೆಯಿಂದ ಮನೆಯೊಳಗೇ ಇರುವುದು ಉತ್ತಮ. ಈ ಮೂಲಕ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಎಲ್ಲರೂ ಬಲ ತುಂಬಬೇಕಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ