ಆ್ಯಪ್ನಗರ

ದನ ಮತ್ತು ಶ್ವಾನದ ಅಪೂರ್ವ ಸ್ನೇಹ : ಮನ ಸೆಳೆಯುತ್ತದೆ ಈ ಗೆಳೆತನ

ಇದೊಂದು ಸುಂದರ ಗೆಳೆತನಕ್ಕೆ ಸಾಕ್ಷಿ. ಈ ಅಪೂರ್ವ ದೃಶ್ಯವನ್ನು ಕಂಡಾಗ ಎಂತವರ ಮನಸ್ಸೂ ಹಕ್ಕಿಯಂತೆ ಹಾರುತ್ತದೆ.

Vijaya Karnataka Web 31 Oct 2020, 8:28 am
ಫ್ರೆಂಡ್ಸ್‌ ಇಲ್ಲದ ಜಗತ್ತಿನಲ್ಲಿ ಬದುಕಲು ಸಾಧ್ಯನಾ...? ಗೆಳೆಯರೇ ಇಲ್ಲದ ಜೀವನವನ್ನು ಊಹಿಸಿಕೊಳ್ಳಬಹುದೇ...? ಖಂಡಿತಾ ಇದು ಸಾಧ್ಯವಿಲ್ಲ. ಗೆಳೆಯರು ಇಲ್ಲದ ಜೀವನವನ್ನು ಊಹಿಸುವುದಕ್ಕೂ ಆಗದು, ಗೆಳೆಯರು ಇಲ್ಲದೆ ಬದುಕಲೂ ಆಗದು. ಅದೇ ಸ್ನೇಹಕ್ಕಿರುವ ತಾಕತ್ತು. ಎಲ್ಲಾ ಬಂಧಗಳನ್ನು ಮೀರಿದ ಸಂಬಂಧವಿದು. ಪ್ರತಿಯೊಬ್ಬರ ಬದುಕಿನಲ್ಲೂ ಫ್ರೆಂಡ್ಸ್‌ಗೆ ಪ್ರಮುಖ ಸ್ಥಾನವಿದೆ. ಸ್ನೇಹಿತರು ಇಲ್ಲದೆ ಯಾರೂ ಅರೆಕ್ಷಣವೂ ನೆಮ್ಮದಿಯಿಂದ ಬದುಕಲು ಸಾಧ್ಯವೇ ಇಲ್ಲ...
Vijaya Karnataka Web Image by Mandyme27 from Pixabay
| Representative image | Image by Mandyme27 from Pixabay


ಹಾಗಂತ, ಬರೀ ಮನುಷ್ಯರಲ್ಲಿ ಮಾತ್ರ ಈ ರೀತಿಯ ಸ್ನೇಹ ಬಾಂಧವ್ಯ ಇದೆಯಾ...? ಖಂಡಿತಾ ಇಲ್ಲ. ಈ ಲೋಕದ ಪ್ರತಿಯೊಂದು ಜೀವರಾಶಿಯಲ್ಲೂ ಸ್ನೇಹವಿದೆ. ಬಳ್ಳಿಗೆ ಮರದ ಜೊತೆ ಸ್ನೇಹ, ಹಕ್ಕಿಗೆ ಹೂ ಗಿಡಗಳೊಂದಿಗೆ ಸ್ನೇಹ... ಈ ಸ್ನೇಹದ ವ್ಯಾಪಿ, ವಿಸ್ತಾರವೇ ಅಗಾಧ. ಪ್ರಾಣಿಗಳಲ್ಲೂ ನಾವು ಬಹಳ ಖುಷಿಯ ಸ್ನೇಹವನ್ನು ನೋಡಲು ಸಾಧ್ಯ. ಪ್ರಾಣಿಗಳ ಈ ಸ್ನೇಹದ ವಿಡಿಯೋವನ್ನು ನೋಡುವಾಗ ಮನಸ್ಸಿಗೆ ಹಿತವಾಗುತ್ತದೆ.

Also Read : ಎಮ್ಮೆಯ ಬೆನ್ನೇರಿ ಎಲೆ ತಿನ್ನುವ ಮೇಕೆ...! : ಸುಂದರ ಸ್ನೇಹಕ್ಕೆ ಸಾಕ್ಷಿ ಇದು

ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾಣಿಗಳ ಬದುಕಿನ ಅಪರೂಪದ ಹಲವಾರು ವಿಡಿಯೋಗಳು ಕಾಣಸಿಗುತ್ತವೆ. ಈ ಎಲ್ಲಾ ವಿಡಿಯೋಗಳು ಕ್ಷಣಾರ್ಧದಲ್ಲಿ ನಮ್ಮ ಮನಸ್ಸು ಗೆಲ್ಲುತ್ತವೆ. ಇದು ಕೂಡಾ ಅಂತಹದ್ದೇ ಒಂದು ವಿಡಿಯೋ. ಈ ಸ್ನೇಹ ಕಂಡಾಗ ಮನಸ್ಸು ಖುಷಿಯಿಂದ ಕುಣಿಯುತ್ತದೆ.

Also Read : ಆನೆಗಳೊಂದಿಗೆ ಯಾವತ್ತೂ ಹೀಗೆ ವರ್ತಿಸಬೇಡಿ : ತಿರುಗಿ ಬಿದ್ದರೆ ಅಪಾಯ ಕಟ್ಟಿಟ್ಟಬುತ್ತಿ!

@welcomet0nature ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆದ ವಿಡಿಯೋ ಇದು. ಈ ಕ್ಲಿಪ್‌ನಲ್ಲಿ ದನ ಮತ್ತು ಮುದ್ದು ಶ್ವಾನವೊಂದು ಅತ್ಯಂತ ಸ್ನೇಹದಿಂದ ಇರುವ ದೃಶ್ಯವಿದೆ. ದನದ ಮುಖಕ್ಕೆ ಒರಗಿ ಶ್ವಾನ ಕುಳಿತಿರುವ ಈ ದೃಶ್ಯವನ್ನು ನೋಡಿದಾಗಲೇ ಖುಷಿಯಾಗುತ್ತದೆ. ಈ ಎರಡೂ ಮುದ್ದು ಪ್ರಾಣಿಗಳು ತಮ್ಮ ಈ ಗೆಳೆತನವನ್ನು ಎಷ್ಟು ಆನಂದಿಸುತ್ತವೆ ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ.


Also Read : ಹಾಲುಗಲ್ಲದ ಮುದ್ದು ಕಂದನೊಂದಿಗೆ ಶ್ವಾನದ ಆಟ : ಈ ಅಪೂರ್ವ ದೃಶ್ಯಕ್ಕೆ ನೆಟ್ಟಿಗರು ಫಿದಾ

ನಿರೀಕ್ಷೆಯಂತೆಯೇ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಈ ಅಪೂರ್ವ ದೃಶ್ಯಕ್ಕೆ ಫಿದಾ ಆಗಿದ್ದಾರೆ. ಈ ದೃಶ್ಯ ನೋಡಿದ ಬಹುತೇಕರು `ಅದ್ಭುತ',`ಸುಂದರ' ಎಂದೆಲ್ಲಾ ಖುಷಿಯ ಪ್ರತಿಕ್ರಿಯೆ ನೀಡಿದ್ದಾರೆ.


ನಿಜಕ್ಕೂ ಇಂತಹ ದೃಶ್ಯಗಳು ಮನಸ್ಸಿಗೆ ಬಹುಬೇಗ ಆಪ್ತವಾಗುತ್ತವೆ. ಈ ರೀತಿಯ ಸುಂದರ ದೃಶ್ಯಗಳನ್ನು ಎಷ್ಟು ನೋಡಿದರೂ ಮನಸ್ಸು ತಣಿಯದು...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ