ಆ್ಯಪ್ನಗರ

ಅಲೆಗಳನ್ನು ಎದುರಿಸಿ ಸಾಗುವುದೇ ಜೀವನ : ಸಣ್ಣ ವಿಡಿಯೋದಲ್ಲಿ ಅಡಗಿದೆ ದೊಡ್ಡ ಪಾಠ

ಮರಳುಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರೊಂದು ಅಪೂರ್ವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಜೀವನಕ್ಕೆ ಅದ್ಭುತ ಪಾಠವಾಗಿದೆ.

Vijaya Karnataka Web 25 Sep 2020, 2:34 pm
ಜೀವನ ಎಂದರೆ ಹಾಗೆ... ಇಲ್ಲಿ ಕಷ್ಟ ಸುಖ ಇದ್ದದ್ದೇ. ಆದರೆ, ಕೆಲವೊಂದು ಸಲ ಕಷ್ಟಗಳು ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತವೆ. ಕಷ್ಟಗಳಿಗೆ ಸಿರಿವಂತ, ಬಡವ ಎಂಬುದಿಲ್ಲ. ಬಡವರ ಕಷ್ಟ ಒಂದು ರೀತಿಯದ್ದಾಗಿದ್ದರೆ, ದಣಿಕರ ಕಷ್ಟಗಳು ಇನ್ನೊಂದು ರೀತಿಯದ್ದು. ಆದರೆ, ಈ ಕಷ್ಟಗಳನ್ನು ಎದುರಿಸಿ ಬಾಳುವುದೇ ಜೀವನ. ಒಂದೊಮ್ಮೆ ಯಾವುದೇ ಕಷ್ಟಗಳಿಗೆ ಹೆದರಿ ಕುಳಿತರೆ ಆ ಕಷ್ಟ ನಮ್ಮನ್ನೇ ನುಂಗಿ ಹಾಕುವ ಅಪಾಯವಿರುತ್ತದೆ. ಧೈರ್ಯ, ಆತ್ಮವಿಶ್ವಾಸ, ಒಗ್ಗಟ್ಟಿದ್ದರೆ ಯಾವ ಕಷ್ಟವನ್ನೂ ಎದುರಿಸುವುದು ಕಷ್ಟವೇ ಅಲ್ಲ...! ಅದಕ್ಕೆ ಸಾಕ್ಷಿ ಈ ವಿಡಿಯೋ.
Vijaya Karnataka Web Battle Terrifying Sea Waves
| Screengrab from video | Courtesy : @sudarsansand/Twitter


ಜೀವನ ಎಂಬುದು ಏರಿಳಿತಗಳಿರುವ ರೋಲರ್ ಕೋಸ್ಟರ್ ಸವಾರಿಯಂತೆ ಎಂಬುದು ಎಷ್ಟು ನಿಜವೋ, ಆತ್ಮವಿಶ್ವಾಸ, ದೃಢ ನಂಬಿಕೆ ಇದ್ದರೆ ಕಷ್ಟಗಳೆಂಬ ಅಲೆಯನ್ನೂ ಭೇದಿಸಿ ಮುನ್ನುಗ್ಗಬಹುದು ಎಂಬುದು ಕೂಡಾ ಅಷ್ಟೇ ಸತ್ಯ. ಕಷ್ಟಗಳ ಅಲೆಗಳ ವಿರುದ್ಧ ಹೋರಾಡಿ ಜಯಿಸುವುದೇ ಜೀವನ. ನಮ್ಮೆಲ್ಲರ ಬದುಕಿನ ರೂಪಕದಂತಿದೆ ಈ ವಿಡಿಯೋ.

Also Read : ಪ್ರೆಶರ್ ಕುಕ್ಕರ್‌ನಿಂದ ಸ್ಟೀಮ್ ತೆಗೆದುಕೊಳ್ಳುವ `ಐಡಿಯಾ'!: ವಿಚಿತ್ರ ವಿಡಿಯೋ ವೈರಲ್

ಖ್ಯಾತ ಮರಳುಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ಅದ್ಭುತ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಇದು ಅಲೆಗಳನ್ನು ಭೇದಿಸಿ ದೋಣಿಯಲ್ಲಿ ಸಾಗುವ ತಂಡದ ಅದ್ಭುತ ದೃಶ್ಯ. ಹನ್ನೊಂದು ಸೆಕೆಂಡುಗಳ ಈ ವಿಡಿಯೋ ನಮ್ಮ ಜೀವನಕ್ಕೆ ಮಹತ್ವದ ಸಂದೇಶವನ್ನು ನೀಡುತ್ತದೆ. ಈ ಕ್ಲಿಪ್‌ನಲ್ಲಿ ಐವರು ವ್ಯಕ್ತಿಗಳು ದೋಣಿಯಲ್ಲಿ ಕುಳಿತು ಸಮುದ್ರದ ಭಯಾನಕ ಅಲೆಗಳ ವಿರುದ್ಧ ಹೋರಾಡುವ ದೃಶ್ಯವಿದೆ. ಈ ರಕ್ಕಸ ಅಲೆಗಳು ಇವರನ್ನು ಹಿಂದಿಕ್ಕಿದರೂ ಇವರು ತಮ್ಮ ಪ್ರಯತ್ನವನ್ನು ಬಿಡುವುದಿಲ್ಲ.

Also Read : ಸಾವಿರಾರು ವಲಸೆ ಹಕ್ಕಿಗಳ ನಿಗೂಢ ಸಾವು!: ಹೃದಯ ಕರಗಿಸುತ್ತದೆ ವೈರಲ್ ಫೋಟೋ, ವಿಡಿಯೋಗಳು...!

Also Read : ತನ್ನ ಸಮಾಧಿ ಬಳಿ ಆಟವಾಡುತ್ತಿದೆಯಾ 2 ವರ್ಷದ ಕಂದನ ಆತ್ಮ? ಆ ತಾಯಿಗೆ ಕಾಣಿಸಿದ್ದೇನು?

ಇದು ಅಪಾಯಕಾರಿ ಪ್ರಯತ್ನ ಹೌದು. ಆದರೆ, ಇಂತಹ ಸನ್ನಿವೇಶ ಎದುರಾದಾಗ ಪ್ರತಿಕ್ಷಣವೂ ಹೋರಾಡಬೇಕು ಎಂಬುದು ಕೂಡಾ ನಿಜ. ಅದೂ ಅಲ್ಲದೆ, ಸಾಂಘಿಕ ಪ್ರಯತ್ನವಿದ್ದರೆ ಇಂತಹ ಕಷ್ಟಗಳನ್ನು ಎದುರಿಸುವುದು ಕೂಡಾ ಸವಾಲಲ್ಲ. ಇದೇ ಕಾರಣಕ್ಕೆ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಈ ದೃಶ್ಯವನ್ನು ಕಂಡ ಬಹುತೇಕರು ಯುವಕರ ಛಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದಕ್ಕೂ ಈ ವಿಡಿಯೋ ಸಾಕ್ಷಿಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ