ಆ್ಯಪ್ನಗರ

ವ್ಹಾವ್... ಅದೆಂಥಾ ಸ್ನೇಹ...? ಹೃದಯಸ್ಪರ್ಶಿಯಾಗಿದೆ ಕುದುರೆ ಮತ್ತು ಶ್ವಾನದ ಈ ಗೆಳೆತನ

ಕುದುರೆ ಮತ್ತು ಶ್ವಾನ ಸ್ನೇಹದಿಂದ ಇರುವ ಅಪೂರ್ವ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಈ ವಿಡಿಯೋ ಅರೆಕ್ಷಣದಲ್ಲಿ ಎಲ್ಲರನ್ನೂ ಸೆಳೆದಿದೆ.

Vijaya Karnataka Web 24 Sep 2020, 10:00 am
ಸ್ನೇಹ ಎಂಬುದು ಅಪೂರ್ವ ಸಂಬಂಧ. ಈ ಲೋಕದಲ್ಲಿ ಬೆಲೆ ಕಟ್ಟಲಾಗದ ಬಾಂಧವ್ಯಗಳಲ್ಲಿ ಗೆಳೆತನವೂ ಒಂದು. ಇದೊಂದು ಅಪ್ಯಾಯಮಾನ ಬಾಂಧವ್ಯ... ಜನ್ಮ ಜನ್ಮದ ಅನುಬಂಧವೂ ಹೌದು... ಖಂಡಿತಾ ಇದು ಬಣ್ಣಿಸಲಸಾಧ್ಯವಾದ ಅನುಭವ... ಈ ಜಗತ್ತಿನ ಪ್ರತಿಯೊಂದು ಜೀವರಾಶಿಯಲ್ಲೂ ಸ್ನೇಹವನ್ನು ಕಾಣಬಹುದು.
Vijaya Karnataka Web Best Friends
| Screengrab from video | Courtesy : @welcomet0nature/Twitter


ಇಂತಹ ಸ್ನೇಹದ ಸೊಬಗನ್ನು ಸಾರುವ ಅದೆಷ್ಟೋ ವಿಡಿಯೋಗಳು ಇಂಟರ್‌ನೆಟ್‌ನಲ್ಲಿ ಸದಾ ಕಾಣಸಿಗುತ್ತವೆ. ಈ ಸೊಬಗಿನ ದೃಶ್ಯಗಳು ಅರೆಕ್ಷಣದಲ್ಲಿ ನೋಡುವ ನಮ್ಮ ಹೃದಯಕ್ಕೂ ಲಗ್ಗೆ ಇಡುತ್ತವೆ. ಜೊತೆಗೆ, ಮನಸ್ಸಿಗೂ ಮುದ ನೀಡುತ್ತವೆ, ಮನಸ್ಸಿನ ಬೇಸರವನ್ನೂ ದೂರ ಮಾಡುತ್ತವೆ. ಹೀಗೆ ಅಪ್ಯಾಯಾಮಾನ ಅನುಭವ ನೀಡುವಂತಹ ಸ್ನೇಹದ ಮತ್ತೊಂದು ವಿಡಿಯೋ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಇದು ಶ್ವಾನ ಮತ್ತು ಕುದುರೆಯ ಗೆಳೆತನದ ಸೊಬಗಿನ ದೃಶ್ಯ.

Also Read : 38 ವರ್ಷಗಳ ಬಳಿಕ ಹೆತ್ತವರ ಮಡಿಲು ಸೇರಿದ 40 ವರ್ಷದ ಮಗ! : ಇದು ಹೃದಯವನ್ನೇ ಕರಗಿಸುವ ಕ್ಷಣ

ವೆಲ್ಕಂ ಟು ನೇಚರ್ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ಅಪೂರ್ವ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಕುದುರೆ ಮತ್ತು ಶ್ವಾನದ ನಡುವಣ ಸ್ನೇಹದ ಸುಂದರ ಕ್ಷಣಗಳಿವೆ. ಈ ವಿಡಿಯೋ ನೋಡಿದರೆ ಸಾಕು ಈ ಎರಡು ಮುದ್ದು ಜೀವಿಗಳು ಅದೆಷ್ಟು ಅಪೂರ್ವ ಸ್ನೇಹ ಬಾಂಧವ್ಯವನ್ನು ಹೊಂದಿವೆ ಎಂಬುದು ಗೊತ್ತಾಗುತ್ತದೆ. ಮುದ್ದು ಮುಖದ ಕುದುರೆ ನಿಂತಿದೆ. ತನ್ನ ಫ್ರೆಂಡ್ ಅನ್ನು ನೋಡಲು ಮುದ್ದಾದ ಶ್ವಾನವೂ ಅಲ್ಲಿಗೆ ಬಂದಿದೆ. ಹೀಗೆ ಬಂದ ಶ್ವಾನ ತನ್ನ ಎರಡು ಕಾಲಿನಲ್ಲಿ ನಿಂತು ಕುದುರೆಯ ಮುಖವನ್ನು ಎಳೆದು ಮುದ್ದಿಸುತ್ತಿದೆ. ವ್ಹಾವ್... ಎಷ್ಟು ಅದ್ಭುತವಾಗಿದೆ ಈ ದೃಶ್ಯ...

Also Read : Bizarre Incident : ಹಲ್ಲುಜ್ಜುವಾಗ ಆಕಸ್ಮಿಕವಾಗಿ ವ್ಯಕ್ತಿಯ ಹೊಟ್ಟೆ ಸೇರಿದ ಟೂತ್‌ಬ್ರಶ್!

Also Read : `ಸೋ ಕ್ಯೂಟ್': ಡೋರ್‌ಮ್ಯಾಟ್‌ನಲ್ಲಿ ಕಾಲುಗಳನ್ನು ಒರೆಸಿಯೇ ಮನೆಯೊಳಗೆ ಪ್ರವೇಶಿಸುವ ಮುದ್ದು ಶ್ವಾನದ ಮರಿ!


ಇಂತಹ ಸೊಬಗಿನ ದೃಶ್ಯ ನೆಟ್ಟಿಗರ ಮನಗೆಲ್ಲುವಲ್ಲಿ ವಿಫಲವಾಗಿಲ್ಲ. ಅರೆಕ್ಷಣದಲ್ಲಿ ಸೂಜಿಗಲ್ಲಿನಂತೆ ಎಲ್ಲರನ್ನೂ ಸೆಳೆದುಬಿಡುವ ತಾಕತ್ತು ಈ ಅಪೂರ್ವ ದೃಶ್ಯಕ್ಕಿದೆ. ಇದೇ ಕಾರಣಕ್ಕೆ ಈ ವಿಡಿಯೋವನ್ನು ನೋಡಿದ ಎಲ್ಲರೂ ಈ ಸುಂದರ ದೃಶ್ಯಕ್ಕೆ ಫಿದಾ ಆಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ