ಆ್ಯಪ್ನಗರ

ಆ 24 ಗಂಟೆ...! : 80 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿದ ಕ್ಲಿಪ್ ಇದು...!

ಇದೊಂದು ಅಪೂರ್ವ ವಿಡಿಯೋ. ಪರಿಸರ, ಸಸ್ಯ ಸಂಕುಲಗಳ ಬಗ್ಗೆ ಆಸಕ್ತಿ ಇರುವವರನ್ನು ಅರೆಕ್ಷಣದಲ್ಲಿ ಸೆಳೆದು ಬಿಡುವಂತಹ ದೃಶ್ಯವಿದು.

Vijaya Karnataka Web 20 Nov 2020, 8:52 am
ಪರಿಸರ ಎಂಬುದು ನಮಗೆ ಸಿಕ್ಕಿರುವ ದೊಡ್ಡ ನಿಧಿ. ಸಸ್ಯ, ಪ್ರಾಣಿ ಸಂಕುಲಗಳು ನಮ್ಮ ಆಸ್ತಿ. ಇಂತಹ ಅಪೂರ್ವ ಸಂಪತ್ತಿನ ಬಗ್ಗೆ ಎಲ್ಲರಿಗೂ ಸಹಜ ಕುತೂಹಲ ಇದ್ದೇ ಇರುತ್ತದೆ. ಹೀಗೆ ಸಸ್ಯಗಳ ಬಗ್ಗೆ ಕುತೂಹಲ ಇರುವವರಿಗೆ ಬಲು ಇಷ್ಟವಾಗುವಂತಹ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬರೋಬ್ಬರಿ 80 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿರುವಂತಹ ವಿಡಿಯೋ ಇದು.
Vijaya Karnataka Web Image by  David Mark from Pixabay
| Representative image | Image by David Mark from Pixabay


ಸಸ್ಯಗಳು ನಮಗೆ ಯಾರಿಗೂ ಹೊಸದಲ್ಲ. ಆದರೆ, ಬಹುತೇಕರಿಗೆ ಈ ಸಸ್ಯಗಳ ಬಗ್ಗೆ ಸಂಪೂರ್ಣ ಗೊತ್ತಿರುವುದಿಲ್ಲ. ಅದರಲ್ಲೂ ದಿನದ 24 ಗಂಟೆಗಳಲ್ಲಿ ಸಸ್ಯಗಳಲ್ಲಿ ಆಗುವಂತಹ ಬದಲಾವಣೆ ಅಥವಾ ಚಲನೆಗಳು ಎಂತಹದ್ದು ಎಂಬುದು ಸಾಮಾನ್ಯವಾಗಿ ಯಾರಿಗೂ ತಿಳಿದಿರುವುದಿಲ್ಲ. ಇದು ಸಹಜ ಕೂಡಾ. ಇದು ಸೂಕ್ಷ್ಮ ಪ್ರಕ್ರಿಯೆ ಆಗಿದ್ದರಿಂದ ಈ ಪ್ರಕ್ರಿಯೆಯ ಬಗ್ಗೆ ಜನಸಾಮಾನ್ಯರಿಗೆ ಕೊಂಚ ಗೊತ್ತಿದ್ದರೂ ಸಂಪೂರ್ಣ ತಿಳಿದಿರುವುದು ಸ್ವಲ್ಪ ಕಷ್ಟವೇ. ಆದರೆ, ಇದೀಗ ಸಸ್ಯಗಳಲ್ಲಿ 24 ಗಂಟೆಗಳಲ್ಲಿ ಆಗುವಂತಹ ಬದಲಾವಣೆಯನ್ನು ಚಿತ್ರೀಕರಿಸಲಾಗಿದೆ.

Also Read : ತಾಯಿ ಮಮತೆಗೆ ಬೆಲೆ ಕಟ್ಟಲಾಗದು : ಎಲ್ಲರನ್ನೂ ಭಾವುಕರನ್ನಾಗಿಸುವ ವಿಡಿಯೋ ಇದು

Also Read : ನ್ಯೂಜಿಲೆಂಡ್ ಪೊಲೀಸರ ದೀಪಾವಳಿ ಸಂಭ್ರಮ : ಬಾಲಿವುಡ್ ಹಾಡಿಗೂ ಡಾನ್ಸ್‌

ದಿನದ 24 ಗಂಟೆಗಳಲ್ಲಿ ಸಸ್ಯಗಳಲ್ಲಿ ಕಾಣುವ ಚಲನೆಯನ್ನು 12 ಸೆಕೆಂಡುಗಳ ಕ್ಲಿಪ್‌ನಲ್ಲಿ ತೋರಿಸಿಕೊಡಲಾಗಿದೆ. ಮನೆಯೊಳಗೆ ಜೋಡಿಸಿಟ್ಟಿರುವ ಸಸ್ಯಗಳ ಪಕ್ಕ ಗಡಿಯಾರವನ್ನು ಇಟ್ಟು ಈ ದೃಶ್ಯ ಸೆರೆ ಹಿಡಿಯಲಾಗಿದೆ. @ThingsWork ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ. ಇದರಲ್ಲಿ ವಿವಿಧ ರೀತಿಯ ಕ್ಯಾಲಥಿಯಾ ಸಸ್ಯಗಳ ಎಲೆಗಳಲ್ಲಿ ದಿನವಿಡೀ ಯಾವೆಲ್ಲಾ ರೀತಿಯ ಚಲನೆಗಳು ಕಾಣುತ್ತವೆ ಎಂಬುದನ್ನು ಸೆರೆಹಿಡಿಯಲಾಗಿದೆ.


Also Read : `ಇಲ್ಲ... ನಾನು ಬಾಲ ಎಳೆಯಲು ಬಂದಿಲ್ಲ. ಗೋಡೆ ನೋಡುತ್ತಿದ್ದೇನೆ ಅಷ್ಟೇ' : ಬೆಕ್ಕು ಹೀಗೆ ಹೇಳುತ್ತಿರಬಹುದಾ...?

ಕ್ಯಾಲಥಿಯಾ ಸಸ್ಯಗಳ ಎಲೆಗಳು ರಾತ್ರಿ ಒಟ್ಟಿಗೆ ಮಡಚಿಕೊಳ್ಳುತ್ತವೆ. ಇಂತಹ ಸಸ್ಯಗಳನ್ನು `ಪ್ರೇಯರ್ ಪ್ಲ್ಯಾನ್ಸ್ಟ್‌' ಎಂದೂ ಕರೆಯಲಾಗುತ್ತದೆ. ಈ ಎಲೆಗಳು ಮಡಚಿಕೊಂಡಾಗ ಪ್ರಾರ್ಥಿಸಿಲು ಕೈಜೋಡಿಸಿದಂತೆ ಕಾಣುತ್ತದೆ ಎಂಬ ಕಾರಣಕ್ಕೆ ಈ ಹೆಸರಿಡಲಾಗಿದೆ ಎಂಬುದು ಹಲವರ ಅಭಿಪ್ರಾಯ. ಸದ್ಯ ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಸಖತ್ ಹವಾ ಸೃಷ್ಟಿಸಿದೆ. ಎಂಟು ಮಿಲಿಯನ್‌ಗೂ ಅಧಿಕ ವೀಕ್ಷಣೆ ಗಳಿಸುವಲ್ಲಿ ಈ ವಿಡಿಯೋ ಯಶಸ್ವಿಯಾಗಿದೆ. ಸಸ್ಯಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇರುವವರನ್ನು ಈ ವಿಡಿಯೋ ಬಹುವಾಗಿ ಸೆಳೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ