ಪ್ರಾಣಿಗಳ ಖುಷಿಯ ಕ್ಷಣದ ದೃಶ್ಯವನ್ನು ನೋಡಲು ಇಷ್ಟಪಡದೇ ಇರುವವರು ಯಾರೂ ಇಲ್ಲ. ಇಂತಹ ಆನಂದದ ಕ್ಷಣ ಎಲ್ಲರ ಮೊಗ ಖುಷಿಯಿಂದ ಅರಳುವಂತೆ ಮಾಡುತ್ತದೆ. ಈ ರೀತಿಯ ದೃಶ್ಯಗಳು ನಮ್ಮ ಉಲ್ಲಾಸವನ್ನೂ ಹೆಚ್ಚು ಮಾಡುತ್ತವೆ. ಇದೇ ಕಾರಣಕ್ಕೆ ಎಲ್ಲರೂ ಪ್ರಾಣಿಗಳ ಬದುಕಿನ ಅಪರೂಪದ ದೃಶ್ಯಗಳನ್ನು ನೋಡಲು ಬಹುವಾಗಿ ಇಷ್ಟಪಡುತ್ತಾರೆ. ಒಂದೊಮ್ಮೆ ನೀವು ಕೂಡಾ ಇಂತಹದ್ದೇ ಆನಂದದಾಯಕ ದೃಶ್ಯವನ್ನು ಇಂಟರ್ನೆಟ್ನಲ್ಲಿ ಹುಡುಕುತ್ತಿದ್ದರೆ ಈ ದೃಶ್ಯ ನಿಮಗೆ ಇಷ್ಟವಾಗಬಹುದು. ಇದು ನಿಮ್ಮ ಈ ದಿನದ ಖುಷಿಗೆ ಜತೆಯಾಗುವಂತಹ ದೃಶ್ಯ. ಕರಡಿಗಳ ಈ ಆಟದ ಖುಷಿ ಎಲ್ಲರಲ್ಲೂ ಮಂದಹಾಸ ಮೂಡಿಸದೇ ಇರದು. ಕೆಲವರು ಈ ದೃಶ್ಯವನ್ನು ಮತ್ತೆ ಮತ್ತೆ ನೋಡಿದರೂ ಅಚ್ಚರಿಯೇನೂ ಇಲ್ಲ.
ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಧಾ ರಾಮನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕರಡಿಗಳ ಗುಂಪು ಜೋಕಾಲಿಯಲ್ಲಿ ಆಡಲು ಪೈಪೋಟಿ ನಡೆಸುವ ದೃಶ್ಯವಿದು. ಕಟ್ಟಿರುವ ತೂಗುಮಂಚದ ಬಳಿ ಕರಡಿಗಳು ಇರುವ ದೃಶ್ಯದ ಮೂಲಕ 13 ಸೆಕೆಂಡುಗಳ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ತೂಗುಮಂಚದ ಬಳಿ ಇರುವ ಈ ಕರಡಿಗಳು ಇದರಲ್ಲಿ ತೂಗುತ್ತಾ ಹಾಯಾಗಿರಲು ಬಯಸುತ್ತವೆ. ಹೀಗಾಗಿ, ಎರಡು ಕರಡಿಗಳು ಈ ಜೋಕಾಲಿಯನ್ನು ಏರಲು ಪ್ರಯತ್ನಿಸುತ್ತವೆ. ಆದರೆ, ತಮ್ಮ ಈ ಕಾರ್ಯದಲ್ಲಿ ಇವುಗಳು ಸಫಲವಾಗುವುದಿಲ್ಲ...! ನಾನೇ ಮೊದಲು ಹೋಗಬೇಕು ಎಂಬ ಪೈಪೋಟಿಗೆ ಬಿದ್ದಂತೆ ಇವುಗಳು ತೂಗುಮಂಚವನ್ನು ಹತ್ತಲು ಯತ್ನಿಸುತ್ತಿದ್ದವು. ಆದರೆ, ಕೊನೆಗೆ ಆಯತಪ್ಪಿ ಎರಡೂ ಕೆಳಗೆ ಬಿದ್ದಿದ್ದವು.
ಇಲ್ಲಿದೆ ವಿಡಿಯೋ :
ಈ ಮುದ್ದಾದ ದೃಶ್ಯಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಕರಡಿಗಳ ಈ ಖುಷಿಯ ಆಟವನ್ನು ಎಲ್ಲರೂ ಬಲು ಆನಂದದಿಂದಲೇ ಕಣ್ತುಂಬಿಕೊಳ್ಳುತ್ತಿದ್ದಾರೆ. ಹೀಗಾಗಿ, ಈ ವಿಡಿಯೋ ಸಾಕಷ್ಟು ಮಿಲಿಯನ್ ವೀಕ್ಷಣೆ ಗಳಿಸುವಲ್ಲಿಯೂ ಯಶಸ್ವಿಯಾಗಿದೆ. ಈ ದೃಶ್ಯ ಕಂಡ ಬಹುತೇಕರು ಮೆಚ್ಚುಗೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ನಿಮಗೆ ಕೂಡಾ ಈ ದೃಶ್ಯ ಖುಷಿ ಕೊಟ್ಟಿರಬಹುದು.