ಆ್ಯಪ್ನಗರ

ಮುದ್ದು ಮಾತಲ್ಲೇ ಬದುಕಿಗೊಂದು ಅದ್ಭುತ ಸಂದೇಶ ನೀಡಿದ ಪುಟಾಣಿ : ಮನಸೆಳೆಯುತ್ತದೆ ಅಪೂರ್ವ ದೃಶ್ಯ

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಹೃದಯ ಗೆದ್ದಿದೆ. ಮುದ್ದು ಮಾತಲ್ಲೇ ಈ ಪುಟಾಣಿ ನೀಡುವ ಜೀವನ ಸಂದೇಶ ಎಲ್ಲರನ್ನೂ ಬಹುವಾಗಿ ಸೆಳೆದಿದೆ. ಕಂದನ ಮಾತು ಬದುಕಿಗೊಂದು ಸ್ಫೂರ್ತಿಯಾಗಿದೆ.

Vijaya Karnataka Web 13 Oct 2021, 1:10 pm

ಹೈಲೈಟ್ಸ್‌:

  • ಮುಗ್ಧ ಕಂದನ ಅದ್ಭುತ ಜೀವನ ಪಾಠ
  • ಮುದ್ದು ಮಾತಲ್ಲೇ ಅಪೂರ್ವ ಸಂದೇಶ ನೀಡಿದ ಪುಟಾಣಿ
  • ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ದೃಶ್ಯ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Important Life Lessons
| Screengrab from video | Courtesy : instagram/alongcameabby/
ಮುದ್ದು ಮಕ್ಕಳ ಆಟ, ತುಂಟಾಟವೇ ಬಲು ಚೆನ್ನ. ದೇವರ ಮನಸ್ಸಿನ ಕಂದಮ್ಮಗಳು ಏನು ಮಾಡಿದರೂ ನೋಡಲು ಚೆಂದ. ಒಂದೊಂದು ಸಲ ಈ ನಿರ್ಮಲ ಹೃದಯದ ಕಂದಮ್ಮಗಳ ಬದುಕು ದೊಡ್ಡವರಿಗೂ ಪಾಠವಾಗುತ್ತದೆ. ಕೆಲವೊಂದು ಸಲ ಪುಟಾಣಿಗಳು ತಮ್ಮ ಮುಗ್ಧ ಮಾತುಗಳಿಂದಲೇ ಜೀವನದ ಅದ್ಭುತ ಸಂದೇಶವನ್ನೂ ನೀಡುತ್ತಾರೆ. ಅದಕ್ಕೆ ಸಾಕ್ಷಿ ಈ ಅದ್ಭುತ ದೃಶ್ಯ.

ಇಲ್ಲೊಬ್ಬಳು ಪುಟಾಣಿ ಆಟ ಆಡುತ್ತಲೇ ಬದುಕಿಗೊಂದು ಅದ್ಭುತ ಸಂದೇಶವನ್ನು ನೀಡಿದ್ದಾಳೆ. ಇವಳ ಸಲಹೆ ನಿಜಕ್ಕೂ ಅಪೂರ್ವ ಮತ್ತು ಅನುಕರಣೀಯ.
ನೋಡ ನೋಡುತ್ತಿದ್ದಂತೆಯೇ ಪೆಟ್ರೋಲ್ ಬಂಕ್ ಸಿಬ್ಬಂದಿಯ ಕಿಡ್ನ್ಯಾಪ್! : ಸಿನಿಮೀಯ ಶೈಲಿಯ ದೃಶ್ಯ ಈಗ ವೈರಲ್
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಆಗಿರುವ ಅಪೂರ್ವ ದೃಶ್ಯವಿದು. ಅಬ್ಬಿ ಎಂಬ ಮುದ್ದು ಕಂದಮ್ಮ ಆಟ ಆಡುತ್ತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ತನ್ನ ಆಟಿಕೆಗಳೊಂದಿಗೆ ಆಟ ಆಡುತ್ತಿರುವ ಈ ಕಂದಮ್ಮ ತನ್ನ ತಂದೆಯೊಂದಿಗೆ ಮಾತಿಗಿಳಿಯುತ್ತಾಳೆ. ಸ್ಪಷ್ಟವಾಗಿ ಈ ಪುಟಾಣಿ ಹೇಳುವ ಒಂದೊಂದು ಮಾತು ಕೂಡಾ ಒಂದೊಂದು ಮುತ್ತಿನಂತಿದೆ. `ಮುಂದೆ ಸಾಗಿರಿ, ನೀವು ಏನು ಮಾಡುತ್ತಿದ್ದೀರೋ ಅದನ್ನು ಮಾಡುತ್ತಿರಿ. ಬೇರೆಯವರು ನಿಮ್ಮನ್ನು ಹಿಂದಿಕ್ಕಲು ಬಿಡಬೇಡಿ. ಪ್ರಯತ್ನ ಮುಂದುವರಿಸಿ, ಜನರು ಏನು ಹೇಳುತ್ತಾರೆಂದು ಯೋಚಿಸಬೇಡಿ. ನೀವು ಮಾಡುತ್ತಿರುವುದನ್ನು ಮಾಡಿ' ಎಂಬುದು ಈ ಪುಟಾಣಿಯ ಸ್ಪಷ್ಟನುಡಿ.

ಹುಲಿಗಳಿದ್ದ ಆವರಣದಲ್ಲಿ ಭಯವಿಲ್ಲದೆ ಹಾಯಾಗಿ ಮಲಗಿದ್ದ ಶ್ವಾನ : ಅಚ್ಚರಿ ಮೂಡಿಸುತ್ತದೆ ಈ ಅದ್ಭುತ ಗೆಳೆತನ
ಪುತ್ರಿಯ ಮಾತು ತಂದೆಗೂ ಇಷ್ಟವಾಗುತ್ತದೆ ಮತ್ತು ತಂದೆ ಕೂಡಾ ಇದಕ್ಕೆ ದನಿಗೂಡಿಸುತ್ತಾರೆ. `ತುಂಬಾ ಒಳ್ಳೆಯ ಸಲಹೆ. ಬೇರೆಯವರ ಬಗ್ಗೆ ಚಿಂತಿಸಬೇಡಿ. ನೀವು ಏನು ಮಾಡುತ್ತಿದ್ದೀರೋ ಅದನ್ನು ಮಾಡಿ' ಎಂದು ತಂದೆ ಹೇಳುವುದು ಕೂಡಾ ಈ ವಿಡಿಯೋದಲ್ಲಿ ಕೇಳಿಸುತ್ತದೆ.

View this post on Instagram A post shared by Abby (@alongcameabby)

ವ್ಹಾವ್... ಶರವೇಗದಲ್ಲಿ ಬೃಹತ್ ಗೋಡೆಯೇರುವ ಜಾಣ ಶ್ವಾನ: ಮತ್ತೆ ಮತ್ತೆ ನೋಡಬೇಕೆನಿಸುವ ದೃಶ್ಯವಿದು
ಅಬ್ಬಿಯ ಹೆಸರಿನಲ್ಲಿರುವ alongcameabby ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಅಬ್ಬಿಯ ತಂದೆಯೇ ಈ ಪುಟವನ್ನು ನಿರ್ವಹಿಸುತ್ತಿದ್ದಾರೆ. ಸಾಕಷ್ಟು ಜನ ಫಾಲೋವರ್‌ಗಳನ್ನೂ ಈ ಪುಟ ಹೊಂದಿದೆ. ಸಹಜವಾಗಿಯೇ ಈ ವಿಡಿಯೋ ಈಗ ಎಲ್ಲರ ಹೃದಯ ಗೆದ್ದಿದೆ. ಕಂದನ ಮಾತು ಎಲ್ಲರ ಜೀವನಕ್ಕೂ ಸ್ಫೂರ್ತಿಯಾಗಿದೆ. ಹೀಗಾಗಿ, ಎಲ್ಲರೂ ಈ ವಿಡಿಯೋವನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ