ಆ್ಯಪ್ನಗರ

`ಏಳಮ್ಮ ಮುದ್ದು ಚಿಟ್ಟೆ' : ಕಂದನನ್ನು ಎಬ್ಬಿಸುವ ತಂದೆಯ ಅದ್ಭುತ ಟೆಕ್ನಿಕ್‌ಗೆ ಎಲ್ಲರೂ ಫಿದಾ

ಇದೊಂದು ಅದ್ಭುತ ವಿಡಿಯೋ. ಈ ವೈರಲ್ ವಿಡಿಯೋವನ್ನು ನೋಡಿದ ತಕ್ಷಣ ಎಲ್ಲರ ಮೊಗದಲ್ಲೊಂದು ಸುಂದರ ನಗುವರಳುವುದು ಪಕ್ಕಾ...

Vijaya Karnataka Web 18 Nov 2020, 9:03 am
ಪುಟ್ಟ ಕಂದಮ್ಮಗಳನ್ನು ನೋಡುವುದೇ ಒಂದು ಖುಷಿ... ಆಗಷ್ಟೇ ಜಗತ್ತನ್ನು ಕುತೂಹಲದಿಂದ ನೋಡುವ ಈ ಪುಟಾಣಿಗಳ ಒಂದೊಂದು ಹಾವಭಾವವೂ ಅದ್ಭುತ... ಪುಟಾಣಿಗಳು ಪಕ್ಕದಲ್ಲಿದ್ದರೆ ಬೇರೆ ಸ್ವರ್ಗವೇ ಬೇಡ. ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಇಂತಹ ಮುದ್ದು ಮಕ್ಕಳ ಮನಸೆಳೆಯುವ ವಿಡಿಯೋಗಳು ಸದಾ ಕಾಣಸಿಗುತ್ತವೆ. ನೋಡಿದ ತಕ್ಷಣ ಸೂಜಿಗಲ್ಲಿನಂತೆ ಎಲ್ಲರನ್ನೂ ಆಕರ್ಷಿಸುವ ಈ ಸೊಬಗಿನ ದೃಶ್ಯಗಳು ಒಂದು ಕ್ಷಣ ನಮ್ಮನ್ನು ನಾವೇ ಮರೆಸುವಂತೆ ಮಾಡುತ್ತದೆ, ಹೊಸ ಜಗತ್ತನ್ನು ನಮ್ಮೆದುರು ತೆರೆದಂತೆ ಕಾಣುತ್ತದೆ. ಅಂತೆಯೇ, ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಕೂಡಾ ಅದ್ಭುತ ಖುಷಿಯನ್ನು ನೀಡುವಂತಿದೆ.
Vijaya Karnataka Web baby
| Screengrab from video | Courtesy : instagram/cezmikalorifer/


ಇದು ತಂದೆಯೊಬ್ಬರು ತಮ್ಮ ಪುಟ್ಟ ಮಗುವನ್ನು ಎಬ್ಬಿಸುವ ಹೃದಯಂಗಮ ದೃಶ್ಯ. ಮಕ್ಕಳನ್ನು ನಿದ್ದೆಯಿಂದ ಎಬ್ಬಿಸಬಾರದು. ಆದರೆ, ಕೆಲವೊಮ್ಮೆ ಪುಟಾಣಿಗಳು ಎಚ್ಚರವಾಗಿದ್ದರೂ ಏಳುವುದಕ್ಕೆ ಕೇಳುವುದಿಲ್ಲ ಅಥವಾ ದಿಢೀರನೇ ಎಬ್ಬಿಸಿದಾಗ ಪುಟಾಣಿಗಳು ಅಳುವುದಕ್ಕೆ ಆರಂಭಿಸುತ್ತಾರೆ. ಮಕ್ಕಳು ಅತ್ತರೆ ಕೆಲವೊಮ್ಮೆ ಸಮಾಧಾನ ಮಾಡುವುದು ಕೂಡಾ ತುಂಬಾ ಕಷ್ಟ. ಆದರೆ, ಈ ಕ್ಲಿಪ್ ನೋಡಿದಾಗ ಮಕ್ಕಳನ್ನು ಖುಷಿ ಖುಷಿಯಾಗಿ ಎಬ್ಬಿಸುವುದು ಬಲು ಸುಲಭ ಎಂದೆನಿಸುತ್ತದೆ.

Also Read : ಆಟದ ಗಾಡಿಯಲ್ಲಿ ತಂದೆಯ ವಾಹನ ಎಳೆಯುವ ಮಗು : ವೈರಲ್ ವಿಡಿಯೋದ ಬಗ್ಗೆ ಪರ ವಿರೋಧ ಚರ್ಚೆ

ಮುದ್ದು ಕಂದ ಹಾಸಿಗೆಯಲ್ಲಿ ಮಲಗಿರುವ ದೃಶ್ಯದಿಂದ ಈ ಕ್ಲಿಪ್ ಶುರುವಾಗುತ್ತದೆ. ಹಿಂದಿನಿಂದ ಬರುವ ತಂದೆ ತನ್ನ ಮುದ್ದಾದ ಮಗಳನ್ನು ಎಬ್ಬಿಸಲು ನೋಡುತ್ತಾರೆ. ಆದರೆ, ಪುಟಾಣಿಗೆ ಏಳುವ ಮನಸ್ಸಿಲ್ಲ. ಹೀಗಾಗಿ, ತಂದೆ ಕಂದ ಮಲಗಿರುವ ತಲೆದಿಂಬನ್ನು ಮೆಲ್ಲನ್ನೆ ಅಲ್ಲಾಡಿಸುತ್ತಾ ಮೇಲೆತ್ತುತ್ತಾರೆ... ಆ ದೃಶ್ಯವೇ ಸುಂದರ... ಸೊಬಗಿನ ಚಿಟ್ಟೆಯೊಂದು ಕಣ್ಣೆದುರು ಹಾರಿದಂತೆ ಕಾಣುವ ಅಪೂರ್ವ ದೃಶ್ಯವದು...

View this post on Instagram A post shared by @cezmikalorifer

Also Read : 23,000 ಅಡಿ ಎತ್ತರದಲ್ಲಿರುವಾಗ ಕಾಕ್‌ಪಿಟ್ ಹೊರಗೆ ಸಿಲುಕಿಕೊಂಡಿದ್ದ ಪೈಲಟ್: 30 ವರ್ಷ ಹಿಂದಿನ ಘಟನೆಗೆ ಮತ್ತೆ ಜೀವ!

ಈ ಪುಟಾಣಿಯೂ ತಂದೆಯ ಟೆಕ್ನಿಕ್‌ ಅನ್ನು ಎಂಜಾಯ್ ಮಾಡುತ್ತಿದ್ದಳು. ಅಪ್ಪ ತನ್ನನ್ನು ಚಿಟ್ಟೆಯಂತೆ ಮೇಲೆತ್ತುತ್ತಿದ್ದಂತೆಯೇ ಮಗುವಿನ ಮೊಗದಲ್ಲಿ ಅರಳಿದ ನಗುವನ್ನು ಬರೀ ಪದದಲ್ಲಿ ಕಟ್ಟಿ ಕೊಡಲು ಸಾಧ್ಯವೇ ಇಲ್ಲ... ಅಷ್ಟು ಸೊಬಗಿನ ನೋಟವದು...

Also Read : ಈ ಎರಡು ವರ್ಷದ ಪಾರಿವಾಳದ ಬೆಲೆ 1.9 ಮಿಲಿಯನ್ ಯುಎಸ್ ಡಾಲರ್...!

17 ಸೆಕೆಂಡುಗಳ ವಿಡಿಯೋ ಕ್ಲಿಪ್ ಇದು. ಆರಂಭದಲ್ಲಿ ಈ ವಿಡಿಯೋ ಟಿಕ್‌ಟಾಕ್‌ನಲ್ಲಿ @cazmerazzzzzzz ಎಂಬ ಖಾತೆಯಲ್ಲಿ ಅಪ್ಲೋಡ್ ಆಗಿತ್ತು. ಇದೀಗ ಇದೇ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವೈರಲ್ ಆಗುತ್ತಿದೆ. ಈ ಸೊಬಗಿನ ದೃಶ್ಯಕ್ಕೆ ಎಲ್ಲರೂ ಮೈಮರೆತಿದ್ದಾರೆ. ಬಹುಶಃ ನೀವು ಕೂಡಾ ಕಂದನ ಖುಷಿಗೆ ಮನಸೋತಿರಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ