ಆ್ಯಪ್ನಗರ

ತಂದೆಗೆ ಸ್ಕೇಟಿಂಗ್ ಕಲಿಸುವ ಪುಟ್ಟ ಮಗಳು : ಮುದ್ದಾದ ವಿಡಿಯೋಗೆ ನೀವೆಷ್ಟು ಮಾರ್ಕ್ಸ್‌ ಕೊಡ್ತೀರಿ...?

ಮುದ್ದು ಮಗಳು ತನ್ನ ತಂದೆಗೆ ಸ್ಕೇಟಿಂಗ್ ಕಲಿಸಿಕೊಡುವ ಅಪೂರ್ವ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ನೋಡಿದ ಎಲ್ಲರೂ ಈ ಸೊಬಗಿನ ದೃಶ್ಯಕ್ಕೆ ಫಿದಾ ಆಗಿದ್ದಾರೆ.

Vijaya Karnataka Web 7 Sep 2020, 2:43 pm
ಮಕ್ಕಳಿಗೆ ತಂದೆಯೇ ಹೀರೋ. ತಂದೆಗೆ ಮಕ್ಕಳೇ ಆಸ್ತಿ. ಈ ಸಂಬಂಧವೇ ಅದ್ಭುತ. ಈ ಬಾಂಧವ್ಯಕ್ಕೆ ಯಾವತ್ತೂ ಬೆಲೆ ಕಟ್ಟಲಾಗದು. ನಿಷ್ಕಲ್ಮಶ, ನಿಸ್ವಾರ್ಥ ಈ ಪ್ರೀತಿ ದೇವರಿಗೆ ಸಮಾನ. ಎಲ್ಲ ಹೆತ್ತವರೂ ತಮ್ಮ ಮಕ್ಕಳೊಂದಿಗೆ ಆಟ ಆಡುತ್ತಾ ಕಾಲ ಕಳೆಯಲು ಇಷ್ಟಪಡುತ್ತಾರೆ. ಪುಟ್ಟ ಮಕ್ಕಳೊಂದಿಗೆ ಆಡುವ ಖುಷಿಯೇ ಬೇರೆ. ಮನಸ್ಸಿನಲ್ಲಿ ಸಣ್ಣ ನೋವಿದ್ದರೂ ಈ ನೋವೆಲ್ಲಾ ಮಕ್ಕಳೊಂದಿಗೆ ಆಟವಾಡುವಾಗ ಮಾಯವಾಗಿ ಹೋಗುತ್ತದೆ. ಬರೀ ಆಡುವಾಗ ಮಾತ್ರವಲ್ಲ, ಇಂತಹ ಸುಂದರ ಆಟವನ್ನು ನೋಡುವಾಗಲೂ ನಾವು ನಮ್ಮನ್ನು ನಾವೇ ಮರೆತು ಹೋಗುತ್ತೇವೆ... ಇದು ಕೂಡಾ ಅಂತಹದ್ದೇ ಒಂದು ದೃಶ್ಯ.
Vijaya Karnataka Web Adorable Video
| Screengrab from video | Courtesy : instagram/h.n.brennan/


ಇಲ್ಲಿ ಪುಟ್ಟ ಮಗಳು ತನ್ನ ತಂದೆಗೆ ಸ್ಕೇಟಿಂಗ್ ಕಲಿಸಿದ್ದಾಳೆ. ಬಿದ್ದು, ಎದ್ದು ಆಡುವ ಈ ಕಂದನ ಸೊಬಗನ್ನು ನೋಡುವುದೇ ಒಂದು ಖುಷಿ. ಹೀಥರ್ ಬ್ರೆನ್ನನ್ ಎಂಬವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಅಪೂರ್ವ ದೃಶ್ಯವನ್ನು ಶೇರ್ ಮಾಡಿಕೊಂಡಿದ್ದಾರೆ. ಹೀಥರ್ ಅವರ ಪುತ್ರಿ ಪೆಟ್ರಾ ಲೆನಾಕ್ಸ್ ತನ್ನ ತಂದೆಗೆ ಸ್ಕೇಟ್ಬೋರ್ಡ್‌ನಲ್ಲಿ ನಿಂತು ಹೇಗೆ ಸಾಗಬೇಕು ಎಂದು ಹೇಳಿಕೊಡುವ ಈ ದೃಶ್ಯವನ್ನು ನೋಡುವಾಗಲೇ ಮನಸ್ಸಿಗೆ ಆನಂದವಾಗುತ್ತದೆ.

Also Read : ಇಷ್ಟು ಚಿಕ್ಕ ಜಾಗದಲ್ಲಿ ಇನ್ನೋವಾ ಕಾರು ಪಾರ್ಕ್ ಮಾಡಿದ್ದೇಗೆ ? : ಇದು ಅಚ್ಚರಿಯ ವಿಡಿಯೋ

ತನ್ನ ತಂದೆಗೆ ಕಲಿಸಿಕೊಡುವ ಸಲುವಾಗಿ ಈ ಪುಟಾಣಿ ಎಲ್ಲಾ ಕಡೆ ಓಡಾಡುತ್ತಿರುತ್ತಾಳೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾಳೆ. ಹೀಗೆ ಓಡಾಡುವ ವೇಳೆ ಒಂದೆರಡು ಸಲ ಬಿದ್ದದ್ದೂ ಇದೆ. ಆದರೆ, ತಾನು ಬಿದ್ದರೂ ಪೆಟ್ರಾ ತನ್ನ `ತರಬೇತಿ'ಯನ್ನು ಮುಂದುವರಿಸಿದ್ದಳು. ತಂದೆ ಕೂಡಾ ಮಗಳು ಹೇಳಿದಂತೆಯೇ ಮಾಡುತ್ತಾರೆ. ಬರೀ ಅಷ್ಟೇ ಅಲ್ಲ ಈ ಕಂದ ತನ್ನ ಮುದ್ದಾದ ಧ್ವನಿಯಲ್ಲಿ `ಡ್ಯಾಡಿ ಎಚ್ಚರ' ಎಂದು ಜಾಗರೂಕತೆಯಿಂದ ಇರುವಂತೆ ಹೇಳುವುದು ಕೂಡಾ ಖುಷಿಕೊಡುತ್ತದೆ. ತಂದೆಗೆ ನೋವಾಗದಂತೆ ಎಚ್ಚರಿಕೆ ವಹಿಸಿ ಕಲಿಸುವ ಈ ಕಂದನ ಖುಷಿ ನಿಜಕ್ಕೂ ಹಿತ ನೀಡುತ್ತದೆ. ಜೊತೆಗೆ, ತಂದೆಯ ಕಲಿಕೆಯನ್ನು ಕಂಡು ಈ ಪುಟಾಣಿ ಕುಣಿದಾಡುವ ದೃಶ್ಯವೂ ಮನಸೆಳೆಯುತ್ತದೆ.

Also Read : ತನ್ನ ಸಮಾಧಿ ಬಳಿ ಆಟವಾಡುತ್ತಿದೆಯಾ 2 ವರ್ಷದ ಕಂದನ ಆತ್ಮ? ಆ ತಾಯಿಗೆ ಕಾಣಿಸಿದ್ದೇನು?

View this post on Instagram 100% unscripted - Major toddler vibes headed your way @derekmichaelbrennan @keenramps A post shared by Heather Nyhart Brennan (@h.n.brennan) on Sep 2, 2020 at 8:10pm PDT

Also Read : Great Escape : ವ್ಯಕ್ತಿಯ ಸೈಕಲನ್ನು ಪುಡಿಗೈದ ಆನೆ : ಗಜರಾಜನಿಂದ ವ್ಯಕ್ತಿ ಪಾರಾಗಿದ್ದೇ ಪವಾಡ!

ಇಂತಹ ದೃಶ್ಯ ವೈರಲ್ ಆಗದೇ ಇರಲು ಸಾಧ್ಯನೇ...? ಎಲ್ಲರೂ ಈ ಸೊಬಗಿನ ದೃಶ್ಯಕ್ಕೆ ಫಿದಾ ಆಗಿದ್ದಾರೆ. ತಂದೆ ಮಗಳ ಈ ಮುದ್ದಾದ ಆಟ ಎಲ್ಲರ ಮನಸ್ಸಿಗೂ ಹಿತ ನೀಡಿದೆ. ಬಹುಶಃ ನೀವು ಕೂಡಾ ಈ ಸೊಬಗಿಗೆ ಮಾರು ಹೋಗಿರಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ