ಆ್ಯಪ್ನಗರ

ಕಿಂಡರ್‌ಗಾರ್ಡನ್ ಮಕ್ಕಳೊಂದಿಗೆ ಶಿಕ್ಷಕರೊಬ್ಬರ ಆನ್‌ಲೈನ್ ಡಾನ್ಸ್‌ : ಮನಸೆಳೆಯುವ ದೃಶ್ಯವಿದು

ಇದೊಂದು ಅದ್ಭುತ ದೃಶ್ಯ. ಈ ಶಿಕ್ಷಕ ತನ್ನ ಕಿಂಡರ್‌ಗಾರ್ಡನ್ ಮಕ್ಕಳೊಂದಿಗೆ ಡಾನ್ಸ್‌ ಮಾಡಿದ್ದಾರೆ. ಈ ದೃಶ್ಯವೇ ಅಪೂರ್ವವಾಗಿದೆ.

Vijaya Karnataka Web 24 Jan 2021, 6:35 pm
ಕೊರೊನಾ ವೈರಸ್ ಕಾಟ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ. ಪ್ರಮುಖವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಿದೆ. ಸಹಜವಾದ ತರಗತಿ ಶಿಕ್ಷಣದ ಬದಲಾಗಿ ಈಗ ಆನ್‌ಲೈನ್ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇದು ಅನಿವಾರ್ಯವೂ ಆಗಿದೆ. ಹೀಗಾಗಿ, ಕಳೆದ ವರ್ಷದಿಂದ ಆನ್‌ಲೈನ್ ಶಿಕ್ಷಣಕ್ಕೆ ಎಲ್ಲರೂ ಒಗ್ಗಿಕೊಂಡಿದ್ದಾರೆ. ಬಹುತೇಕ ಕಡೆಗಳಲ್ಲಿ ಶಿಕ್ಷಕರು ಕೂಡಾ ಬಲು ಉತ್ಸಾಹದಿಂದಲೇ ಈ ಹೊಸ ಬಗೆಯ ಪಾಠದ ಕ್ರಮದಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ಅಂತಹದ್ದೇ ಒಂದು ಹೃದಯಸ್ಪರ್ಶಿ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Vijaya Karnataka Web dance
| Screengrab from video | Courtesy : Kenneth Deshone Farr II/Facebook


Also Read : Cuteness Overloaded : ಎಲ್ಲವನ್ನೂ ಹ್ಯಾಂಡ್ ಸ್ಯಾನಿಟೈಸರ್ ಎಂದು ತಿಳಿದು ಕೈತೊಳೆಯುವ ಮುದ್ದು ಕಂದಮ್ಮ

ಇದು ಯುಎಸ್‌ನ ಶಿಕ್ಷಕರೊಬ್ಬರು ತಮ್ಮ ಕಿಂಡರ್‌ ಗಾರ್ಡನ್‌ನ ಮಕ್ಕಳೊಂದಿಗಿನ ಆನ್‌ಲೈನ್ ಸೆಷನ್ ವೇಳೆ ಡಾನ್ಸ್‌ ಮಾಡುತ್ತಾ ಚಿಣ್ಣರಲ್ಲಿ ಉತ್ಸಾಹ ತುಂಬಿದ ದೃಶ್ಯ. ಸದ್ಯ ಈ ವಿಡಿಯೋ ಎಲ್ಲರ ಹೃದಯ ಗೆದ್ದಿದೆ.

Also Read : ಒಡೆಯನ ಭೇಟಿಗೆ ಪ್ರತಿದಿನ ಆಸ್ಪತ್ರೆ ಎದುರು ಕಾಯುತ್ತಿದ್ದ ಮುದ್ದು ಶ್ವಾನ : ಈ ದೃಶ್ಯವೇ ಹೃದಯಸ್ಪರ್ಶಿ

ಜನಪ್ರಿಯ ಮಕ್ಕಳ ಹಾಡಿಗೆ ಈ ಶಿಕ್ಷಕ ಹೆಜ್ಜೆ ಹಾಕಿದ್ದಾರೆ. ತಮ್ಮ ಶಿಕ್ಷಕರೊಂದಿಗೆ ಮುದ್ದು ಪುಟಾಣಿಗಳೂ ಡಾನ್ಸ್‌ ಮಾಡಿದ್ದಾರೆ. ತಮ್ಮ ಮುದ್ದಾದ ವಿದ್ಯಾರ್ಥಿಗಳೊಂದಿಗೆ ಈ ಶಿಕ್ಷಕ ಖುಷಿಯಿಂದ ಡಾನ್ಸ್‌ ಮಾಡುವ ದೃಶ್ಯವನ್ನು ಅವರಿಗೇ ಗೊತ್ತಿಲ್ಲದಂತೆ ಕೋಣೆಯ ಹೊರಗಿನಿಂದ ಸೆರೆ ಹಿಡಿಯಲಾಗಿದೆ.


Also Read : ಹೆಪ್ಪುಗಟ್ಟಿದ ಕೆರೆಯಲ್ಲಿದ್ದ ಅಮಾಯಕ ಪ್ರಾಣಿಯ ಜೀವ ಉಳಿಸುವ ಸಾಹಸ : ಹೃದಯವಂತನಿಗೆ ಎಲ್ಲರ ಶಹಬ್ಬಾಸ್

ಯುಎಸ್‌ನ ವರ್ಜಿನಿಯಾದ ರಿಚ್ಮಂಡ್‌ನ ಸೇಂಟ್ ಡೇವಿಡ್ ಶಾಲೆಯ ಪ್ರಾಂಶುಪಾಲರಾದ ಕೆನ್ನೆತ್ ದೇಶೋನ್ ಫಾರ್ರ್ ಅವರ ದೃಶ್ಯವಿದು. ಟಿಕ್‌ಟಾಕ್‌ನಲ್ಲಿ ಅಪ್ಲೋಡ್ ಆಗಿದ್ದ ಈ ವಿಡಿಯೋ ರೆಡ್ಡಿಟ್, ಫೇಸ್‌ಬುಕ್, ಟ್ವಿಟ್ಟರ್‌, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಪ್ಲೋಡ್ ಆಗಿದೆ. ಹೀಗಾಗಿ, ಲಕ್ಷಾಂತರ ಜನ ಈ ವಿಡಿಯೋವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ಹೆಚ್ಚು ಮಾಡುವ ಶಿಕ್ಷಕರ ಈ ಉತ್ಸಾಹಕ್ಕೆ ಬಹುತೇಕ ಪೋಷಕರು ಶಹಬ್ಬಾಸ್ ಹೇಳಿದ್ದಾರೆ. ತಮ್ಮ ವಿಡಿಯೋ ವೈರಲ್ ಆದಂತೆ ಜನ ತೋರಿದ ಪ್ರೀತಿಗೆ ಕೆನ್ನೆತ್ ಧನ್ಯವಾದ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ