ಕೊರೊನಾ ವೈರಸ್ ಭೀತಿ ಇನ್ನೂ ಕಡಿಮೆಯಾಗಿಲ್ಲ. ಪ್ರಪಂಚದಾದ್ಯಂತ ಇನ್ನೂ ಜನ ಭಯದ ನೆರಳಿನಲ್ಲಿಯೇ ಬದುಕುತ್ತಿದ್ದಾರೆ. ಈ ರಕ್ಕಸ ವೈರಾಣುವಿನ ಅಬ್ಬರ ಶುರುವಾದ ಬಳಿಕ ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಕೊರೊನಾ ವಾರಿಯರ್ಸ್ ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ್ದಾರೆ. ವಿಶ್ರಾಂತಿಯೇ ಇಲ್ಲದೆ ಇವರೆಲ್ಲಾ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಈ ಸೇವೆಗೆ ಎಷ್ಟು ಕೃತಜ್ಞತೆ ಹೇಳಿದರೂ ಅದು ಕಡಿಮೆಯೇ. ಹೀಗೆ ನಿರಂತರ ಸೇವೆ ಸಲ್ಲಿಸುವ ಈ ಕೊರೊನಾ ವಾರಿಯರ್ಸ್ ತಮಗೆ ಸಿಗುವ ಬಿಡುವಿನ ಅಲ್ಪಸ್ವಲ್ಪ ಸಮಯದಲ್ಲಿ ಹಾಡು ಹೇಳಿ, ಡಾನ್ಸ್ ಮಾಡಿ ಸೋಂಕಿತರ ಮನಸ್ಸಿಗೂ ಖುಷಿ ಕೊಟ್ಟು, ತಾವೂ ಉಲ್ಲಾಸ ಅನುಭವಿಸುತ್ತಿದ್ದರು. ಈ ಹಾಡು, ನೃತ್ಯಗಳು ಇವರ ದಣಿವನ್ನು ಮರೆಸುತ್ತಿತ್ತು. ಇಂತಹ ಸಾಕಷ್ಟು ದೃಶ್ಯಗಳು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದೀಗ ಇಂತಹದ್ದೇ ಇನ್ನೊಂದು ಉಲ್ಲಾಸದಾಯಕ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ.
ಇದು ಆಂಬ್ಯುಲೆನ್ಸ್ ಚಾಲಕರೆಲ್ಲಾ ಒಟ್ಟಾಗಿ ಹಾಡು ಹೇಳಿ ದಣಿವು ನೀಗಿಸಿಕೊಂಡ ದೃಶ್ಯ. ಮಿಜೋರಾಂನಲ್ಲಿ ಐಜ್ವಾಲ್ನಲ್ಲಿ ಆಂಬ್ಯುಲೆನ್ಸ್ ಚಾಲಕರೆಲ್ಲಾ ಒಟ್ಟಾಗಿ ತಮ್ಮ ರಾತ್ರಿಪಾಳಿಯಲ್ಲಿ ಹಾಡು ಹೇಳಿ ಮನಸ್ಸಿಗೆ ಉಲ್ಲಾಸ ತಂದುಕೊಂಡಿದ್ದಾರೆ. ಕೊರೊನಾ ಅಬ್ಬರ ಶುರುವಾದ ಬಳಿಕ ಆಂಬ್ಯುಲೆನ್ಸ್ ಚಾಲಕರು ಕೂಡಾ ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸಿದ್ದಾರೆ. ಇಂತಹ ಚಾಲಕರು ತಮ್ಮ ದಣಿವನ್ನು ನೀಗಿಸಿಕೊಳ್ಳುವ ಜೊತೆಗೆ ತಮ್ಮ ಸಕಾರಾತ್ಮಕತೆಯನ್ನು ಹೆಚ್ಚು ಮಾಡುವ ಸಲುವಾಗಿ ಒಟ್ಟಾಗಿ ಸೇರಿ ಖುಷಿಪಟ್ಟಿದ್ದಾರೆ, ಸುಶ್ರಾವ್ಯವಾಗಿ ಹಾಡು ಹೇಳಿ ಆನಂದಿಸಿದ್ದಾರೆ.
ಸದ್ಯ ಈ ವಿಡಿಯೋವನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಗಿಟಾರ್ ಹಿಡಿದು ಎಲ್ಲರೂ ಜೊತೆಯಾಗಿ ಹಾಡುವ ದೃಶ್ಯವಿದೆ. ಈ ಮೂಲಕ ಇವರು ತಮ್ಮ ಒತ್ತಡ, ದಣಿವನ್ನು ನೀಗಿಸಿಕೊಂಡಿದ್ದಾರೆ. ಈ ದುಃಖವನ್ನು ಕೊನೆಗೊಳಿಸಿ ಎಂದು ದೇವರಲ್ಲಿ ಪ್ರಾರ್ಥಿಸುವ ಹಾಡು ಇದಾಗಿದೆ ಎಂದು ಈ ಪೋಸ್ಟ್ನ ಕ್ಯಾಪ್ಶನ್ನಲ್ಲಿ ಉಲ್ಲೇಖಿಸಲಾಗಿದೆ.
ಸಹಜವಾಗಿಯೇ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ. ವಿವಿಧ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಜೊತೆಗೆ, ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಕಷ್ಟಪಟ್ಟು ಕೆಲಸ ಮಾಡಿದ ಎಲ್ಲಾ ಆಂಬ್ಯುಲೆನ್ಸ್ ಚಾಲಕರ ಸೇವೆಯನ್ನು ನೆಟ್ಟಿಗರು ಶ್ಲಾಘಿಸಿದ್ದು, ಧನ್ಯವಾದ ಕೂಡಾ ಅರ್ಪಿಸಿದ್ದಾರೆ.