ಆ್ಯಪ್ನಗರ

ಈಡೇರಿತು ಸಿಂಹದ ಕನಸು! ಕ್ರಿಕೆಟ್ ಆಟದಲ್ಲಿ ಶ್ವಾನದ ಗಮ್ಮತ್ತು! : ಇಲ್ಲಿವೆ ಅದ್ಭುತ ವಿಡಿಯೋಗಳು

ಪ್ರಾಣಿಗಳ ಬಗೆಗಿನ ವಿಡಿಯೋ ಎಷ್ಟು ನೋಡಿದರೂ ಮನಸ್ಸಿಗೆ ಬೇಸರ ಆಗದು... ಇದು ಕೂಡಾ ಅಂತಹದ್ದೇ ಮನಸ್ಸಿಗೆ ಹಿತ ನೀಡುವ ಒಂದಷ್ಟು ವಿಡಿಯೋಗಳ ಗುಚ್ಛ...

Vijaya Karnataka Web 22 Feb 2020, 8:16 am
ಪ್ರಾಣಿಗಳ ಬಗೆಗಿನ ವಿಡಿಯೋ ಎಷ್ಟು ನೋಡಿದರೂ ಮನಸ್ಸಿಗೆ ಬೇಸರ ಆಗದು... ಇದು ಕೂಡಾ ಅಂತಹದ್ದೇ ಮನಸ್ಸಿಗೆ ಹಿತ ನೀಡುವ ಒಂದಷ್ಟು ವಿಡಿಯೋಗಳ ಗುಚ್ಛ...
Vijaya Karnataka Web animals best and funny viral video collection 2020
ಈಡೇರಿತು ಸಿಂಹದ ಕನಸು! ಕ್ರಿಕೆಟ್ ಆಟದಲ್ಲಿ ಶ್ವಾನದ ಗಮ್ಮತ್ತು! : ಇಲ್ಲಿವೆ ಅದ್ಭುತ ವಿಡಿಯೋಗಳು


ಸ್ವಾತಂತ್ರ್ಯದ ಕನಸು...!

| Representative image | Image by Robert Greene from Pixabay


ಸಿಂಹ ಕಾಡಿಗೆ ರಾಜ... ಆದರೆ, ಕಾಡಿನಲ್ಲಿದ್ದರಷ್ಟೇ ಇವನು ರಾಜ. ಅದೇ ಸೆರೆಯಾದರೆ ಅನುಭವಿಸಬೇಕಾಗುತ್ತದೆ ಸಂಕಷ್ಟ...! ಇವನು ಕೂಡಾ ಅದೇ ಸಂಕಷ್ಟದಲ್ಲಿದ್ದ ವನರಾಜ. ಹೀಗಾಗಿ, ಪ್ರತಿಕ್ಷಣವೂ ಸ್ವಾತಂತ್ರ್ಯದ ಕನಸು ಕಾಣುತ್ತಿದ್ದ. ಆದರೆ, ಬಂಧನದ ಬೇಡಿಯಿಂದ ತಪ್ಪಿಸಿಕೊಳ್ಳಲು ಇವನಿಂದ ಸಾಧ್ಯವಾಗಿರಲಿಲ್ಲ. ಕಾರಣ ಇವನು ಸರ್ಕಸ್ ಕಂಪನಿಯ ಕಬ್ಬಿಣದ ಪಂಜರದಲ್ಲಿದ್ದ. ಒಂದಲ್ಲ ಎರಡಲ್ಲ ಬರೋಬ್ಬರಿ 13 ವರ್ಷದ ನರಕಯಾತನೆಯದು. ತನ್ನ ವೇದನೆಯನ್ನು ತನ್ನೊಡನೇ ಬಚ್ಚಿಟ್ಟು ಬೇಯುತ್ತಿದ್ದ ಈ ಸಿಂಹರಾಜ. ಆದರೆ, ಈಗ ಬಂಧನದಿಂದ ಇವನಿಗೆ ಮುಕ್ತಿ ಸಿಕ್ಕಿದೆ. ಆ ಖುಷಿಯ ವಿಡಿಯೋನೇ ಇದು. ಸರ್ಕಸ್ ಕಂಪನಿಯಲ್ಲಿದ್ದ ಸಿಂಹವೊಂದು ಸ್ವಚ್ಛಂದವಾಗಿ ಮಣ್ಣಿನಲ್ಲಿ ಆಟವಾಡುವ ದೃಶ್ಯವಿದು. 13 ವರ್ಷಗಳ ಬಳಿಕ ತನ್ನ ಮುಕ್ತ ಪರಿಸರದಲ್ಲಿ ಈ ಹುಲಿ ಈ ಖುಷಿ ಅನುಭವಿಸುತ್ತಿದೆ ಎಂದು ಈ ವಿಡಿಯೋ ಶೇರ್ ಮಾಡಿರುವ ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ತಮ್ಮ ಟ್ವಿಟ್ಟರ್ ಪೋಸ್ಟಿನಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದಾಗ ನಿಜಕ್ಕೂ ಮನಸ್ಸು ಭಾರವಾಗುತ್ತದೆ.


Also Read : ತಾನು ನುಗ್ಗಿದ್ದು ಮಾಜಿ ಸೇನಾಧಿಕಾರಿಯ ಮನೆಗೆಂದು ಗೊತ್ತಾಗಿ ಕಳ್ಳ ಮಾಡಿದ್ದೇನು ಗೊತ್ತಾ?

Twitter-Susanta Nanda IFS

ಏ ಇದು ನಮ್ಮ ಕೋಟೆ ಕಣೋ...

| Screengrab from video |


ಸಫಾರಿಯ ಖುಷಿಯೇ ಬೇರೆ... ಚಲಿಸುವ ವಾಹನದಲ್ಲಿ ಕುಳಿತ ಪ್ರವಾಸಿಗರಿಗೆ ಕಾಡಿನ ಮಧ್ಯೆ ಸ್ವಚ್ಛಂದವಾಗಿ ಓಡಾಡುವ ವನ್ಯಮೃಗಗಳನ್ನು ನೋಡುವುದು ಕಣ್ಣಿಗೆ ಹಬ್ಬ. ಆದರೆ, ಇದೇ ವನ್ಯಜೀವಿಗಳು ಹತ್ತಿರಕ್ಕೆ ಬಂದರಂತೂ ಎದೆಯೇ ಝಲ್ ಎನ್ನುತ್ತದೆ. ಇದು ಕೂಡಾ ಅಂತಹದ್ದೇ ವಿಡಿಯೋ. ಸುಸಂತ ನಂದ ಅವರು ದಾರಿ ಮಧ್ಯೆ ಹುಲಿಯ ಕುಟುಂಬ ವಿಹರಿಸುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಹುಲಿಗಳು ಅಲ್ಲೇ ಓಡಾಡುತ್ತಿದ್ದುದರಿಂದ ಪ್ರವಾಸಿಗರು ಮಾರ್ಗದ ಎರಡೂ ಬದಿಯಲ್ಲೇ ಸ್ವಲ್ಪ ಹೊತ್ತು ನಿಲ್ಲಬೇಕಾಗಿತ್ತು. ಬಹುಶಃ ಸದಾ ವಾಹನಗಳನ್ನು ಕಂಡು ಅಭ್ಯಾಸವಿದ್ದ ಹುಲಿಗಳು ಯಾವುದೇ ಅಪಾಯ ಮಾಡದೆ ಅಲ್ಲೇ ಸ್ವಲ್ಪ ಹೊತ್ತು ಇದ್ದು ತಮ್ಮಷ್ಟಕ್ಕೆ ಹೋಗಿವೆ. ಆದರೆ, ಯಾವುದೇ ಸಂದರ್ಭದಲ್ಲಿ 500 ಮೀಟರ್ ದೂರ ಕಾಯ್ದುಕೊಳ್ಳಬೇಕು ಎಂಬುದು ಎನ್‌ಟಿಸಿಎ ಮಾರ್ಗಸೂಚಿಗಳು ಸ್ಪಷ್ಟವಾಗಿ ಹೇಳುತ್ತವೆ. ಹೀಗಾಗಿ, ಸಫಾರಿ ಹೋದ ಸಂದರ್ಭದಲ್ಲಿ ಪ್ರಾಣಿಗಳಿಂದ ಅಂತರ ಕಾಯ್ದುಕೊಳ್ಳಿ ಎಂದೂ ಸುಸಂತ ನಂದ ಮನವಿ ಮಾಡಿಕೊಂಡಿದ್ದಾರೆ.


Also Read : ಆಹ್ಲಾದ ನೀಡುವ ಪಾರ್ಕ್‌ನಲ್ಲೂ ಇದೆಯಂತೆ ದೆವ್ವಗಳ ಸಂಚಾರ...!

Twitter-Susanta Nanda IFS

ಈ ಪ್ರೀತಿಗೆ ಬೆಲೆ ಕಟ್ಟಲಾದೀತೇ...?

| Screengrab from video |


ಪ್ರಾಣಿಗಳ ಪ್ರೀತಿ ನಿಷ್ಕಲ್ಮಷವಾಗಿದ್ದು. ಅದರಲ್ಲಿ ಯಾವುದೇ ಕಪಟ, ಸ್ವಾರ್ಥ ಇರದು. ಇದೇ ಕಾರಣಕ್ಕೆ ಮುಗ್ಧ ಪ್ರಾಣಿಗಳೊಂದಿಗೆ ಕಳೆಯುವ ಒಂದೊಂದು ಕ್ಷಣವೂ ಮನಸ್ಸಿಗೆ ಹಿತವೆನಿಸುತ್ತದೆ. ಇದು ಕೂಡಾ ಅಂತಹದ್ದೇ ಪ್ರೀತಿಯ ವಿಡಿಯೋ. ಈ ವಿಡಿಯೋದ ಬಗ್ಗೆ ವಿವರಣೆಯೇ ಬೇಡ. ಈ ಕೋತಿ ತನ್ನ ಪ್ರೀತಿಪಾತ್ರ ಮನುಷ್ಯನನ್ನು ಅದೆಷ್ಟು ಮುತುವರ್ಜಿಯಿಂದ ಕರೆದೊಯ್ಯುತ್ತದೆ. ಅದೆಷ್ಟು ಸ್ನೇಹದಿಂದ ವರ್ತಿಸುತ್ತದೆ ಎಂದು ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ... ಖಂಡಿತಾ ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ...!


Also Read : ಹಾಲಿವುಡ್ ಇತಿಹಾಸದಲ್ಲೇ 73 ವರ್ಷದಿಂದ ನಿಗೂಢವಾಗಿಯೇ ಉಳಿದ ನಟಿಯೊಬ್ಬಳ ಕೊಲೆ ಕೇಸ್...!

Twitter-Susanta Nanda IFS

ಇಂತಹ ಬೆಸ್ಟ್‌ ಫೀಲ್ಡರನ್ನು ನೋಡಿರಲಿಕ್ಕಿಲ್ಲ...!

Image by Couleur from Pixabay.jpg


ಈ ಮುದ್ದು ಮುದ್ದು ವಿಡಿಯೋ ಯಾರನ್ನೂ ಸೆಳೆಯದೇ ಇರದು. ಖ್ಯಾತ ನಟಿ, ನಿರೂಪಕಿ ಸಿಮಿ ಗೆರೆವಾಲ್ಶೇರ್ ಮಾಡಿರುವ ವಿಡಿಯೋ ಇದು. ಶ್ವಾನವೊಂದು ಮಕ್ಕಳೊಂದಿಗೆ ಸೇರಿ ಕ್ರಿಕೆಟ್ ಆಡುವ ಈ ವಿಡಿಯೋ ಸದ್ಯ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿದೆ. ಈ ಮುದ್ದು ಶ್ವಾನ ಮೊದಲು ಓಡಿ ಬಂದು ವಿಕೆಟ್ ಹಿಂದೆ ನಿಲ್ಲುತ್ತದೆ. ನಂತರ ಬಾಲ್ ಹಿಡಿದುಕೊಂಡು ಬರುವುದಕ್ಕೂ ಓಡುತ್ತದೆ. ಸುಮಾರು 45 ಸೆಕೆಂಡಿನ ಈ ಫನ್ನಿ ವಿಡಿಯೋ ಈಗ ಎಲ್ಲರಿಗೂ ಇಷ್ಟವಾಗಿದೆ. ಜೊತೆಗೆ, ನೆಟ್ಟಿಗರು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

Twitter-Simi Garewal

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ