ಆ್ಯಪ್ನಗರ

ಅಡುಗೆ ಕೋಣೆಯ ಸಿಂಕ್‌ನಲ್ಲಿ ಹಕ್ಕಿಯ ಸ್ನಾನ...! : ಯಾವತ್ತಾದರೂ ನೋಡಿದ್ದೀರಾ ಇಂತಹ ದೃಶ್ಯ...?

55 ಸೆಕೆಂಡುಗಳ ಈ ವಿಡಿಯೋ ಈಗ ಎಲ್ಲರ ಮನಗೆದ್ದಿದೆ. ಸುಂದರ ಹಕ್ಕಿಯ ಈ ಖುಷಿಯನ್ನು ಕಂಡು ನೆಟ್ಟಿಗರೂ ಖುಷಿ ವ್ಯಕ್ತಪಡಿಸಿದ್ದಾರೆ.

Vijaya Karnataka Web 18 Sep 2020, 10:38 am
ಹಕ್ಕಿಗಳನ್ನು ನೋಡುವ ಖುಷಿಯೇ ಬೇರೆ. ಈ ಸೊಬಗನ್ನು ಸವಿಯುವಲ್ಲಿ ವಯಸ್ಸಿನ ಭೇದವಿಲ್ಲ. ಹಿರಿಯರು, ಕಿರಿಯರು ಎಲ್ಲರೂ ಹಕ್ಕಿಗಳ ಸೊಬಗಿನ ನೋಟಕ್ಕೆ ಖಂಡಿತಾ ಫಿದಾ ಆಗುತ್ತಾರೆ. ಅದರಲ್ಲೂ ಮನೆ ಪಕ್ಕ ಯಾವುದಾದರೂ ಹಕ್ಕಿ ಬಂದರೆ ಒಂದು ಕ್ಷಣವಾದರೂ ಅವುಗಳನ್ನು ಕುತೂಹಲದಿಂದ ನೋಡದೆ ಯಾರೂ ಇರುವುದಿಲ್ಲ. ಅಂತಹದರಲ್ಲಿ ಸುಂದರ ಹಕ್ಕಿಯೊಂದು ಮನೆಯೊಳಗೇ ಬಂದರೆ...? ಖಂಡಿತಾ ಈ ದೃಶ್ಯವನ್ನು ನೋಡಲು ಖುಷಿಯಾಗುತ್ತದೆ. ಸದ್ಯ ಇಂತಹದ್ದೇ ಖುಷಿಯ ವಿಡಿಯೋವೊಂದು ವೈರಲ್ ಆಗುತ್ತಿದೆ.
Vijaya Karnataka Web bird
| Screengrab from video | Courtesy : @welcomet0nature/Twitter


ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಅಥವಾ ನೀರಿದ್ದ ಕಡೆಗಳಲ್ಲಿ ಆಗಾಗ ಹಕ್ಕಿಗಳು ಮುಳುಗೆದ್ದು ಸ್ನಾನ ಮಾಡುವ ದೃಶ್ಯಗಳು ಕಾಣಸಿಗುತ್ತವೆ. ಆದರೆ, ಎಂದಾದರೂ ಮನೆಯೊಳಗಿನ ಸಿಂಕ್‌ನಲ್ಲಿ ಹಕ್ಕಿಗಳು ಸ್ನಾನ ಮಾಡುವುದನ್ನು ನೋಡಿದ್ದೀರಾ...? ಬಹುಶಃ ಇರಲಿಕ್ಕಿಲ್ಲ. ಆದರೆ, ಸದ್ಯ ಹಕ್ಕಿಯೊಂದು ಮನೆಯ ಅಡುಗೆ ಕೋಣೆಯ ಸಿಂಕ್‌ನಲ್ಲಿ ಸ್ನಾನ ಮಾಡುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ದೃಶ್ಯವನ್ನು ನೆಟ್ಟಿಗರು ಬಲು ಕುತೂಹಲದಿಂದಲೇ ವೀಕ್ಷಿಸುತ್ತಿದ್ದಾರೆ.

Also Read : ಶ್ರವಣ ಸಾಧನದಿಂದ ಮೊದಲ ಬಾರಿಗೆ ಶಬ್ದವನ್ನು ಆಲಿಸಿದ ಕಂದ : ಪುಟಾಣಿಯ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

`ವೆಲ್ಕಮ್ ಟು ನೇಚರ್' ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ಅಪೂರ್ವ ವಿಡಿಯೋ ಅಪ್ಲೋಡ್ ಆಗಿದೆ. 55 ಸೆಕೆಂಡುಗಳ ಈ ಕ್ಲಿಪ್‌ನಲ್ಲಿ ನಲ್ಲಿಯ ನೀರು ಬೀಳುತ್ತಿದ್ದಂತೆಯೇ ಅದಕ್ಕೆ ಮೈಯೊಡ್ಡಿ ಸುಂದರ ಹಕ್ಕಿಯೊಂದು ಖುಷಿ ಖುಷಿಯಾಗಿ ಸ್ನಾನ ಮಾಡುವ ದೃಶ್ಯವಿದೆ. ಈ ಹಕ್ಕಿಯ ಈ ಸಡಗರವನ್ನು ನೋಡುವುದೇ ಒಂದು ಖುಷಿ.

Also Read : ಹಮ್ಮಿಂಗ್ ಬರ್ಡ್‌ ತನ್ನ ಮೇಲೆ ಕುಳಿತುಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದ ಸಾಧಕ...!

Also Read : 91 ವರ್ಷವಾದರೂ ಬತ್ತದ ಉತ್ಸಾಹ: ಹಿರಿಯ ಪ್ರೊಫೆಸರ್ ಆನ್‌ಲೈನ್ ಪಾಠ ಮಾಡುವ ಫೋಟೋ ವೈರಲ್

ಇಂತಹ ಸೊಬಗಿನ ದೃಶ್ಯ ವೈರಲ್ ಆಗದೇ ಇರುವುದೇ...? ಅಪ್ಲೋಡ್ ಆದ ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ಸಾವಿರಾರು ಜನರ ಗಮನ ಸೆಳೆದಿದೆ. ಎಲ್ಲರೂ ಈ ಅದ್ಭುತ ದೃಶ್ಯವನ್ನು ಅಚ್ಚರಿ ಮತ್ತು ಅಷ್ಟೇ ಖುಷಿಯಿಂದ ನೋಡಿ ಸಂಭ್ರಮಿಸಿದ್ದಾರೆ. ಯಾಕೆಂದರೆ, ಬಹುತೇಕರಿಗೆ ಹಕ್ಕಿ ಹೀಗೆ ಅಡುಗೆ ಕೋಣೆಯ ಸಿಂಕ್‌ನಲ್ಲಿ ಸ್ನಾನ ಮಾಡುವ ದೃಶ್ಯ ಹೊಸತು. ಸ್ವಚ್ಛಂದ ಪರಿಸರದಲ್ಲಿ, ಕೆರೆ ಕೊಳಗಳಲ್ಲಿ ಇಂತಹ ದೃಶ್ಯವನ್ನು ನೋಡಿದ್ದವರು ಕೂಡಾ ಇದನ್ನು ನೋಡಿ ಬೆರಗುಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ