ಆ್ಯಪ್ನಗರ

ವ್ಹಾವ್... ನಾಟ್ಯದಲ್ಲೇ ಮನಗೆಲ್ಲುತ್ತಿದ್ದ ನವಿಲು ಹಾರುವುದನ್ನು ನೋಡಿದ್ದೀರಾ...?

ನವಿಲೊಂದು ನೆಲದಿಂದ ಮರಕ್ಕೆ ಚಂಗನೆ ನೆಗೆಯುವ ಅದ್ಭುತ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಎಲ್ಲರೂ ಫಿದಾ ಆಗಿದ್ದಾರೆ.

Vijaya Karnataka Web 4 May 2020, 7:52 pm
ನಾಟ್ಯಕ್ಕೆ ಮತ್ತೊಂದು ಹೆಸರೇ ನವಿಲು. ಮಯೂರ ಗರಿಬಿಚ್ಚಿ ಕುಣಿಯುತ್ತದೆ ಎಂದರೆ ಅದನ್ನು ನೋಡುವುದು ಕಣ್ಣಿಗೊಂದು ಹಬ್ಬದಂತೆ... ನವಿಲು ಕುಣಿಯುವ ದೃಶ್ಯ ಸಾಮಾನ್ಯವಾಗಿ ಎಲ್ಲಾ ಕಡೆ ಕಾಣಸಿಗುತ್ತದೆ. ಆದರೆ, ತನ್ನ ಮನಮೋಹಕ ನಾಟ್ಯದಿಂದಲೇ ಸೆಳೆಯುವ ಈ ನವಿಲುಗಳು ಹಾರುವುದು ಕಾಣಸಿಗುವುದು ಅಪರೂಪ. ನವಿಲುಗಳು ಹಾರಿದರೂ ಈ ಹಾರಾಟದ ಅಂತರ ತುಂಬಾ ಕಡಿಮೆ ಇರುತ್ತದೆ. ಇತರ ಹಕ್ಕಿಗಳಂತೆ ನವಿಲುಗಳು ತುಂಬಾ ದೂರ ಹಾರುವುದಿಲ್ಲ. ಇದೇ ಕಾರಣಕ್ಕೆ ನವಿಲುಗಳು ಹಾರುವ ದೃಶ್ಯ ಅಪರೂಪಕ್ಕೊಮ್ಮೆ ಕಾಣಸಿಗುತ್ತದೆ. ಸದ್ಯ ನವಿಲೊಂದು ನೆಲದಿಂದ ಮರಕ್ಕೆ ನೆಗೆಯುವ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Vijaya Karnataka Web Wildlife Photography
| Screengrab from video | Courtesy : Susanta Nanda IFS/Twitter


Also Read : ಅಯ್ಯೋ... ಪುಟ್ಟ ಕಂದನನ್ನು ಎಳೆದೊಯ್ದ ಕೋತಿ...!

ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಸೆರೆಯಾದ ದೃಶ್ಯವಿದು. ವನ್ಯಜೀವಿ ಛಾಯಾಗ್ರಾಹಕ ಹರ್ಷ ನರಸಿಂಹಮೂರ್ತಿ ಅವರ ಕ್ಯಾಮೆರಾದಲ್ಲಿ ಸೆರೆಯಾದ ಕ್ಷಣವಿದು. ಸುಮಾರು ಎಂಟು ಸೆಕೆಂಡಿನ ಈ ದೃಶ್ಯವನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Also Read : ಪೆಟ್ಟಿಗೆಯಲ್ಲಿತ್ತು ಯುವತಿಯ ಶವ! : ಸಿನಿಮಾ ರೀತಿಯ ಕತೆಯಲ್ಲಿ ಹಂತಕ ಯಾರೆಂದೇ ಗೊತ್ತಿಲ್ಲ!

ನವಿಲುಗಳು ವಿಶಿಷ್ಟವಾದ ಉದ್ದದ ಗರಿಗಳನ್ನು ಹೊಂದಿರುತ್ತವೆ. ಹೀಗಾಗಿ, ಈ ಭಾರವನ್ನು ಹೊತ್ತು ನವಿಲುಗಳಿಗೆ ಹಾರಲು ಆಗುವುದಿಲ್ಲ. ಈ ಗರಿಗಳು ಸಾಮಾನ್ಯವಾಗಿ ಆರು ಅಡಿಗಳಷ್ಟು ಉದ್ದವಿರುತ್ತವೆ ಮತ್ತು ನವಿಲಿನ ದೇಹದ ಉದ್ದದ 60 ಪ್ರತಿಶತವನ್ನು ಈ ಗರಿಗಳೇ ಹೊಂದಿರುತ್ತವೆ. ಹೀಗಾಗಿ, ಮರದಿಂದ ಮರಕಷ್ಟೇ ಕಡಿಮೆ ಅಂತರದಲ್ಲಿ ಇವುಗಳು ಹಾರುತ್ತವೆ. ದೊಡ್ಡ ಗರಿಗಳನ್ನು ಹಿಡಿದು ನವಿಲುಗಳಿಗೆ ಹೆಚ್ಚು ದೂರ ಹಾರಲು ಸಾಧ್ಯವಾಗದೇ ಇರುವುದರಿಂದ ಅವುಗಳು ಹಾರುವುದೇ ಕಡಿಮೆ.

Also Read : 6 ತಿಂಗಳ ಗರ್ಭಿಣಿಯನ್ನು ಕೊಂದವರು ಯಾರು? : ಕೊನೆವರೆಗೂ ಸಿಗಲಿಲ್ಲ ಉತ್ತರ...!

ಹಳ್ಳಿಗಳ ಕಡೆ ಒಮ್ಮೊಮ್ಮೆ ಹೀಗೆ ನವಿಲುಗಳ ಹಾರುವ ದೃಶ್ಯ ಕಾಣಸಿಗುವುದಿದೆ. ಆದರೂ ಅದು ಅಪರೂಪವೇ. ಇದೇ ಕಾರಣಕ್ಕೆ ಈ ವಿಡಿಯೋ ಎಲ್ಲರಿಗೂ ಸಖತ್ ಇಷ್ಟವಾಗಿದೆ. ಅದರಲ್ಲೂ ಸ್ಲೋಮೋಷನ್‌ನಲ್ಲಿ ಈ ವಿಡಿಯೋ ಇರುವುದರಿಂದ ನವಿಲಿನ ಸೌಂದರ್ಯವನ್ನು ಇನ್ನಷ್ಟು ಸವಿಯುವ ಅವಕಾಶ ಇಲ್ಲಿದೆ. ಹೀಗಾಗಿಯೇ, ಈ ವಿಡಿಯೋವನ್ನು ಕಂಡ ಎಲ್ಲರೂ ಮೆಚ್ಚುಗೆಯ ಕಮೆಂಟ್‌ಗಳನ್ನು ಹಾಕಿದ್ದಾರೆ. ಅಲ್ಲದೆ, ಸೃಷ್ಟಿಯ ಸೊಬಗಿಗೆ ತಲೆಬಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ